ಲೋ ವೋಲ್ಟೇಜ್‌ ದೂರಿನ ಹಿನ್ನೆಲೆಯಲ್ಲಿ ಸೆಸ್ಕ್‌ ವತಿಯಿಂದ ನೂತನ ಪರಿವರ್ತಕ ಅಳವಡಿಸಿ ಸಮಸ್ಯೆ ಪರಿಹರಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪದ ಪಂಪ ಹೌಸ್ ಭಾಗದಲ್ಲಿ ಲೋ ವೋಲ್ಟೇಜ್ ಬಗ್ಗೆ ದಶಕಗಳಿಂದ ಜನತೆಯ ದೂರಿನ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಸೆಸ್ಕ್ ವತಿಯಿಂದ ನೂತನ ಪರಿವರ್ತಕ ಅಳವಡಿಸಿ ಸಮಸ್ಯೆ ಪರಿಹರಿಸಲಾಯಿತು. ಕಳೆದ 2 ದಶಕಗಳಿಗೂ ಹೆಚ್ಚು ಕಾಲದಿಂದ ಸುಂಟಿಕೊಪ್ಪದ ಪಂಪ ಹೌಸ್ ಬಡಾವಣೆಯಲ್ಲಿ ಲೋವೋಲ್ಟೇಜ್‌ನಿಂದಾಗಿ ಸಾಕಷ್ಟು ತೊಂದರೆ, ಮಕ್ಕಳ ವಿದ್ಯಾರ್ಜನೆಗೂ ಸಮಸ್ಯೆ ಎದುರಾಗುತ್ತಿತ್ತು. ಇದರಿಂದ ಈ ಭಾಗದ ನಿವಾಸಿಗಳು ಪಂಚಾಯಿತಿ, ಸೆಸ್ಕ್ ಇಲಾಖೆ ದೂರು ನೀಡಿ ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಬೇಡಿಕೆ ಸಲ್ಲಿಸಿದರು. ಸಮಸ್ಯೆ ಮನಗಂಡ ಸಂಬಂಧಿಸಿದ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಪಂಪ್‌ಹೌಸ್ ಬಡಾವಣೆಯಲ್ಲಿ ಸೆಸ್ಕ್ ಇಲಾಖೆಯ ಕಿರಿಯ ಇಂಜಿನಿಯರ್ ಲವಕುಮಾರ್ ನೂತನವಾದ 63 ಕೆ.ವಿ ಸಾಮ್ಯರ್ಥದ ಪರಿವರ್ತಕವನ್ನು ಅಳವಡಿಸಿ ಚಾಲನೆ ಗೊಳಿಸಿದರು.ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಸುನಿಲ್ ಕುಮಾರ್, ಈ ವಿಭಾಗದ ಸದಸ್ಯರಾದ ಬಿ.ಎಂ.ಸುರೇಶ್, ವಸಂತಿ ಹಾಗೂ ಭಾಗದ ನಿವಾಸಿಗಳು ಸೆಸ್ಕ್ ಇಲಾಖೆ ಕಿರಿಯ ಇಂಜಿನಿಯರ್ ಲವಕುಮಾರ್ ಹಾಗೂ ಸಿಬ್ಬಂದಿ ಸೇವೆ ಪ್ರಶಂಸಿಸಿದರು.