ಸಾರಾಂಶ
ಸೇವಾಲಾಲ್ ಗೆ ಸೇರಿದ ಬಂಜಾರ ಸಮುದಾಯದವರಿಗೆ ಕಾಡು ದಾಟುವ ಕಲೆ ಗೊತ್ತಿರುವುದರಿಂದ ಹೈದರಾಬಾದ್ ನಿಜಾಮ್ ರು ತಮ್ಮ ಸಾಮ್ರಾಜ್ಯದಲ್ಲಿ ಬಂಜಾರ ಸಮುದಾಯಕ್ಕೆ ಕೆಲಸವನ್ನು ಕೊಡುತ್ತಾರೆ.
ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಸೇವಾಲಾಲ್ ಜಯಂತಿ ಆಚರಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಮಾತನಾಡಿ, ಸೇವಾಲಾಲ್ ಅವರು ಬಂಜಾರ ಸಮುದಾಯದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಇವರು ಮೂಲತಹ ಉತ್ತರ ಪ್ರದೇಶ ಮತ್ತು ರಾಜಸ್ಥಾನದವರು ಆಗಿದ್ದಾರೆ.ಸೇವಾಲಾಲ್ ಗೆ ಸೇರಿದ ಬಂಜಾರ ಸಮುದಾಯದವರಿಗೆ ಕಾಡು ದಾಟುವ ಕಲೆ ಗೊತ್ತಿರುವುದರಿಂದ ಹೈದರಾಬಾದ್ ನಿಜಾಮ್ ರು ತಮ್ಮ ಸಾಮ್ರಾಜ್ಯದಲ್ಲಿ ಬಂಜಾರ ಸಮುದಾಯಕ್ಕೆ ಕೆಲಸವನ್ನು ಕೊಡುತ್ತಾರೆ. ಇವರು ಸಿದ್ದಿ ಪುರುಷರಾಗಿದ್ದರು. ಇವರು ಆಧ್ಯಾತ್ಮಿಕ ವ್ಯಕ್ತಿ ಮತ್ತು ಧಾರ್ಮಿಕ ಪುರುಷರಾಗಿದ್ದರು. ಇಂದು ರಾಜ್ಯದ ಪ್ರತಿಯೊಂದು ತಾಂಡಗಳಲ್ಲಿ ಸೇವಾಲಾಲ್ ದೇವಸ್ಥಾನಗಳನ್ನು ಕಟ್ಟಿದ್ದಾರೆ. ಸಂತ ಸೇವಾಲಾಲ್ ಮತ್ತೆ ಪುನರ್ಜನ್ಮ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸೇವಾಲಾಲ್ ಅವರಿಂದ ದೇಶದ ಬಂಜಾರ ಸಮುದಾಯವು ಅವರನ್ನು ಸಾಂಸ್ಕೃತಿಕ ನಾಯಕರಾನ್ನಾಗಿ ಸ್ವೀಕರಿಸಿದೆ ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ವಿಠೋಬ್ ಮಾತನಾಡಿ, ಸಂತ ಸೇವಾಲಾಲ್ ಸಮಾಜದಲ್ಲಿರುವ ಮೂಢನಂಬಿಕೆಗಳ ವಿರುದ್ಧ ಮತ್ತು ಸಮಾಜದ ಸುಧಾರಣೆಗಾಗಿ ಹೋರಾಟ ಮಾಡಿದ್ದಾರೆ. ಸೇವಾಲಾಲ್ ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ. ನಾಡಿನ ಸೂಫಿ ಸಂತರ ರೀತಿ ಮೌಢ್ಯಗಳನ್ನು ಧಿಕ್ಕರಿಸಿದ್ದಾರೆ. ಅವರ ಆಶಯಗಳನ್ನು, ಅವರ ಗುಣಗಳನ್ನು ಅಳವಡಿಸಿಕೊಳ್ಳೋಣ ಎಂದು ಹೇಳಿದರು.ಡಾ.ಹುಲಿಗೆಮ್ಮ, ನಾಗರತ್ನ ತಮ್ಮಿನಾಳ, ಡಾ.ಪ್ರದೀಪಕುಮಾರ್, ಡಾ.ನರಸಿಂಹ, ಶಿವಪ್ಪ ಬಡಿಗೇರ್, ಶಿವಾಪ್ರಸಾದ ಹಾದಿಮನಿ, ಹುಚ್ಚಪ್ಪ ಬೊಮ್ಮನಾಳ, ಆರತಿ, ಉಮೇಶ್ ಕಾತರಾಕಿ, ಡಾ.ಪ್ರಕಾಶ್ ಹುಲ್ಲೂರು, ಸೌಮ್ಯ ಹಿರೇಮಠ, ಮಹೇಶ್ ಪೂಜಾರ ಇದ್ದರು.ಡಾ.ಹುಲಿಗೆಮ್ಮ ನಿರೂಪಿಸಿದರು. ಡಾ.ಪ್ರದೀಪಕುಮಾರ್ ವಂದಿಸಿದರು.