ರಾಮನಗರ: ರಾಜಕರಣಕ್ಕೆ ಇರುವ ಅಪರಿಮಿತವಾದ ಶಕ್ತಿಯನ್ನು ಜನಸೇವೆಗೆ ಬಳಸಿಕೊಂಡರೆ ಹೇಗಿರುತ್ತದೆ ಎಂಬುದನ್ನು ಕೆ.ಶೇಷಾದ್ರಿ (ಶಶಿ) ಅವರು ನಗರಸಭೆ ಅಧ್ಯಕ್ಷರಾಗಿ ತೋರಿಸುತ್ತಿದ್ದಾರೆ. ನಾಗರೀಕರಿಗೆ ಮೂಲ ಸೌಕರ್ಯ ಮಾತ್ರವಲ್ಲದೆ ಶ್ರಮಿಕ ವರ್ಗದವರಿಗೆ ಅನುಕೂಲ ಮಾಡಿಕೊಟ್ಟಿರುವುದು ಇದಕ್ಕೆ ನಿದರ್ಶನ ಎಂದು ಸಾಹಿತಿ ಡಾ.ಬೈರಮಂಗಲ ರಾಮೇಗೌಡ ಹೇಳಿದರು.

ರಾಮನಗರ: ರಾಜಕರಣಕ್ಕೆ ಇರುವ ಅಪರಿಮಿತವಾದ ಶಕ್ತಿಯನ್ನು ಜನಸೇವೆಗೆ ಬಳಸಿಕೊಂಡರೆ ಹೇಗಿರುತ್ತದೆ ಎಂಬುದನ್ನು ಕೆ.ಶೇಷಾದ್ರಿ (ಶಶಿ) ಅವರು ನಗರಸಭೆ ಅಧ್ಯಕ್ಷರಾಗಿ ತೋರಿಸುತ್ತಿದ್ದಾರೆ. ನಾಗರೀಕರಿಗೆ ಮೂಲ ಸೌಕರ್ಯ ಮಾತ್ರವಲ್ಲದೆ ಶ್ರಮಿಕ ವರ್ಗದವರಿಗೆ ಅನುಕೂಲ ಮಾಡಿಕೊಟ್ಟಿರುವುದು ಇದಕ್ಕೆ ನಿದರ್ಶನ ಎಂದು ಸಾಹಿತಿ ಡಾ.ಬೈರಮಂಗಲ ರಾಮೇಗೌಡ ಹೇಳಿದರು.

ನಗರದಲ್ಲಿ ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ಸಾರ್ಥಕ ಸೇವೆಯ ಸಮರ್ಪಣೆ ಜನಾಶೀರ್ವಾದಕ್ಕೆ ವರ್ಷದ ನಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ನಡುವಿನಿಂದ ರೂಪುಗೊಂಡವರು ನಿಜವಾದ ಜನನಾಯಕರು. ಇದಕ್ಕೆ ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಸ್ಪಷ್ಟ ಉದಾಹರಣೆ ಎಂದರು.

ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಸಮಾಜವನ್ನು ಅರ್ಥ ಮಾಡಿಕೊಂಡವರು, ಸಾಂಸ್ಕೃತಿಕ ಸಂವೇದನೆ ಉಳ್ಳವರು, ಸಮಾಜದ ಮುನ್ನಡೆಗೆ ಕಾರಣರಾಗುತ್ತಾರೆ. ಇಂತಹ ವ್ಯಕ್ತಿತ್ವವನ್ನು ಶೇಷಾದ್ರಿ ಹೊಂದಿದ್ದಾರೆ. ಬಡವರು, ದಮನಿತರು ಹಾಗೂ ಸೌಲಭ್ಯ ವಂಚಿತರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬದ್ಧತೆವುಳ್ಳವರನ್ನು ಜನರು ತಮ್ಮ ನಾಯಕರೆಂದು ಪರಿಗಣಿಸುತ್ತಾರೆ. ರಾಜಕಾರಣಿಗಳಿಗೆ ಸಜ್ಜನಿಕೆ ಗುಣವೂ ಇರಬೇಕು. ಇದೆಲ್ಲವೂ ಶೇಷಾದ್ರಿ ಅವರಲ್ಲಿದೆ ಎಂದರು.

ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಕ್ಷೇತ್ರದಲ್ಲಿ ಪರಕೀಯತೆಯನ್ನು ನೋಡಿಕೊಂಡು ಬರುತ್ತಿದ್ದೇವೆ. ಆದರೆ, ಶೇಷಾದ್ರಿ ಅಧಿಕಾರ ವಹಿಸಿಕೊಂಡ ನಂತರ ಕಾಡುತ್ತಿದ್ದ ಅನಾಥ ಪ್ರಜ್ಞೆ ತೊಲಗಿ ಆಶ್ರಯ ಪ್ರಜ್ಞೆ ಮನೆ ಮಾಡಿದೆ. ಯಾವುದೇ ಪ್ರದೇಶದವರಿಗೆ ಮತ ಕೊಟ್ಟು ಸಾಕಾಗಿದೆ. ಇನ್ನಾದರು ವಿಧಾನಸೌಧದಲ್ಲಿ ಕೂರುವ ಒಂದು ಶಕ್ತಿ ನಮ್ಮಲ್ಲೂ ಇದೆ ಎಂಬುದನ್ನು ತೋರಿಸಿಕೊಡಬೇಕಾಗಿದೆ ಎಂದರು.

ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಜನತೆಗೆ ಕೃತಜ್ಞತೆ ಅರ್ಪಿಸಿ ಮುಂದಿನ ಒಂದು ವರ್ಷಲ ನಗರದ ಅಭಿವೃದ್ಧಿಗೆ ಜನತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಚನ್ನಪಟ್ಟಣ ಕ್ಷೇತ್ರದ ಶಾಸಕ ಯೋಗೇಶ್ವರ್, ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ ಎಂ.ಸಿ.ಅಶ್ವಥ್, ಎ.ಮಂಜುನಾಥ್, ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಬಿಡದಿ ಪುರಸಭೆ ವಿಪಕ್ಷ ನಾಯಕ ಉಮೇಶ್, ಬಂಜಾರ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ, ಕಾಂಗೋರು ಆಸ್ಪತ್ರೆಯ ಮುಖ್ಯಸ್ಥ ಡಾ. ಶೇಖರ್ ಸುಬ್ಬಯ್ಯ, ಮುಖಂಡರಾದ ಎಲ್.ಚಂದ್ರಶೇಖರ್, ಸಾಹುಕಾರ್ ಅಮ್ಜದ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮತ್ತು ಕನ್ನಡ ಪರ ಸಂಘಟನೆಗಳ ಪ್ರಮುಖರು ಶೇಷಾದ್ರಿ ಅವರಿಗೆ ಶುಭ ಕೋರಿದರು.

22ಕೆಆರ್ ಎಂಎನ್ 6.ಜೆಪಿಜಿ

ರಾಮನಗರದಲ್ಲಿ ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ಸಾರ್ಥಕ ಸೇವೆಯ ಸಮರ್ಪಣೆ ಜನಾಶೀರ್ವಾದಕ್ಕೆ ವರ್ಷದ ನಡೆ ಕಾರ್ಯಕ್ರಮದಲ್ಲಿ ಅತಿಥಿಗಳು ಪಾಲ್ಗೊಂಡಿರುವುದು.