ಸಂಘಗಳು ಸೇವಾಮನೋಭಾವದ ಉದ್ದೇಶವಿಟ್ಟುಕೊಂಡು ಕಾರ್ಯನಿರ್ವಹಿಸಿದಾಗ ಅವುಗಳು ಅಭಿವೃದ್ದಿಪಥದತ್ತ ಸಾಗುತ್ತವೆ ಎಂದು ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಂಘಗಳು ಸೇವಾಮನೋಭಾವದ ಉದ್ದೇಶವಿಟ್ಟುಕೊಂಡು ಕಾರ್ಯನಿರ್ವಹಿಸಿದಾಗ ಅವುಗಳು ಅಭಿವೃದ್ದಿಪಥದತ್ತ ಸಾಗುತ್ತವೆ ಎಂದು ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಹೋಟೆಲ್ ನಂದಿಇನ್ ಸಭಾಂಗಣದಲ್ಲಿ ಆಯೋಜಿಸಿದ್ದ ಐಗಿರಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನಾ ಸಮಾರಂಭದ ಸಾನ್ನಿದ್ಯ ವಹಿಸಿ ಮಾತನಾಡಿದರು.
ಮಾನವ ಮೂಲತ ಸಂಘಜೀವಿ, ಆತ ಎಲ್ಲರ ಜತೆ ಒಡನಾಟವಿಟ್ಟುಕೊಂಡಾಗ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ, ೧೯೦೫ರಲ್ಲಿ ಗದಗ ಜಿಲ್ಲೆಯವರಾದ ಎಸ್.ಎಸ್.ಪಾಟೀಲ್ ಸಣ್ಣದಾಗಿ ಪ್ರಾರಂಭಿಸಿದ ಸಹಕಾರಸಂಘ ಕಳೆದ ೧೨೦ ವರ್ಷಗಳಿಂದ ಹೆಮ್ಮರವಾಗಿ ಬೆಳೆದಿದೆ. ಇಂದಿನ ಪ್ರತಿಯೊಬ್ಬ ಸಹಕಾರಿಗಳು ಎಸ್.ಎಸ್.ಪಾಟೀಲರನ್ನು ನೆನಪು ಮಾಡಿಕೊಳ್ಳಬೇಕಿದೆ ಎಂದರು.ಸಹಕಾರ ಸಂಘಗಳ ಸ್ಥಾಪನೆ ಸುಲಭ, ಅವುಗಳನ್ನು ಉಳಿಸಿಕೊಂಡು ಹೋಗುವುದು ಕಷ್ಟ, ಸಮಾನಮನಸ್ಕರ ಒಡಗೂಡಿ ಸಂಘ ಲೋಕಾರ್ಪಣೆ ಮಾಡಿರುವುದು ಹೆಮ್ಮೆಯ ಸಂಗತಿ, ಮಕ್ಕಳ ಶಿಕ್ಷಣ, ಬಡವರು, ದೀನದಲಿತರ ಬದುಕು ಸುಧಾರಣೆಗೆ ಸಂಘ ಸಕಾಲಕ್ಕೆ ಸಾಲಸೌಲಭ್ಯ ಒದಗಿಸಬೇಕು ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಹಳೆಯ ಬಸ್ ನಿಲ್ದಾಣದ ಸಮೀಪದ ಮಾರಮ್ಮ ದೇವಸ್ಥಾನದ ಬಳಿಯ ಚಿರಂತ್ ಆರ್ಕೇಡ್ನಲ್ಲಿ ’ಐಗಿರಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಕಚೇರಿಯನ್ನು ಉದ್ಘಾಟಿಸಲಾಯಿತು.ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಚಾಮರಾಜನಗರ ದೀನಬಂಧು ಸಂಸ್ಥೆ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ್, ಸಂಘದ ಅಧ್ಯಕ್ಷ ದಿನೇಶ್ ಗುಪ್ತಾ, ಮಾಜಿ ಶಾಸಕ ಎಸ್.ಬಾಲರಾಜ್ , ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮೈಸೂರು ಪ್ರಾಂತೀಯ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಎನ್.ಬಲರಾಂ, ಉಪಾಧ್ಯಕ್ಷ ಆರ್.ಪಿ.ಸುರೇಶ್, ನಿರ್ದೇಶಕರಾದ ಮಹೇಶ್ಕುಮಾರ್, ನಟರಾಜ್ಗೌಡರು, ವಿಜಯಕುಲಾಲ್, ಎನ್.ಶಿವಕುಮಾರ್, ಸೂರ್ಯನಾರಾಯಣ, ಮಹೇಶ್ ಇತರರು ಭಾಗವಹಿಸಿದ್ದರು.