ಹಸಿದವರಿಗೆ ಅನ್ನ ನೀಡುವುದು, ರಾಜಕೀಯ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು, ರೋಗಿಗಳ ಚಿಕಿತ್ಸೆಗೆ ಸಹಕರಿಸುವುದು ಹಾಗೂ ವೃದ್ಧರು ಮತ್ತು ನಿರ್ಗತಿಕರಿಗೆ ಆಸರೆ ಆಗುವುದು ನಿಜವಾದ ಸಮಾಜ ಸೇವೆಯ ಪ್ರತೀಕಗಳಾಗಿವೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರದ ಅಗತ್ಯವಿಲ್ಲ. ಅವರ ನೋವಿಗೆ ಮಿಡಿಯುವ ಹೃದಯವಿದ್ದರೆ ಸಾಕು. ರಾಜಕೀಯಕ್ಕೆ ಪ್ರವೇಶಿಸದೆಯೂ ಸಮಾಜದಲ್ಲಿ ಅನೇಕ ಉತ್ತಮ ಕಾರ್ಯಗಳನ್ನು ಮಾಡಬಹುದು. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಮಾಡುವ ಸೇವೆಯೇ ಶ್ರೇಷ್ಠವಾದದು ಎಂದು ಗೋಪಾಲಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸಮಾಜದಲ್ಲಿ ಬದಲಾವಣೆ ತರಲು, ಬಡವರ ಕಣ್ಣೀರು ಒರೆಸಲು, ಅಸಹಾಯಕರಿಗೆ ನೆರವಾಗಲು ರಾಜಕೀಯ ಅಧಿಕಾರವಾಗಲಿ, ಪಕ್ಷಗಳ ಬೆಂಬಲವಾಗಲಿ ಅಗತ್ಯವಿಲ್ಲ. ಸೇವೆಗೆ ಬೇಕಿರುವುದು ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವಾ ಮನೋಭಾವ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಂ. ಎ. ಗೋಪಾಲಸ್ವಾಮಿ ಅಭಿಪ್ರಾಯಪಟ್ಟರು.ಪಟ್ಟಣದ ವೈದ್ಯ ನಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿನ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವೈದ್ಯ ಶಿಕ್ಷಣ ಸಂಸ್ಥೆಯ ಸಹ ಯೋಗದಲ್ಲಿ ಆಯೋಜಿಸಿದ್ದ ೭೧ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಮಾಜ ಸೇವೆ ಹೆಸರಿನಲ್ಲಿ ಪ್ರವೇಶಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ನಿಜವಾದ ಸಮಾಜ ಸೇವೆಗೆ ಪಕ್ಷ, ಜಾತಿ, ಧರ್ಮದ ಎಲ್ಲೆಗಳಿಲ್ಲ. ಹಸಿದವರಿಗೆ ಅನ್ನ ನೀಡುವುದು, ರಾಜಕೀಯ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು, ರೋಗಿಗಳ ಚಿಕಿತ್ಸೆಗೆ ಸಹಕರಿಸುವುದು ಹಾಗೂ ವೃದ್ಧರು ಮತ್ತು ನಿರ್ಗತಿಕರಿಗೆ ಆಸರೆ ಆಗುವುದು ನಿಜವಾದ ಸಮಾಜ ಸೇವೆಯ ಪ್ರತೀಕಗಳಾಗಿವೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರದ ಅಗತ್ಯವಿಲ್ಲ. ಅವರ ನೋವಿಗೆ ಮಿಡಿಯುವ ಹೃದಯವಿದ್ದರೆ ಸಾಕು. ರಾಜಕೀಯಕ್ಕೆ ಪ್ರವೇಶಿಸದೆಯೂ ಸಮಾಜದಲ್ಲಿ ಅನೇಕ ಉತ್ತಮ ಕಾರ್ಯಗಳನ್ನು ಮಾಡಬಹುದು. