ದುಡಿದ ಹಣದಲ್ಲಿ ಸಮಾಜಕ್ಕೆ ಸ್ಪಲ್ಪ ಮೀಸಲಿಡಿ

| Published : Aug 10 2025, 01:30 AM IST

ಸಾರಾಂಶ

ದಾಬಸ್‍ಪೇಟೆ: ಪ್ರತಿಯೊಬ್ಬ ವ್ಯಕ್ತಿಯೂ ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಪ್ರಗತಿಗಾಗಿ ಮೀಸಲಿಡಬೇಕು ಎಂದು ಜ್ಞಾನಸಂಗಮ ಪಿಯು ಕಾಲೇಜಿನ ಸಂಸ್ಥಾಪಕ ಕುಮಾರಸ್ವಾಮಿ ತಿಳಿಸಿದರು.

ದಾಬಸ್‍ಪೇಟೆ: ಪ್ರತಿಯೊಬ್ಬ ವ್ಯಕ್ತಿಯೂ ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಪ್ರಗತಿಗಾಗಿ ಮೀಸಲಿಡಬೇಕು ಎಂದು ಜ್ಞಾನಸಂಗಮ ಪಿಯು ಕಾಲೇಜಿನ ಸಂಸ್ಥಾಪಕ ಕುಮಾರಸ್ವಾಮಿ ತಿಳಿಸಿದರು. ಪಟ್ಟಣದ ಜ್ಞಾನಸಂಗಮ ಪಿಯು ಕಾಲೇಜಿನಲ್ಲಿ ಬೆಂಗಳೂರಿನ ಸ್ಪೂರ್ತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಕಾಲೇಜು ಬ್ಯಾಗ್ ಹಾಗೂ ನಗದು ಹಣ ವಿತರಿಸಿ ಮಾತನಾಡಿದರು. ಉಪನ್ಯಾಸಕ ರಾಕೇಶ್ ಕುಮಾರ್ ಮಾತನಾಡಿ, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಸಮಾಜದ ಏಳಿಗೆಗೆ ನಿರಾಶ್ರಿತರಿಗೆ, ಬಡ ಮಕ್ಕಳಿಗೆ, ಅನಾಥಾಶ್ರಮಗಳಿಗೆ, ಅಂಗವಿಕಲರಿಗೆ ಹಾಗು ವೃದ್ಧಾಶ್ರಮಗಳಿಗೆ ಸಹಾಯ ಮಾಡಿಕೊಂಡು ಬರುತ್ತಿರುವ ಸ್ಪೂರ್ತಿ ಚಾರಿಟಬಲ್ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.

ಪೋಟೋ 1 : ದಾಬಸ್‍ಪೇಟೆಯ ಜ್ಞಾನಸಂಗಮ ಪಿಯು ಕಾಲೇಜಿನಲ್ಲಿ ಬೆಂಗಳೂರಿನ ಸ್ಪೂರ್ತಿ ಚಾರಿಟಬಲ್ ಟ್ರಸ್ಟ್ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್ ಗಳನ್ನು ವಿತರಿಸಿತು. ಕಾಲೇಜಿನ ಸಂಸ್ಥಾಪಕ ಕುಮಾರಸ್ವಾಮಿ, ಉಪನ್ಯಾಸಕ ರಾಕೇಶ್ ಕುಮಾರ್, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.