ಸಾರಾಂಶ
ಎಲ್ಲಿಯವರೆಗೆ ಬಡವರು ಕಣ್ಣೀರಿನಿಂದ ಬಳಲುತ್ತಾರೋ ಅಲ್ಲಿಯವರೆಗೆ ಸ್ವಾತಂತ್ರ್ಯಕ್ಕೆ ಬೆಲೆ ಇರಲಾರದು. ದೇಶಸೇವೆ ಎಂದರೆ ನೊಂದವರ ಸೇವೆಯೇ ಆಗಿದೆ ಎಂಬ ನೆಹರೂಜಿ ಮಾತು ಅಕ್ಷರಶಃ ಸತ್ಯ ಎಂದು ತಹಸೀಲ್ದಾರ್ ರಾಜೇಶ್ ಕುಮಾರ್ ಹೇಳಿದರು. ನಗರದ ನೆಹರೂ ಮೈದಾನದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ಎಲ್ಲಿಯವರೆಗೆ ಬಡವರು ಕಣ್ಣೀರಿನಿಂದ ಬಳಲುತ್ತಾರೋ ಅಲ್ಲಿಯವರೆಗೆ ಸ್ವಾತಂತ್ರ್ಯಕ್ಕೆ ಬೆಲೆ ಇರಲಾರದು. ದೇಶಸೇವೆ ಎಂದರೆ ನೊಂದವರ ಸೇವೆಯೇ ಆಗಿದೆ ಎಂಬ ನೆಹರೂಜಿ ಮಾತು ಅಕ್ಷರಶಃ ಸತ್ಯ ಎಂದು ತಹಸೀಲ್ದಾರ್ ರಾಜೇಶ್ ಕುಮಾರ್ ಹೇಳಿದರು. ನಗರದ ನೆಹರೂ ಮೈದಾನದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಸ್ವಾತಂತ್ರ್ಯ ತ್ಯಾಗ ಬಲಿದಾನದ ಸಂಕೇತ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರಾದ ಕೋವೆರಹಟ್ಟಿ ಗೋವಿಂದಪ್ಪ, ಮರಡಿಹಳ್ಳಿ ಭೀಮಪ್ಪ, ಹನುಮಂತಪ್ಪರವರನ್ನು ಸನ್ಮಾನಿಸಿ ಗೌರವ ಸಮರ್ಪಸಿದ್ದೇವೆ. ಅಸಮಾನತೆ, ಶೋಷಣೆಯ ಅವಧಿ ಮುಗಿದು ಹೊಸ ಮನ್ವoತರವನ್ನು ಭಾರತ ಪ್ರವೇಶಿಸಿದೆ ಎಂದರು.
ಈ ವೇಳೆ 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಜಾನಪದ ಕಲಾವಿದ ಹೆಚ್ ಎಸ್ ಮಾರುತೇಶ್, ಶ್ರಮವೀರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಶಫಿವುಲ್ಲಾ, ನೃತ್ಯ ಶಿಕ್ಷಕ ಮಹೇಶ್, ಭಾರತ್ ಸೇವಾದಳದ ಸೇವೆಗಾಗಿ ಡಿಜಿ ಶ್ರೀನಿವಾಸ್, ಕಮಲಮ್ಮ ಹಾಗೂ ಅಂಗಾoಗ ದಾನ ಮಾಡಿದ ಎಸ್ ಆಕಾಶ್ ರವರ ಕುಟುಂಬದವರಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ, ಇಓ ಸತೀಶ್ ಕುಮಾರ್, ಡಿವೈಎಸ್ ಪಿ ಚೈತ್ರಾ, ಟಿಹೆಚ್ ಓ ಡಾ. ವೆಂಕಟೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.