ಚಿಕ್ಕಪೇಟೆಯಿಂದ ಕೊಡವ ಸಮಾಜಕ್ಕೆ ಸೇರುವ ರಸ್ತೆವರೆಗಿನ ಬಹುತೇಕ ಮನೆಗಳ ವಿದ್ಯುತ್ ಸರ್ವೀಸ್ ವೈರ್ ಅನ್ನು ಶುಕ್ರವಾರ ರಾತ್ರಿ ನಡೆದ ಗೌರಿ ಗಣೇಶ ವಿಸರ್ಜನೋತ್ಸವ ಸಂದರ್ಭದಲ್ಲಿ ತುಂಡರಿಸಲಾಗಿದ್ದು, ವಿದ್ಯುತ್ ಸಂಚಾರ ಸ್ಥಗಿತಗೊಂಡಿತ್ತು.

ವಿರಾಜಪೇಟೆ; ಚಿಕ್ಕಪೇಟೆಯಿಂದ ಕೊಡವ ಸಮಾಜಕ್ಕೆ ಸೇರುವ ರಸ್ತೆವರೆಗಿನ ಬಹುತೇಕ ಮನೆಗಳ ವಿದ್ಯುತ್ ಸರ್ವೀಸ್ ವೈರ್ ಅನ್ನು ಶುಕ್ರವಾರ ರಾತ್ರಿ ನಡೆದ ಗೌರಿ ಗಣೇಶ ವಿಸರ್ಜನೋತ್ಸವ ಸಂದರ್ಭದಲ್ಲಿ ತುಂಡರಿಸಲಾಗಿದ್ದು, ವಿದ್ಯುತ್ ಸಂಚಾರ ಸ್ಥಗಿತಗೊಂಡಿತ್ತು.

ಮೆರವಣಿಗೆಯ ಸಂದರ್ಭಹರಿತವಾದ ದೊಡ್ಡ ಗಾತ್ರದ ಕತ್ತರಿಯಿಂದ ಉತ್ಸವ ಸಮಿತಿಯ ಮಂಟಪದಲ್ಲಿದ್ದವರು ರಸ್ತೆಯಲ್ಲಿ ಅಡ್ಡಲಾಗಿದ್ದ ಮನೆಯ ಸರ್ವಿಸ್ ವೈರ್ ಗಳನ್ನು ತುಂಡರಿಸಿ ಡಿ.ಜೆ.ಯ ಬಾಕ್ಸ್ ಹೊತ್ತ ಲಾರಿ ಸಂಚರಿಸುವಂತೆ ಮಾಡಿದ ಪರಿಣಾಮ ಇದೀಗ ಈ ಭಾಗದ ಬಹುತೇಕ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ಬವಣೆ ಪಡುವಂತಾಗಿದೆ. ತಮ್ಮ ಸ್ವಂತ ಖರ್ಚಿನಿಂದ ಮತ್ತೆ ಪುನಃ ಈ ಸರ್ವಿಸ್ ವೈರ್ ಅಳವಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರಿಂದ ಇಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಇಲಾಖೆಯವರು ಸೂಕ್ತ ಕ್ರಮ ಕೈಗೊಂಡು ತನಿಖೆ ನಡೆಸಿ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆ ಇಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ.