ರಾಷ್ಟ್ರೀಯ ಬಸವ ಸೈನ್ಯದಿಂದ ಸೇವಾಲಾಲ ಜಯಂತಿ ಆಚರಣೆ

| Published : Feb 16 2024, 01:45 AM IST

ರಾಷ್ಟ್ರೀಯ ಬಸವ ಸೈನ್ಯದಿಂದ ಸೇವಾಲಾಲ ಜಯಂತಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸೇವಾಲಾಲ ಒಬ್ಬ ದನಗಾಹಿಯಾಗಿದ್ದರೂ ಜೀವನದ ಅನುಭವವನ್ನು ತತ್ವದ ಮೂಲಕ ಭೋದಿಸಿ ಜನರಲ್ಲಿದ್ದ ಅಜ್ಞಾನ ದೂರ ಮಾಡಿದ ಮಹಾನ ದಾರ್ಶನಿಕ ಎಂದು ರಾಷ್ಟೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.

ಬಸವನಬಾಗೇವಾಡಿ: ಸೇವಾಲಾಲ ಒಬ್ಬ ದನಗಾಹಿಯಾಗಿದ್ದರೂ ಜೀವನದ ಅನುಭವವನ್ನು ತತ್ವದ ಮೂಲಕ ಭೋದಿಸಿ ಜನರಲ್ಲಿದ್ದ ಅಜ್ಞಾನ ದೂರ ಮಾಡಿದ ಮಹಾನ ದಾರ್ಶನಿಕ ಎಂದು ರಾಷ್ಟೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.

ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ ವೃತ್ತದಲ್ಲಿ ರಾಷ್ಟೀಯ ಬಸವ ಸೈನ್ಯದಿಂದ ಹಮ್ಮಿಕೊಂಡಿದ್ದ ಸೇವಾಲಾಲ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಸಾಗಿ ಎಂದು ಸಾರಿದವರು. ಇದಲ್ಲದೇ ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ ಎನ್ನುವ ಅವರ ಬೋಧನೆಗಳು ಬಂಜಾರಾ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.

ರಾಷ್ಟೀಯ ಬಸವಸೈನ್ಯದ ಮುಖಂಡ ಶ್ರೀಕಾಂತ ಕೋಟ್ರಶೆಟ್ಟಿ, ಸುನೀಲಗೌಡ ಚಿಕ್ಕೊಂಡ, ನಿಂಗಪ್ಪ ಅವಟಿ, ಮನ್ನಾನ ಶಾಬಾದಿ, ಸುರೇಶ ದೇಸಾಯಿ, ಸಂಗಮೇಶ ಕಲ್ಲೂರ, ಮಂಜುನಾಥ ಜಾಲಗೇರಿ, ಮಹೇಶ ಹೆರಕಲ್, ವಿಶ್ವನಾಥ ಗಬ್ಬೂರ, ಮಾಂತೇಶ ಹೆಬ್ಬಾಳ, ಶಂಕರ ರಜಪೂತ, ಶ್ರೀಧರ ಕುಂಬಾರ, ಶಂಕರಗೌಡ ಚಿಕ್ಕೊಂಡ, ಬಸನಗೌಡ ಪಾಟೀಲ, ರವಿ ರಾಠೋಡ, ದೇವೇಂದ್ರ ಚವ್ಹಾಣ, ಕಾಶೀನಾಥ ರಾಠೋಡ, ಮಹಾದೇವ ನಾಯ್ಕೋಡಿ, ಧನಸಿಂಗ ರಾಠೋಡ ಸೇರಿದಂತೆ ಇತರರು ಇದ್ದರು.