ಸಾರಾಂಶ
ಸಂತ ಸೇವಾಲಾಲ್ ಮಹಾರಾಜರು ಲಂಬಾಣಿ ಜನರಲ್ಲಿನ ಅಜ್ಞಾನ, ಮೂಢನಂಬಿಕೆ ಹೋಗಲಾಡಿಸಿ ಅವರಲ್ಲಿ ಸುಜ್ಞಾನದ ಬೆಳಕು ಮೂಡಿಸಿದ ಆರಾಧ್ಯ ದೈವವಾಗಿದ್ದಾರೆ.
ಲಕ್ಷ್ಮೇಶ್ವರ: ಸಂತ ಸೇವಾಲಾಲ್ ಮಹಾರಾಜರು ಸಮಾಜದ ಜನರಲ್ಲಿನ ಅಜ್ಞಾನ, ಮೂಢನಂಬಿಕೆ, ಕಂದಾಚಾರ ಹೋಗಲಾಡಿಸಿ ಸುಜ್ಞಾನದ ಬೆಳಕು ಮೂಡಿಸಿದ್ದಾರೆ. ಅವರ ತತ್ವಾದರ್ಶ, ಚಿಂತನೆಗಳು ಇಡೀ ಮನುಕುಲಕ್ಕೆ ದಾರಿದೀಪವಾಗಿವೆ ಎಂದು ತಹಸೀಲ್ದಾರ ವಾಸುದೇವ ಸ್ವಾಮಿ ಹೇಳಿದರು.
ಅವರು ಶನಿವಾರ ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಆಚರಿಸಿ ಮಾತನಾಡಿ, ಸಂತ ಸೇವಾಲಾಲ್ ಮಹಾರಾಜರು ಲಂಬಾಣಿ ಜನರಲ್ಲಿನ ಅಜ್ಞಾನ, ಮೂಢನಂಬಿಕೆ ಹೋಗಲಾಡಿಸಿ ಅವರಲ್ಲಿ ಸುಜ್ಞಾನದ ಬೆಳಕು ಮೂಡಿಸಿದ ಆರಾಧ್ಯ ದೈವವಾಗಿದ್ದಾರೆ. ಅವರು ಲೋಕ ಸಂಚಾರದ ಮೂಲಕ ಜನರ ಕಷ್ಟ ಕಾರ್ಪಣ್ಯ ದೂರಮಾಡಿ ಸಾಮಾಜಿಕ ಚಿಂತನೆಯಲ್ಲಿಯೇ ಬದುಕನ್ನು ಸಮರ್ಪಿಸಿದ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ಸಾಗಬೇಕಾಗಿದೆ ಎಂದರು.ಈ ವೇಳೆ ತಾಪಂ ಇಓ ಧರ್ಮರ ಕೃಷ್ಣಪ್ಪ, ಬಂಜಾರ ಕಲ್ಯಾಣ ಸಂಘದ ತಾಲೂಕಾಧ್ಯಕ್ಷ ದೀಪಕ ಲಮಾಣಿ, ಮುತ್ತಪ್ಪ ಲಮಾಣಿ, ಶೇಖಪ್ಪ ಲಮಾಣಿ, ಸೋಮಪ್ಪ ಲಮಾಣಿ, ಸಮಾಜ ಕಲ್ಯಾಣ ಇಲಾಖೆಯ ಮುತ್ತಣ್ಣ ಸಂಕನೂರ, ಹೆಸ್ಕಾಂನ ಆಂಜನಪ್ಪ ಎ, ಗುರುರಾಜ ಸಿ, ಸೇರಿದಂತೆ ಸಮಾಜ ಬಾಂಧವರು,ಕಂದಾಯ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಇದ್ದರು.
ಪಟ್ಟಣದ ತಾಪಂ ಕಾರ್ಯಾಲಯ, ಪುರಸಭೆ, ಕೆಇಬಿ, ಡೀಪೋ ಸೇರಿದಂತೆ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸಲಾಯಿತು.