ಸಾರಾಂಶ
ದೇಶದ ಬಂಜಾರ ಸಮುದಾಯದ ಏಕೈಕ ಜಗದ್ಗುರು ಸಂತ ಸೇವಾಲಾಲ್ ಜನ್ಮಸ್ಥಳ ತಾಲೂಕಿನ ಚಿನ್ನಿಕಟ್ಟೆ ಸಮೀಪದ ಸೂರಗೊಂಡನಕೊಪ್ಪ ಭಾಯಗಡ್‌ದಲ್ಲಿ ಸಂತ ಸೇವಾಲಾಲ್‌ರ 286ನೇ ಜಯಂತ್ಯುತ್ಸವ ಶನಿವಾರ ಮುಂಜಾನೆ ಭೋಗ್ (ಹೋಮಕುಂಡ ಪೂಜೆ) ಮಹಾಪೂಜೆ ಹಾಗೂ ಪೂರ್ಣಾಹುತಿ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.
- ಬಿಳಿವಸ್ತ್ರ, ರುದ್ರಾಕ್ಷಿ ಧರಿಸಿದ್ದ ಮಾಲಾಧಾರಿಗಳಿಂದ ದೇಗುಲಕ್ಕೆ ಇಡುಗಂಟು ಅರ್ಪಣೆ- - - ಕನ್ನಡಪ್ರಭ ವಾರ್ತೆ ನ್ಯಾಮತಿ
ದೇಶದ ಬಂಜಾರ ಸಮುದಾಯದ ಏಕೈಕ ಜಗದ್ಗುರು ಸಂತ ಸೇವಾಲಾಲ್ ಜನ್ಮಸ್ಥಳ ತಾಲೂಕಿನ ಚಿನ್ನಿಕಟ್ಟೆ ಸಮೀಪದ ಸೂರಗೊಂಡನಕೊಪ್ಪ ಭಾಯಗಡ್‌ದಲ್ಲಿ ಸಂತ ಸೇವಾಲಾಲ್‌ರ 286ನೇ ಜಯಂತ್ಯುತ್ಸವ ಶನಿವಾರ ಮುಂಜಾನೆ ಭೋಗ್ (ಹೋಮಕುಂಡ ಪೂಜೆ) ಮಹಾಪೂಜೆ ಹಾಗೂ ಪೂರ್ಣಾಹುತಿ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.ಶನಿವಾರ ಬೆಳಗ್ಗೆ ಸೇವಾಲಾಲ್ ಜನ್ಮಸ್ಥಳದಲ್ಲಿ ನಾಗರಕಟ್ಟೆ, ಭೋಗ್ ಕಟ್ಟೆ ಆವರಣಕ್ಕೆ ಅಲಂಕೃತ ಪಲ್ಲಕ್ಕಿಯಲ್ಲಿ ಮರಿಯಮ್ಮ ದೇವಿ ಮತ್ತು ಸೇವಾಲಾಲ್ ಉತ್ಸವ ಮೂರ್ತಿಗಳನ್ನು ತರಲಾಯಿತು. ಬಂಜಾರ ಮಾಲಾಧಾರಿಗಳು ಬಿಳಿವಸ್ತ್ರ, ರುದ್ರಾಕ್ಷಿ ಧರಿಸಿದ್ದರು. 21 ದಿನ 11 ದಿನ ಮತ್ತು 5 ದಿನ ಕಾಲ ವ್ರತ ಕೈಗೊಂಡ ಮಾಲಾಧಾರಿಗಳು ಇಡುಗಂಟನ್ನು ದೇಗುಲದ ಸೇವಾನಾಯ್ಕ ಮತ್ತು ಮರಿಯಮ್ಮ ದೇಗುಲದ ಅರ್ಚಕ ಮಂಜುನಾಥ ನಾಯ್ಕ ಪೌರೋಹಿತ್ಯದಲ್ಲಿ ಲೋಕಾಕಲ್ಯಾಣಾರ್ಥ ಪ್ರಾರ್ಥನೆ ಸಲ್ಲಿಸಿ ಅರ್ಪಿಸಿದರು.
ಲಿಂಗಸೂರು ಸಿದ್ಧಲಿಂಗ ಸ್ವಾಮೀಜಿ, ಕೊಡಗಲಿ ಶಂಕರ ಮಹಾರಾಜ್, ತಿಪ್ಪೇಸ್ವಾಮಿ ಮಹಾರಾಜ್, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ, ವಿಧಾನಸಭೆಯ ಉಪ ಸಭಾಪತಿ ರುದ್ರಪ್ಪ ಲಮಾಣಿ, ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಜಯದೇವ್ ನಾಯ್ಕ, ಮಹಾಮಠ ನಿರ್ವಹಣಾ ಸಮಿತಿ ಅಧ್ಯಕ್ಷ ಹನುಮಂತ ನಾಯ್ಕ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿದರ್ಕಶಕ ಎನ್.ರಾಜು, ರಾಘವೇಂದ್ರ ನಾಯ್ಕ, ಚಂದ್ರಸೇನ ಜವ್ಹಾಣ, ಎಸ್.ಎನ್. ಗೋಪಾಲ ನಾಯ್ಕ, ಭೋಜ್ಯನಾಯ್ಕ, ಭೋಪಾಲ ನಾಯ್ಕ, ಶ್ರೀನಿವಾಸ ನಾಯ್ಕ, ರೇಣುನಾಯ್ಕ, ರಾಮನಾಯ್ಕ, ಹೊನ್ನಾಳಿ ಉಪವಿಭಾಗಾಧಿಕಾರಿ ವಿ.ಅಭಿಷೇಕ್, ತಹಸೀಲ್ದಾರ್ ಎಚ್.ಬಿ. ಗೋವಿಂದಪ್ಪ, ಪಿಐ ರವಿ, ಯೋಜನ ನಿರ್ದೇಶಕ ಹರಿಶ್ ನಾಯ್ಕ, ವಾಗೀಶ್ ಲಮಾಣಿ, ಮಾರುತಿ ನಾಯ್ಕ, ಸುರೇಂದ್ರ ನಾಯ್ಕ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.- - - (-ಫೋಟೋ:)
ಸೂರಗೊಂಡನಕೊಪ್ಪದಲ್ಲಿ ಸೇವಾಲಾಲ್ ಜಯಂತ್ಯುತ್ಸವ ಅಂಗವಾಗಿ ಭೋಗ್ ಮಹಾಪೂಜೆ, ಪೂರ್ಣಾಹುತಿ ಕಾರ್ಯಕ್ರಮ ನಡೆಯಿತು.