ಸೇವಾಲಾಲಾ ಬಂಜಾರರ ಆರಾಧ್ಯ ದೈವ: ಅಶೋಕ

| Published : Feb 16 2024, 01:53 AM IST

ಸಾರಾಂಶ

ಪಟ್ಟಣದ ಶ್ರೀ ಶಿವಯೋಗಿ ಸಂಗಮಾರ್ಯ ವಿದ್ಯಾ ಸಂಸ್ಥೆಯಡಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಜಾರ ಸಮುದಾಯದ ಆರಾಧ್ಯ ದೈವರಾದ, ಸಂಸ್ಕೃತಿ ಉಳಿವಿಗಾಗಿ ಹೋರಾಡಿದ ಸಮಾಜ ಸುಧಾರಕ ಶ್ರೀ ಸಂತ ಸೇವಾಲಾಲ ಜಯಂತ್ಯುತ್ಸವವನ್ನು ಆಚರಿಸಲಾಯಿತು.

ತಾಳಿಕೋಟೆ: ಪಟ್ಟಣದ ಶ್ರೀ ಶಿವಯೋಗಿ ಸಂಗಮಾರ್ಯ ವಿಧ್ಯಾ ಸಂಸ್ಥೆಯಡಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಜಾರ ಸಮುದಾಯದ ಆರಾಧ್ಯ ದೈವರಾದ, ಸಂಸ್ಕೃತಿ ಉಳಿವಿಗಾಗಿ ಹೋರಾಡಿದ ಸಮಾಜ ಸುಧಾರಕ ಶ್ರೀ ಸಂತ ಸೇವಾಲಾಲ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಜಗದೀಶ ಕೊಣ್ಣೂರ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಪ್ರೌಢಶಾಲೆಯ ಶಿಕ್ಷಕ ಎಸ್ ವಿ ಜಾಮಗೊಂಡಿ ಸೇವಾಲಾಲರ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಶಿಕ್ಷಕ ಬಿ.ಐ ಹಿರೇಹೊಳಿ, ಎಸ್.ವಿ ಜಾಮಗೊಂಡಿ, ಎಸ್.ಸಿ ಗುಡಗುಂಟಿ, ಎಚ್.ಬಿ ಪಾಟೀಲ, ಮುತ್ತು ಬಿರಾದಾರ, ಎಸ್.ಎಸ್ ಪಾಟೀಲ, ಎ.ಸಿ ಗುಮಶೆಟ್ಟಿ, ಪ್ರೇಮಾ ನಡಹಳ್ಳಿ, ರೇಣುಕಾ ಯರದಿಹಾಳ ಉಪಸ್ಥಿತರಿದ್ದರು. ಅಜಯ ಜಾಧವ ಪ್ರಾರ್ಥಿಸಿದರು. ಕಿರಣ ಶೇಖಪ್ಪ ನಿರೂಪಿಸಿದರು. ಸಂಜು ಮಾದರ ಸ್ವಾಗತಿಸಿದರು.