ಸಾರಾಂಶ
ತಾಲೂಕಿನ ಮ್ಯಾದನಹೊಳೆ ಗ್ರಾಮದ ಎಸ್.ಸಿ ಕಾಲೋನಿಯ ರೇಣುಕಮ್ಮ ಎನ್ನುವವರ ಗುಡಿಸಲು ಬೆಂಕಿಗೆ ಆಹುತಿಯಾಗಿದ್ದು ಅದೃಷ್ಟವಶಾತ್ ಆಕೆಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಗುಡಿಸಲಿನಲ್ಲಿದ್ದ ದಿನಬಳಕೆಯ ವಸ್ತುಗಳೆಲ್ಲಾ ಸುಟ್ಟು ಹೋಗಿರುವುದರಿಂದ ಮಹಾನಾಯಕ ದಲಿತಸೇನೆ ಸಂಘಟನೆಯವರು ದಾನಿಗಳ ಸಹಕಾರದಿಂದ ಮ್ಯಾದನಹೊಳೆ ಗ್ರಾಮಕ್ಕೆ ಭೇಟಿ ನೀಡಿ ದಿನಸಿ, ತಾಯಿ ಮಕ್ಕಳಿಗೆ ಉಡುಪು, ಶಾಲಾ ಬ್ಯಾಗ್, ಪುಸ್ತಕ, ಚಾಪೆ, ಬೆಡ್ ಶೀಟ್, ಪಾತ್ರೆ ಸಾಮಾನು ಹಾಗೂ ಇತರೆ ದಿನೋಪಯೋಗಿ ವಸ್ತುಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಕೆಪಿ. ಶ್ರೀನಿವಾಸ್, ತಾಲೂಕು ಅಧ್ಯಕ್ಷ ರಾಘವೇಂದ್ರ, ಸಂಘಟನಾ ಕಾರ್ಯದರ್ಶಿ ರಾಘು ಓಬಳಾಪುರ, ಕಾರ್ಯದರ್ಶಿ ದಯಾನಂದ್ ಉಪ್ಪಳಗೆರೆ, ಹನುಮಂತರಾಯ ಹೂವಿನಹೊಳೆ, ವಸಂತಕುಮಾರ್, ದೊರೇಶ್ ಮುಂತಾದವರು ಉಪಸ್ಥಿತರಿದ್ದರು.
ಹಿರಿಯೂರು: ತಾಲೂಕಿನ ಮ್ಯಾದನಹೊಳೆ ಗ್ರಾಮದ ಎಸ್.ಸಿ ಕಾಲೋನಿಯ ರೇಣುಕಮ್ಮ ಎನ್ನುವವರ ಗುಡಿಸಲು ಬೆಂಕಿಗೆ ಆಹುತಿಯಾಗಿದ್ದು ಅದೃಷ್ಟವಶಾತ್ ಆಕೆಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಗುಡಿಸಲಿನಲ್ಲಿದ್ದ ದಿನಬಳಕೆಯ ವಸ್ತುಗಳೆಲ್ಲಾ ಸುಟ್ಟು ಹೋಗಿರುವುದರಿಂದ ಮಹಾನಾಯಕ ದಲಿತಸೇನೆ ಸಂಘಟನೆಯವರು ದಾನಿಗಳ ಸಹಕಾರದಿಂದ ಮ್ಯಾದನಹೊಳೆ ಗ್ರಾಮಕ್ಕೆ ಭೇಟಿ ನೀಡಿ ದಿನಸಿ, ತಾಯಿ ಮಕ್ಕಳಿಗೆ ಉಡುಪು, ಶಾಲಾ ಬ್ಯಾಗ್, ಪುಸ್ತಕ, ಚಾಪೆ, ಬೆಡ್ ಶೀಟ್, ಪಾತ್ರೆ ಸಾಮಾನು ಹಾಗೂ ಇತರೆ ದಿನೋಪಯೋಗಿ ವಸ್ತುಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಕೆಪಿ. ಶ್ರೀನಿವಾಸ್, ತಾಲೂಕು ಅಧ್ಯಕ್ಷ ರಾಘವೇಂದ್ರ, ಸಂಘಟನಾ ಕಾರ್ಯದರ್ಶಿ ರಾಘು ಓಬಳಾಪುರ, ಕಾರ್ಯದರ್ಶಿ ದಯಾನಂದ್ ಉಪ್ಪಳಗೆರೆ, ಹನುಮಂತರಾಯ ಹೂವಿನಹೊಳೆ, ವಸಂತಕುಮಾರ್, ದೊರೇಶ್ ಮುಂತಾದವರು ಉಪಸ್ಥಿತರಿದ್ದರು.