ಸಾರಾಂಶ
ಫೆ.15ರಂದು ಸಂತ ಸೇವಾಲಾಲ ಮಹಾರಾಜರ ೨೮೫ ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಬಂಜಾರ ಸಮಾಜ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ವಾಣ ಹೇಳಿದರು.
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸಂತ ಸೇವಾಲಾಲ ಮಹಾರಾಜರ ೨೮೫ ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಬಂಜಾರ ಸಮಾಜ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ವಾಣ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸೇವಾಲಾಲ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಆಲ್ ಇಂಡಿಯಾ ಬಂಜಾರ ಸೇವಾ ಸಂಘ, ಗೊರ್ ಸೇನಾ ಹಾಗೂ ಅಖಿಲ ಭಾರತ ಬಂಜಾರ ಸೇವಾ ಸಂಘದ ವತಿಯಿಂದ ಫೆ.೧೫ ರಂದು ಸೇವಾಲಾಲ್ ಜಯಂತಿ ಅಂಗವಾಗಿ ಅಂದು ಬೆಳಗ್ಗೆ ತಾಲೂಕು ಆಡಳಿತ ವತಿಯಿಂದ ನಡೆಯುವ ವೇದಿಕೆ ಕಾರ್ಯಕ್ರಮ ಜರುಗಲಿದ್ದು ನಂತರ ಭವ್ಯ ಮೆರವಣೆಗೆ ಕಾರ್ಯಕ್ರಮ ಇರುತ್ತದೆ. ಈ ಕಾರ್ಯಕ್ರಮ ಮತ್ತು ಮೆರವಣೆಗೆ ಯಶಸ್ವಿಗೆ ಸಮಾಜ ನಾಯಕ ಕಾರಬಾರಿ, ಡಾವ ಸಾನ ಹಾಸಬೀ ನಾಶಬೀ ಅಕ್ಕತಂಗಿಯರು ತಾಯಂದಿರು, ಚುನಾಯಿತ ಪ್ರತಿನಿಧಿಗಳು ಹಾಗೂ ಸೇವಾಲಾಲ್ ಮಹಾರಾಜರ ಸದ್ಬಕ್ತ ಮಂಡಳಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಮುಖಂಡರಾದ ಗೊಪಾಲ್ ರಾಠೋಡ, ಬೊರು ರಾಠೋಡ, ಪುರಸಭೆ ಸದಸ್ಯ ಜಗದೀಶ ಚವ್ವಾಣ, ಚಂದರ್ ಚವ್ವಾಣ, ಮನೊಜ್ ರಾಠೋಡ, ದೇವಿದಾಸ ನಾಯಕ, ಅಶ್ವಥ ರಾಠೋಡ, ವಿಜಯಕುಮಾರ ಚವ್ವಾಣ, ಶರಣಕುಮಾರ ಚವ್ವಾಣ, ಸುಭಾಷ ಜಾಧವ, ದೇವಿದಾಸ ಚವ್ವಾಣ, ವಿನೊದ ಪವಾರ, ಶಿವರಾಮ ಚವ್ವಾಣ, ರವಿ ಜಾಧವ, ಆಕಾಶ ಚವ್ವಾಣ, ರವಿ ಪವಾರ್, ವಿನೊಧ ಚವ್ವಾಣ, ನಾಗೂ ರಠೋಡ, ಲಚ್ಚು ಚವ್ವಾಣ, ರಮೇಶ ಜಾಧವ, ಪ್ರತಾಪ ಚವ್ವಾಣ, ಸುನಿಲ್ ರಾಠೋಡ, ಸಿದ್ದರಾಮ ರಾಠೋಡ ಸೇರಿದಂತೆ ಇತರರು ಇದ್ದರು.