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಮಾಡುವ ಸೇವೆಯೇ ಶ್ರೇಷ್ಠವಾದದು ಎಂದು ಗೋಪಾಲಸ್ವಾಮಿ ಹೇಳಿದರು.ಕಸಾಪ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಯ ಉದ್ದೇಶದಿಂದ ಸ್ಥಾಪನೆ ಯಾದ ಕನ್ನಡ ಸಾಹಿತ್ಯ ಪರಿಷತ್ತು ಜಾತಿ, ಧರ್ಮ ಹಾಗೂ ಮತಭೇದಗಳಿಂದ ಮುಕ್ತವಾಗಿ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸ ಬೇಕಿದೆ ಎಂದರು. ಶ್ರೀ ಪುರ ವರ್ಗ ಹಿರೇಮಠದ ಪೀಠಾಧಿಪತಿ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಹುಟ್ಟುವಾಗ ಏನನ್ನೂ ತೆಗೆದುಕೊಂಡು ಬರುವುದಿಲ್ಲ, ಸಾಯು ವಾಗಲೂ ಏನನ್ನೂ ಕೊಂಡೊಯ್ಯುವುದಿಲ್ಲ. ಹುಟ್ಟು ಮತ್ತು ಸಾವಿನ ನಡುವಿನ ಅಮೂಲ್ಯ ಬದುಕಿನಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು. ಮನುಷ್ಯನ ಬದುಕು ಕೇವಲ ಸ್ವಾರ್ಥಕ್ಕೆ ಸಮಾಜ ಸೇವೆ ಮೂಲಕ ಸೀಮಿತವಾಗಬಾರದು. ಪರೋಪಕಾರ, ಧರ್ಮ, ಸಂಸ್ಕಾರ ಮತ್ತು ಇತರರಿಗೆ ಮಾದರಿಯಾಗಬೇಕು. ಬದುಕಿರು ವರ್ಷ ದಿನ ನಾವು ಮಾಡುವ ಕೆಲಸ ಕಾರ್ಯಗಳು ಸಮಾಜಕ್ಕೆ ಒಳಿತಾಗುವ ಕಾರ್ಯಗಳಾಗಿರಬೇಕು ಆ ಮೂಲಕ ನಾವು ಜೀವನದ ಮೌಲ್ಯವನ್ನು ಹೆಚ್ಚಿಸಿ ಕೊಳ್ಳಬೇಕು ಎಂದರು. ಕಾಂಗ್ರೆಸ್ ಮುಖಂಡ ಅಣತಿ ಆನಂದ್, ಟಿಎಪಿಸಿಎಂಎಸ್ ಅಧ್ಯಕ್ಷ ತೋಟಿ ನಾಗರಾಜು, ನಿರ್ದೇಶಕರಾದ ಅನಿಲ್ ಮರಗೂರು ಮತ್ತು ರಮೇಶ್ ಕುಂಬಾರಹಳ್ಳಿ, ಸಾಹಿತಿ ಕೆಂಪಯ್ಯ ಬೆಳಗುಲಿ, ಉಪನ್ಯಾಸಕರಾದ ಸಿದ್ದೇಗೌಡ ಮತ್ತು ಕೃಷ್ಣೇಗೌಡ, ವೈದ್ಯ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಬಿ. ಎಲ್. ಅರುಣ್ ಕುಮಾರ್, ಕೃಷ್ಣ, ಪ್ರಮೋದ್ ಹರೀಸಾವೆ, ಜಬೀಉಲ್ಲಾಬೇಗ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬೊಮ್ಮೇಗೌಡ, ಯಶೋದಜೈನ್, ರೂಪ ಇತರರು ಇದ್ದರು.====ಫೋಟೋ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿವೃತ್ತ ಅಪರ ಜಿಲ್ಲಾಧಿಕಾರಿ ಎಚ್. ಎಂ.ನಾಗಪ್ಪ, ಜಾನಪದ ಕಲಾವಿದ ಶ್ರವಣೇರಿ ನಿಂಗಪ್ಪ, ಸಮಾಜ ಸೇವಕ ವಿಜಯ ನಾಗಣ್ಣ, ಕೃಷಿ ಕ್ಷೇತ್ರದ ಸಾಧಕ ಕೃಷ್ಣಮೂರ್ತಿ ಹೊಸಳ್ಳಿ ಹಾಗೂ ಕಲಾವಿದ ಸಿ.ಎನ್. ಗಿರೀಶ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.