ಸಾರಾಂಶ
ಪಡಿತರದಾರರಿಗೆ ತಲಾ ೫ ಕೆ.ಜಿ. ಅಕ್ಕಿಯನ್ನು ಸರ್ಕಾರ ನೀಡುತ್ತಿದೆ. ಆದರೆ, ಅದನ್ನು ಪಡೆಯಲು ಕೆಲಸ ಕಾರ್ಯ ಬಿಟ್ಟು, ಅಲೆಯಬೇಕಾಗಿದೆ. ಪಡಿತರ ಪಡೆಯದೆ, ಬಿಟ್ಟರೆ ನಮ್ಮ ಕಾರ್ಡ್ ರದ್ದಾಗುತ್ತದೆ. ಒಂದು ಕಡೆ ಪಡಿತರ ಪಡೆಯಲು ಆಗದೆ, ಬಿಡಲೂ ಆಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಜನ ದೂರಿದ್ದಾರೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪಡಿತರ ಪಡೆಯಲು ತಾಲೂಕಿನಲ್ಲಿ ರೈತರಿಗೆ ಸರ್ವರ್ ಅಡ್ಡಿಯಾಗಿದ್ದು, ಹಲವು ದಿನಗಳಿಂದ ಪಡಿತರ ಪಡೆಯಲು ಸಾರ್ವಜನಿಕರಿಗೆ ಸಾಧ್ಯವಾಗುತ್ತಿಲ್ಲ.ಬೆಳಗ್ಗಿನಿಂದಲೂ ಪಡಿತರ ಪಡೆಯಲು ಜನರು ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಸರ್ವರ್ ಸಿಕ್ಕರೂ, ಒಂದೆರಡು ಜನರಿಗೆ ಪಡಿತರ ನೀಡಿದ ತಕ್ಷಣ ಸಂಪರ್ಕ ವ್ಯತ್ಯಯ ಆಗುತ್ತಿರುವುದರಿಂದ ಜನರು ಹಿಡಿಶಾಪ ಹಾಕುತ್ತ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಪಡಿತರದಾರರಿಗೆ ತಲಾ ೫ ಕೆ.ಜಿ. ಅಕ್ಕಿಯನ್ನು ಸರ್ಕಾರ ನೀಡುತ್ತಿದೆ. ಆದರೆ, ಅದನ್ನು ಪಡೆಯಲು ಕೆಲಸ ಕಾರ್ಯ ಬಿಟ್ಟು, ಅಲೆಯಬೇಕಾಗಿದೆ. ಪಡಿತರ ಪಡೆಯದೆ, ಬಿಟ್ಟರೆ ನಮ್ಮ ಕಾರ್ಡ್ ರದ್ದಾಗುತ್ತದೆ. ಒಂದು ಕಡೆ ಪಡಿತರ ಪಡೆಯಲು ಆಗದೆ, ಬಿಡಲೂ ಆಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಜನ ದೂರಿದ್ದಾರೆ.......
ಈ ಭಾಗದಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುವವರೆ ಹೆಚ್ಚಾಗಿದ್ದು, ಈಗ ಕಾಫಿ ಕೊಯ್ಲು ಪ್ರಾರಂಭವಾಗಿದೆ. ಒಂದೆರಡು ತಿಂಗಳು ಕೂಲಿ ಕಾರ್ಮಿಕರು ಹೆಚ್ಚು ಸಂಪಾದನೆ ಮಾಡಲು ಅವಕಾಶ ಇದ್ದರೂ, ಮನೆಯಲ್ಲಿ ಒಂದು ಜನ ಪಡಿತರ ಪಡೆಯಲು ನಿಲ್ಲಬೇಕಾಗಿರುವುದು ಕಷ್ಟವಾಗಿದೆ.-ಪಾರ್ವತಿ, ಸ್ಥಳೀಯರು.
.....................ಸರ್ಕಾರ ಹಳೆಯ ತಂತ್ರಾಂಶ ಬದಲಿಸಿ, ನೂತನ ತಂತ್ರಾಂಶ ಅಳವಡಿಸಿದೆ. ಆದರೆ, ಇನ್ನೂ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಸರ್ವರ್ ಸಮಸ್ಯೆ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಸರಿಹೋಗಲಿದೆ.
-ಯಶಸ್ವಿನಿ, ಆಹಾರ ಇಲಾಖೆ ಆಹಾರ ನಿರೀಕ್ಷಕಿ.