ಸೇವಾ ನ್ಯೂನ್ಯತೆ - ಎಸ್‌.ಎಸ್‌.ವಿ. ಶೇಲ್ರ್ಸ್ ಕಂಪನಿಗೆ ದಂಡ

| Published : Dec 21 2023, 01:15 AM IST / Updated: Dec 21 2023, 01:16 AM IST

ಸೇವಾ ನ್ಯೂನ್ಯತೆ - ಎಸ್‌.ಎಸ್‌.ವಿ. ಶೇಲ್ರ್ಸ್ ಕಂಪನಿಗೆ ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ಸೇವಾ ನ್ಯೂನ್ಯತೆ ಎಸಗಿದ ಎಸ್‌.ಎಸ್‌.ವಿ. ಶೇಲ್ರ್ಸ್ ಕಂಪನಿಗೆ ಬಡ್ಡಿಯೊಂದಿಗೆ ರು. 8. 50 ಲಕ್ಷ ಹಣ ಹಿಂದಿರುಗಿಸಲು ಜಿಲ್ಲಾ ಗ್ರಾಹಕರ ಆಯೋಗದ ಆದೇಶ ಮಾಡಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಸೇವಾ ನ್ಯೂನ್ಯತೆ ಎಸಗಿದ ಎಸ್‌.ಎಸ್‌.ವಿ. ಶೇಲ್ರ್ಸ್ ಕಂಪನಿಗೆ ಬಡ್ಡಿಯೊಂದಿಗೆ ₹8. 50 ಲಕ್ಷ ಹಣ ಹಿಂದಿರುಗಿಸಲು ಜಿಲ್ಲಾ ಗ್ರಾಹಕರ ಆಯೋಗದ ಆದೇಶ ಮಾಡಿದೆ. ಹುಬ್ಬಳ್ಳಿಯ ವಿದ್ಯಾನಗರದ ವಿಜಯಕುಮಾರ ಬಗಾಡೆ ಎಂಬುವವರು 2013ರಲ್ಲಿ ಹುಬ್ಬಳ್ಳಿಯ ವಾಣಿಜ್ಯ ಮಳಿಗೆಯಲ್ಲಿ ವ್ಯಾಪಾರ ಮಾಡಲು ಇಚ್ಚಿಸಿ ಎಸ್‌.ಎಸ್‌.ವಿ. ಶೇಲ್ರ್ಸ್‌ ಕಂಪನಿ ನಿರ್ಮಿಸುತ್ತಿದ್ದ ಹುಬ್ಬಳ್ಳಿ ಸೆಂಟರ್‌ನಲ್ಲಿ 165 ಚದರ ಅಡಿ ವಿರ್ಸ್ತಿಣದ ಮಳಿಗೆ ಖರೀದಿಸಲು ₹8.50 ಲಕ್ಷಕ್ಕೆ 2013ರ ಫೆಬ್ರವರಿ ತಿಂಗಳಲ್ಲಿ ಒಪ್ಪಂದ ಪತ್ರ ಮಾಡಿಕೊಂಡಿದ್ದರು. ನಿಗದಿತ ಅವಧಿಯಲ್ಲಿ ಕಬ್ಜಾ ನೀಡದೇ ಖರೀದಿ ಪತ್ರ ಸಹ ಮಾಡಿಕೊಟ್ಟಿರಲಿಲ್ಲ. ಎಸ್.ಎಸ್.ವಿ. ಶೇಲ್ರ್ಸ್ ಅವರ ವಿರುದ್ಧ ವಿಜಯಕುಮಾರ ಅವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ದೂರುದಾರರು ಸಂದಾಯ ಮಾಡಿದ ₹8.50 ಲಕ್ಷ ಮತ್ತು ಅದರ ಮೇಲೆ 2013ರ ಫೆಬ್ರವರಿ ತಿಂಗಳಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ. 8ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ₹50 ಸಾವಿರ ಹಾಗೂ ಪ್ರಕರಣದ ಖರ್ಚು ವೆಚ್ಚವೆಂದು ₹10 ಸಾವಿರ ನೀಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.