ರಸ್ತೆ ಮೇಲೆ ಚರಂಡಿ ನೀರು; ಜನಕ್ಕೆ ಕಿರಿಕಿರಿ

| Published : Mar 24 2024, 01:35 AM IST

ಸಾರಾಂಶ

ತಾಲೂಕಿನ ಕೋಳೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇಬಗೇರಿ ಗ್ರಾಮದಲ್ಲಿ ರಸ್ತೆ ಮಧ್ಯೆದಲ್ಲಿಯೇ ಚರಂಡಿ ನೀರು ಹರಿದು ದುರ್ನಾತ ಸೂಸುತ್ತಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಕಿರಿಕಿರಿ ಆಗುತ್ತಿದೆ.

ನಾರಾಯಣ ಮಾಯಾಚಾರಿಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ತಾಲೂಕಿನ ಕೋಳೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇಬಗೇರಿ ಗ್ರಾಮದಲ್ಲಿ ರಸ್ತೆ ಮಧ್ಯೆದಲ್ಲಿಯೇ ಚರಂಡಿ ನೀರು ಹರಿದು ದುರ್ನಾತ ಸೂಸುತ್ತಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಕಿರಿಕಿರಿ ಆಗುತ್ತಿದೆ.

ಹೌದು, ಈ ಬಡಾವಣೆಯಲ್ಲಿ ಯಾರಾದರೂ ಸಂಚಾರ ಮಾಡಿದರೇ ಸಾಕು ಯಾಕಪ್ಪ ಇಲ್ಲಿಗೆ ಬಂದು ಬಿಟ್ಟೇವು ಎನ್ನುವಷ್ಟರ ಮಟ್ಟಿಗೆ ರಸ್ತೆಗಳು ಹಾಳಗಿ ಹೋಗಿವೆ. ಚರಂಡಿಗಳು ಇಲ್ಲದೇ ನಿತ್ಯ ಸ್ನಾನ ಮಾಡಿದ ಮತ್ತು ಇನ್ನಿತರ ಮಲೀನ ನೀರು ರಸ್ತೆಯ ಮಧ್ಯೆಭಾಗದಲ್ಲಿಯೇ ಹರಿದು ಗಬ್ಬು ವಾಸನೆ ಬೀರುತ್ತಿದೆ. ಹೀಗಾಗಿ ಈ ಮಾರ್ಗವಾಗಿ ಸಂಚರಿಸುವವರು ಮೂಗು ಮುಚ್ಚಿಕೊಂಡೇ ಸಂಚಾರ ಮಾಡುವ ಸ್ಥಿತಿ ಬಂದಿದೆ. ಈ ಬಡಾವಣೆಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವ ಬಡ ಕುಟುಂಬಗಳೇ ವಾಸ ಮಾಡುತ್ತಿವೆ. ಸರ್ಕಾಗಳು ಇಂತಹ ಕೊಳಚೆ ಪ್ರದೇಶ ಮತ್ತು ದಿನಗೂಲಿ ಮಾಡಿಕೊಂಡು ಜೀವನ ಸಾಗಿಸುವ ಬಡಾವಣೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದರೂ ಆ ಅನುದಾನ ಸಮರ್ಪಕವಾಗಿ ಬಳಕೆಯಾಗದೇ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಹೀಗಾಗಿ ಇಲ್ಲಿ ವಾಸಿಸುವ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆಗಳು ಸಂಪೂರ್ಣ ಕೊಳಚೆಯಾಗಿ ಮಾರ್ಪಟ್ಟಿವೆ. ಇದರಿಂದ ಸೊಳ್ಳೆಗಳ ಕಾಟ ಕೂಡಾ ಹೆಚ್ಚಾಗಿದೆ. ಅದಲ್ಲದೇ ಸಾಂಕ್ರಾಮಿಕ ರೋಗಳ ಭೀತಿ ಜನರಲ್ಲಿ ಮನೆ ಮಾಡಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.

-------------

ಕೋಟ್

ಈಗಾಗಲೇ ನೇಬಗೇರಿ ಗ್ರಾಮದ ದಲಿತ ಕೆರೆಯಲ್ಲಿ ಬಹಳ ದಿನಗಳಿಂದ ಮುಖ್ಯ ಚರಂಡಿ ತುಂಬಿ ರಸ್ತೆ ಮೇಲೆಲ್ಲ ಹರಿದಾಡಿದ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರೂ ಇಲ್ಲಿಯವರೆಗೆ ಸ್ವಚ್ಛತೆಯ ಬಗ್ಗೆಯಾಗಲಿ ಅಥವಾ ಅಭಿವೃದ್ಧಿಯ ಬಗ್ಗೆಯಾಗಲಿ ಯಾವುದೇ ಸ್ವಂದನೆ ನೀಡಿಲ್ಲ. ಸದ್ಯ ನಮಗೆ ನಮ್ಮ ಗ್ರಾಮ, ನಮ್ಮ ಬಡಾವಣೆ ಸ್ವಚ್ಛತೆಯಿಂದ ಅಭಿವೃದ್ಧಿ ಹೊಂದಬೇಕು. ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಬೀದಿಗಿಳಿದು ಹೋರಾಟ ಅನಿವಾರ್ಯ.- ಮುತ್ತು ಚಲವಾದಿ, ತಾಲೂಕಾಧ್ಯಕ್ಷ ದಲಿತ ವಿದ್ಯಾರ್ಥಿ ಪರಿಷತ್ ನೇಬಗೇರಿ

-------------

ನೇಬಗೇರಿ ಗ್ರಾಮದ ಬಹುತೇಕ ಜನರು ರಸ್ತೆಯಲ್ಲಿಯೇ ದನ ಕರುಗಳನ್ನು ಕಟ್ಟುತ್ತಾರೆ. ಇದರಿಂದಾಗಿ ಅಲ್ಲಿರುವ ಚರಂಡಿಗಳಲ್ಲಿ ಕಸಕಡ್ಡಿಗಳನ್ನು ಎಸೆಯುತ್ತಿರುವುದರಿಂದ ಚರಂಡಿಯೂ ತುಂಬಿ ಬ್ಲಾಕ್ ಆಗಿ ರಸ್ತೆ ಮೇಲೆ ನೀರು ಹರಿಯುತ್ತದೆ. ಅದರಂತೆ ಪ್ರತಿ ಸಲವೂ ಈ ಚರಂಡಿ ತುಂಬಿದ್ದ ಬಗ್ಗೆ ಮಾಹಿತಿ ತಿಳಿದು ಸ್ವಚ್ಛ ಮಾಡಲು ತಿಳಿಸಲಾಗಿದೆ. ನಮ್ಮ ಇಲಾಖೆಯ ಜವಾಬ್ದಾರಿ ಹೇಗೆ ಇರುತ್ತದೆಯೋ ಹಾಗೆ ಆಯಾ ಬಡಾವಣೆಯ ಗ್ರಾಮಗಳ ನಿವಾಸಿಗಳ ಜವಾಬ್ದಾರಿಯೂ ಮುಖ್ಯವಾಗುತ್ತದೆ.

-ಆನಂದ ಹಿರೇಮಠ, ಪಿಡಿಒ ಗ್ರಾಪಂ ಕೋಳೂರ