ಸಾರಾಂಶ
ತಾಲೂಕು ಬಂಜಾರ ಸಂಘದ ವತಿಯಿಂದ ಶ್ರೀ ಸೇವಾಲಾಲ್ ಮಹಾರಾಜರ 286ನೇ ಜಯಂತ್ಯುತ್ಸವ ಹಾಗೂ ಬಂಜಾರ ಜಾಗೃತಿ ಸಮಾವೇಶ ನಿಮಿತ್ತ ಏರ್ಪಡಿಸಿದ್ದ ಶ್ರೀ ಸೇವಾಲಾಲ್ ಭಾವಚಿತ್ರದ ಮೆರವಣಿಗೆ ಅತಿ ವಿಜೃಂಭಣೆಯಿಂದ ಸೋಮವಾರ ಪಟ್ಟಣದ ರಾಜಬೀದಿಗಳಲ್ಲಿ ನೆರವೇರಿತು.
- ಮೆರವಣಿಗೆಗೆ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯದೇವ ನಾಯ್ಕ್ ಚಾಲನೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕು ಬಂಜಾರ ಸಂಘದ ವತಿಯಿಂದ ಶ್ರೀ ಸೇವಾಲಾಲ್ ಮಹಾರಾಜರ 286ನೇ ಜಯಂತ್ಯುತ್ಸವ ಹಾಗೂ ಬಂಜಾರ ಜಾಗೃತಿ ಸಮಾವೇಶ ನಿಮಿತ್ತ ಏರ್ಪಡಿಸಿದ್ದ ಶ್ರೀ ಸೇವಾಲಾಲ್ ಭಾವಚಿತ್ರದ ಮೆರವಣಿಗೆ ಅತಿ ವಿಜೃಂಭಣೆಯಿಂದ ಸೋಮವಾರ ಪಟ್ಟಣದ ರಾಜಬೀದಿಗಳಲ್ಲಿ ನೆರವೇರಿತು. ಪಟ್ಟಣದ ಪ್ರವಾಸಿ ಮಂದಿರ ಆವರಣದಿಂದ ಅಲಂಕೃತಗೊಂಡ ಸಾರೋಟಿನಲ್ಲಿ ಶ್ರೀ ಸೇವಾಲಾಲ್ ಮಹಾರಾಜರ ಭಾವಚಿತ್ರ ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯ ವಾಹನಕ್ಕೆ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಜಯದೇವ ನಾಯ್ಕ್ ಚಾಲನೆ ನೀಡಿದರು.ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾ ತಂಡಗಳಾದ ಹೆಣ್ಣುಮಕ್ಕಳ ಡೊಳ್ಳುಕುಣಿತ, ಚಂಡೆ ಮದ್ದಳೆ, ಗೊಂಬೆಕುಣಿತ, ನಗಾರಿ ಸೇರಿದಂತೆ ಹಲವು ಜನಪದ ನೃತ್ಯಗಳು ಹಾಗೂ ಡಿ.ಜೆ. ಸಂಗೀತಕ್ಕೆ ಸಮಾಜದ ಯುವಜನರು ನರ್ತನ ಮಾಡಿ, ಮೆರವಣಿಗೆಯಲ್ಲಿ ಗಮನ ಸೆಳೆದರು.
ತಾಲೂಕು ಬಂಜಾರ ಸಮಾಜದ ಅಧ್ಯಕ್ಷ, ನಿವೃತ್ತ ಸಹಾಯಕ ಅರಣ್ಯಾಧಿಕಾರಿ ಬಿ.ಎನ್. ವೀರೇಶ್ ನಾಯ್ಕ್, ರಾಜ್ಯ ಕೆಪಿಸಿಸಿ ವಕ್ತಾರ ಹೊದಿಗೆರೆ ರಮೇಶ್, ತಾಲೂಕು ಬಂಜಾರ ಸಂಘ ಗೌರವ ಅಧ್ಯಕ್ಷ ಹಾಲೇಶ್ ನಾಯ್ಕ್, ಪದಾಧಿಕಾರಿಗಳಾದ ಕದರನಹಳ್ಳಿ ರಾಜು, ಮಾದೇನಹಳ್ಳಿ ಕುಬೇಂದ್ರ, ಬಿಡುಗೊಂಡನಹಳ್ಳಿ ದೊಡ್ಡ ತಾಂಡದ ಅಣ್ಣಯ್ಯ, ರಾಜಗೊಂಡನಹಳ್ಳಿ ತಾಂಡದ ಉಮೇಶ್ ನಾಯ್ಕ್, ಮಂಜುನಾಥ್, ಅನಿಲ್ ಕುಮಾರ್, ಉಮಾ ನಾಯ್ಕ, ಮಲ್ಲಾ ನಾಯ್ಕ್, ವಿಜಯ ನಾಯ್ಕ್, ವಿಜಯಕುಮಾರ್, ಸಮಾಜದ ಸಾವಿರಾರು ಬಂಧುಗಳು ಭಾಗವಹಿಸಿದ್ದರು.- - -
ಕೋಟ್ ಬಂಜಾರ ಜನಾಂಗ ರಾಜ್ಯದಲ್ಲಿ 1 ಕೋಟಿಗೂ ಅಧಿಕ ಸಂಖ್ಯೆಯಲ್ಲಿದೆ. ನಮ್ಮದೇ ಆದಂತಹ ಆಚಾರ-ವಿಚಾರಗಳು, ವಿಶೇಷ ಉಡುಪುಗಳಿಂದ ಸಮುದಾಯವನ್ನು ಗುರುತಿಸಲಾಗುತ್ತದೆ. ಬಂಜಾರವು ವಿಶೇಷ ಕಲೆ, ಸಂಸ್ಕೃತಿ ಹೊಂದಿರುವ ಜನಾಂಗವಾಗಿದೆ. ಸಂತ ಸೇವಾಲಾಲರ ಜಯಂತ್ಯುತ್ಸವ ಮೆರವಣಿಗೆಗೆ ಚಾಲನೆ ನೀಡುವ ಅವಕಾಶ ದೊರೆತಿದ್ದು ನನಗೆ ಸಿಕ್ಕ ಸೌಭಾಗ್ಯ- ಜಯದೇವ ನಾಯ್ಕ್ಮೆ, ಅಧ್ಯಕ್ಷ
- - --7ಕೆಸಿಎನ್‌ಜಿ3.ಜೆಪಿಜಿ:
ಸಂತ ಸೇವಾಲಾಲ್ ಮಹಾರಾಜ್ 286ನೇ ಜಯಂತಿ ಮೆರವಣಿಗೆಗೆ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಜಯದೇವ ನಾಯ್ಕ್ ಚಾಲನೆ ನೀಡಿದರು.