ಸೇವಾಲಾಲರು ಮನುಕುಲೋದ್ಧಾರಕರು

| Published : Mar 30 2024, 12:53 AM IST

ಸಾರಾಂಶ

ಬಂಜಾರಾ ಸಮುದಾಯದವರು ಕಾಯಕನಿಷ್ಠ ಶ್ರಮ ಜೀವಿಗಳಾಗಿದ್ದಾರೆ. ಅವರ ಮೂಲ ಉದ್ಯೋಗ ಪಶುಸಂಗೋಪನೆ ಮತ್ತು ವ್ಯಾಪಾರವಾಗಿದೆ. ರಾಣಾ ಪ್ರತಾಪಸಿಂಗ್ ಸೋಲಿನ ಬಳಿಕ ಕಾಡು ಸೇರಿ ಅಲೆಮಾರಿಗಳಾಗಿ ಬದುಕಿದರು. ಈಗ ದೇಶದಾದ್ಯಂತ ಗ್ರಾಮಗಳನ್ನು ನಿರ್ಮಿಸಿಕೊಂಡು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ ಎಂದು ಸಾಹಿತಿ ದಾಕ್ಷಾಯಿಣಿ ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಶರಣ ಸಾಹಿತ್ಯ ಪರಿಷತ್‌ ವತಿಯಿಂದ ಸಂತ ಸೇವಾಲಾಲರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಂಬಾಣಿ ಜನಾಂಗದ ಜಗದ್ಗುರು ಸಂತ ಸೇವಾಲಾಲರು ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿ ಸಾತ್ವಿಕ ಜೀವನವನ್ನು ಬದುಕಿದ್ದಾರೆ. ದೇವಿ ಆರಾಧಕರಾಗಿ ತಮ್ಮ ಜನರ ಅಲ್ಲದೆ ಲೋಕೋದ್ಧಾರಕ್ಕಾಗಿ ಬದುಕನ್ನೇ ತ್ಯಾಗ ಮಾಡಿದ್ದಾರೆ ಎಂದರು.

ಅಧ್ಯಕ್ಷತೆ ವಿ.ಸಿ.ನಾಗಠಾಣ ವಹಿಸಿದ್ದರು. ಇಂದುಮತಿ ಲಮಾಣಿ, ಜಂಬುನಾಥ ಕಂಚ್ಯಾಣಿ, ಆರ್.ಬಿ.ನಾಯಕ, ಸುರೇಖಾ ರಾಠೋಡ, ಅಮರೇಶ ಸಾಲಕ್ಕಿ, ಪ್ರೊ.ಶರಣಗೌಡ ಪಾಟೀಲ, ಡಾ.ವಿ.ಡಿ.ಐಹೊಳ್ಳಿ, ಪರಶುರಾಮ ಪೋಳ, ಕಮಲಾ ಗೆಜ್ಜಿ, ಶಶಿಕಲಾ ರಾಠೋಡ, ಸಂಗೀತಾ ನಾಯಕ, ಶಾರದಾ ಲಮಾಣಿ, ರಮಾಬಾಯಿ ನಾಯಕ ಮುಂತಾದವರು ಉಪಸ್ಥಿತರಿದ್ದರು.