ಅರಸೀಕೆರೆ: ತಾಲೂಕಿನ ಬಾಣಾವರ ಹೇಮಕುಲದ ಬೀದಿಯಲ್ಲಿ ಇರುವ ಶ್ರೀ ಏಳು ಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ಗಂಗಾ ಮಾಳಿಕಾ ದೇವಿಯವರ ದೇವತಾ ವಿಗ್ರಹ ಪ್ರತಿಷ್ಠಾಪನೆ, ದೃಷ್ಟಿ ಪೂಜೆ ಮತ್ತು ಜಾತ್ರಾ ಮಹೋತ್ಸವವನ್ನು ಭಕ್ತಿಭಾವದಿಂದ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಸಲಾಯಿತು.ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬಾಣಾವರದ ಪ್ರಾಚೀನ ಆಂಜನೇಯ ಸ್ವಾಮಿ, ಎರೆ ಬೀರಲಿಂಗೇಶ್ವರ ಸ್ವಾಮಿ ಹಾಗೂ ಬೀರಲಿಂಗೇಶ್ವರ ಸ್ವಾಮಿ ದೇವರುಗಳ ಸಾನ್ನಿಧ್ಯದಲ್ಲಿ ಯಾಗಶಾಲಾ ಪ್ರವೇಶ ನಡೆಯಿತು. ಆಚಾರ್ಯರು ಮತ್ತು ಋತ್ವಿಜರ ನೇತೃತ್ವದಲ್ಲಿ ಪ್ರತಿಷ್ಠಾಪನೆ ಪೂರ್ವಕ ಹೋಮಗಳು ನೆರವೇರಿಸಲಾಯಿತು.ಕಾರ್ಯಕ್ರಮದ ವೇಳೆ ಆದಿವಾಸ, ಜಲದಿವಾಸ, ಕ್ಷೀರಾದಿವಾಸ, ವಸ್ತ್ರಾದಿವಾಸ, ಧನ್ಯಾದಿವಾಸ, ನವರತ್ನಾದಿವಾಸ, ಶಯನಾದಿವಾಸ ಹಾಗೂ ನಿದ್ರಾಕಲಶ ಸ್ಥಾಪನೆ ಸೇರಿದಂತೆ ಶಾಂತಿವಾಸ ಪೂಜೆಗಳು ವಿಧಿ ವಿಧಾನಗಳಂತೆ ನೆರವೇರಿಸಲಾಯಿತು. ನಂತರ ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ಮೀಲನ, ದಶಕಲಶ ಹೋಮಗಳು ಹಾಗೂ ಪೂರ್ಣಾಹುತಿ ನೆರವೇರಿಸಲಾಯಿತು.ಅನಂತರ ಕುಂಭಾಭಿಷೇಕ, ಪಟ್ಟಧಾರಿಗಳ ಗುರುತಿನ ಕಾರ್ಯಕ್ರಮ ನಡೆಯಿತು. ಬಾಣಾವರದ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಅರಸನ ಬಾವಿಯಲ್ಲಿ ಹೊಳೆಪೂಜೆ ನೆರವೇರಿಸಲಾಯಿತು. ಹೊಸ ಒಂಬತ್ತು ಗಡಿ ಮಠಾಧಿಪತಿಗಳಿಂದ ಪಟ್ಟಧಾರಿಗಳಿಗೆ ದೀಕ್ಷೆ ನೀಡಿ, ಹೊಳೆಪೂಜೆಯ ನಂತರ ದೇವಾಲಯಕ್ಕೆ ಆಗಮಿಸಿ ದೀಕ್ಷಾ ಕಾರ್ಯಗಳನ್ನು ಪೂರ್ಣಗೊಳಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.ಮೂರು ದಿನಗಳ ಕಾಲ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ಗ್ರಾಮಸ್ಥರು ಹಾಗೂ ಭಕ್ತರಿಗೆ ಕನಕ ಭವನದಲ್ಲಿ ಉಪಹಾರ ಮತ್ತು ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.ಈ ಧಾರ್ಮಿಕ ಸಮಾರಂಭದಲ್ಲಿ ಬಾಣಾವರ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ಬಂದ ಸಾವಿರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಪುನೀತರಾದರು.
ಏಳು ಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ
ಅರಸೀಕೆರೆ ತಾಲೂಕಿನ ಬಾಣಾವರ ಹೇಮಕುಲದ ಬೀದಿಯಲ್ಲಿ ಇರುವ ಶ್ರೀ ಏಳು ಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ಗಂಗಾ ಮಾಳಿಕಾ ದೇವಿಯವರ ದೇವತಾ ವಿಗ್ರಹ ಪ್ರತಿಷ್ಠಾಪನೆ, ದೃಷ್ಟಿ ಪೂಜೆ ಮತ್ತು ಜಾತ್ರಾ ಮಹೋತ್ಸವವನ್ನು ಭಕ್ತಿಭಾವದಿಂದ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಸಲಾಯಿತು. ಆಚಾರ್ಯರು ಮತ್ತು ಋತ್ವಿಜರ ನೇತೃತ್ವದಲ್ಲಿ ಪ್ರತಿಷ್ಠಾಪನೆ ಪೂರ್ವಕ ಹೋಮಗಳು ನೆರವೇರಿಸಲಾಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.