ಸಾರಾಂಶ
ಜಿಲ್ಲಾಧಿಕಾರಿ ಸಿ.ಸತ್ಯಭಾಮ ನಗರಸಭೆಯ ೨೦೨೪-೨೫ ನೇ ಸಾಲಿನ ಬಜೆಟ್ ಮಂಡನೆ । ₹೭೧,೬೮ ಸಾವಿರ ಕೋಟಿ ವೆಚ್ಚಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರಸಭೆಯ ೨೦೨೪-೨೫ ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿಯಲ್ಲಿ ವಿವಿಧ ಮೂಲಗಳಿಂದ ಒಟ್ಟು ೭೨,೧೭,೨೫,೦೦೦ ಕೋಟಿ ರು. ಜಮೆ ನಿರೀಕ್ಷಣೆ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ೭೧,೬೮,೪೬,೦೦೦ ಕೋಟಿ ರು. ವೆಚ್ಚದೊಂದಿಗೆ ೪೮,೭೯,೦೦೦ ಲಕ್ಷ ರು. ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.ನಗರಸಭೆ ಸಭಾಂಗಣದಲ್ಲಿ ನಡೆದ ೨೦೨೪-೨೫ನೇ ಸಾಲಿನ ಅಯವ್ಯಯ ಮಂಡನೆ ಮತ್ತು ವಿಶೇಷ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜಸ್ವ ಆದಾಯಗಳ ಮೂಲಕ ೨೩,೦೯,೨೯,೦೦೦ ಕೋಟಿ ರು. ಬಂಡವಾಳ ಮೂಲಕ ೭,೭೬,೦೦,೦೦೦ ಕೋಟಿ ರು. ಮತ್ತು ವಿಶೇಷ ವಸೂಲಾತಿಗಳ ಮೂಲಕ ಒಟ್ಟು ೭೨,೧೭,೨೫,೦೦೦ ಕೋಟಿ ರು. ಜಮೆ ನಿರೀಕ್ಷಸಲಾಗಿದೆ. ಅಯವ್ಯಯದಲ್ಲಿ ನೀರಿನ ದರಗಳ ವಸೂಲಾತಿ ಮತ್ತು ನೀರಿನ ಸಂಪರ್ಕದ ರೂಪದಲ್ಲಿ ೧.೫೮ ಕೋಟಿ ರು. ಕಟ್ಟಡ ಆಸ್ತಿ ತೆರಿಗೆ ಮೂಲಕ ೩.೮೦ ಕೋಟಿ ರು. ಆಸ್ತಿ ತೆರಿಗೆ ಮೂಲಕ ೧೬ ಲಕ್ಷ ರು., ಉದ್ದಿಮೆ ಪರವನಾಗಿ ಮೂಲಕ ೧೩.೭೫ ಲಕ್ಷ ರೂ, ಮಳಿಗೆಗಳ ಹಾಗೂ ವಸತಿ ಗೃಹಗಳ ಬಾಡಿಗೆ ಮೂಲಕ ೩೦.೫೦ ಲಕ್ಷ ರು. ಖಾತಾ ಪ್ರತಿಗಳು ಹಾಗೂ ಖಾತಾ ಬದಲಾವಣೆ ಶುಲ್ಕದ ರೂಪದಲ್ಲಿ ೪೮.೨೦ ಲಕ್ಷ ರು. ಸೇರಿದಂತೆ ವಿವಿಧ ೨೩ ಮೂಲಗಳ ಆದಾಯಗಳಿಂದ ೭೨,೧೭.೨೫,೦೦೦ ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಮೂಲಭೂತ ಸೌಲಭ್ಯಗಳಾದ ರಸ್ತೆ ಮತ್ತು ಚರಂಡಿ ನಿರ್ಮಾಣ, ದುರಸ್ತಿ ಒಳಗೊಂಡಂತೆ ಕಚೇರಿ ಸಾಮಾಗ್ರಿಗಳ ಖರೀದಿ, ಬೀದಿ ದೀಪಗಳ ಖರೀದಿ ಮತ್ತು ನಿರ್ವಹಣೆ, ಸಾರ್ವಜನಿಕರ ಶೌಚಾಲಯ, ದುರಸ್ತಿ ಮತ್ತು ನಿರ್ಮಾಣ, ಕಟ್ಟಡ ದುರಸ್ತಿ ಮತ್ತು ಸ್ವಚ್ಛ ಭಾರತ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ, ಪಂಪ್‌ಹೌಸ್‌ಗಳಿಗೆ ಯಂತ್ರ ಮತ್ತು ಇತರೆ ಸಲಕರಣೆ ಖರೀದಿ ಸೇರಿದಂತೆ ೧೯ ಅಂಶಗಳ ಅಭಿವೃದ್ದಿಗಾಗಿ ೭೧,೬೮,೪೬,೦೦೦ ಕೋಟಿ ರು. ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.ವಿಶೇಷ ಸಭೆಯ ಮೂಲಕ ೨೦೨೪-೨೫ ನೇ ಸಾಲಿನ ಆಯವ್ಯಯದಲ್ಲಿ ನೆಲಬಾಡಿಗೆ ವಸೂಲಾತಿ ಮಾಡುವ ಹಕ್ಕು, ಕೈಗಾರಿಕೆಗಳಿಗೆ ಪ್ರತ್ಯೇಕವಾಗಿ ಆಸ್ತಿ ತೆರಿಗೆ ದರವನ್ನು ನಿಗದಿಪಡಿಸಿ ಅನುಷ್ಠಾನಗೊಳಿಸುವ ವಿಚಾರ, ವಿವಿಧ ಬಡಾವಣೆಗಳ ರಸ್ತೆ ಮತ್ತು ಚರಂಡಿ ನಿರ್ಮಾಣ, ಸ್ವಚ್ಛ ಭಾರತ ಮಿಷನ್ ಯೋಜನೆ ಸೇರಿದಂತೆ ಬೀದಿ ನಾಯಿಗಳ ನಿಯಂತ್ರಣ ಮತ್ತು ಅನಾರೋಗ್ಯ ಪೀಡಿತ ಸಿಬ್ಬಂದಿ, ಆಸ್ಪತ್ರೆ ಖರ್ಚು ವೆಚ್ಚಗಳ ಸಂದಾಯ ಸೇರಿದಂತೆ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಸುವ ಚನ್ನರಾಯಪಟ್ಟಣ, ಗಂಡಸಿ, ಪಂಪ್‌ಹೌಸ್‌ಗಳ ಯಂತ್ರ ಮತ್ತು ಸಾಮಾಗ್ರಿಗಳ ಖರೀದಿ ಹಾಗೂ ನಿರ್ವಹಣೆಗಾಗಿ ಸೇರಿದಂತೆ ವಿವಿಧ ಟೆಂಡರ್, ಹರಾಜು ಮತ್ತು ಬಹಿರಂಗ ಹರಾಜುಗಳಿಗೆ ಅನುಮೋದನೆ ನೀಡಲಾಯಿತು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಉಪಸ್ಥಿತರಿದ್ದು ಹಲವು ಸೂಚನೆ ಮಾರ್ಗದರ್ಶನಗಳನ್ನು ನೀಡಿದರು. ನಗರಸಭೆ ಸದಸ್ಯರಾದ ಶಮೀವುಲ್ಲಾ, ಸಿ.ಗಿರೀಶ್, ವೆಂಕಟಮುನಿ, ಕಾಂತೇಶ್, ಜಾಕೀರ್ ಹುಸೈನ್, ಜಿ.ಟಿ ಗಣೇಶ್, ಪ್ರೇಮಾ ಮಲ್ಲಿಕಾರ್ಜುನ, ಅನ್ನಪೂರ್ಣ, ಶುಭಾ ಮನೋಜ್ ಕುಮಾರ್, ಮಧುರಾ ಹರೀಶ್, ಸುಜಾತ ರಮೇಶ್, ಕಲಯ್ ಅರಸಿ, ಶಮಾ, ರೇಶ್ಮ, ಅಭಿರಾಮಿ, ಈಶ್ವರ್, ಕಾ.ತಹಸೀಲ್ದಾರ್ ರುಕಿಯಾ ಬೇಗಂ, ಪೌರಾಯುಕ್ತ ಬಸವರಾಜು, ವ್ಯವಸ್ಥಾಪಕಿ ಕಲಾವತಿ, ಅಭಿಯಂತರರಾದ ಸುನಿಲ್ , ಜಗದೀಶ್, ಪರಿಸರ ಅಭಿಯಂತರ ರವಿ, ಲೆಕ್ಕಪತ್ರ ಶಾಖೆಯ ಅನನ್ಯ, ರಂಗನಾಥ್ ಆರೋಗ್ಯ ನಿರೀಕ್ಷಕ ರೇವಣಸಿದ್ದಪ್ಪ, ಲಿಂಗರಾಜು ಭಾಗವಹಿಸಿದ್ದರು.ಅರಸೀಕೆರೆ ನಗರಸಭೆ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ೨೦೨೪-೨೫ ನೇ ಸಾಲಿನ ಅಯವ್ಯಯ ಮಂಡಿಸಿದರು.