ಸಾರಾಂಶ
ಮಂಗಳೂರಿನಲ್ಲಿ ಅಧಿಕೃತ ಘೋಷಣೆ ಮಾಡಿದ ಡಾ.ರೋಹನ್ ಮೊಂತೆರೊ
ಕನ್ನಡಪ್ರಭ ವಾರ್ತೆ ಮಂಗಳೂರುಕರ್ನಾಟಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ಮುಂಚೂಣಿ ಉದ್ಯಮ ಸಂಸ್ಥೆ ‘ರೋಹನ್ ಕಾರ್ಪೊರೇಶನ್’ ಬಾಲಿವುಡ್‌ನ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರನ್ನು ತನ್ನ ಅಧಿಕೃತ ಬ್ರ್ಯಾಂಡ್ ಅಂಬಾಸಿಡರ್ ಆಗಿ ಶನಿವಾರ ಘೋಷಣೆ ಮಾಡಿದೆ.
‘ಬಾಲಿವುಡ್ ಬಾದ್‌ಶಾ’ ಶಾರುಖ್ ಖಾನ್ ಅವರು ಕರ್ನಾಟಕದ ಉದ್ಯಮವೊಂದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಇದೇ ಮೊದಲು. ಈ ಮೂಲಕ ರೋಹನ್ ಕಾರ್ಪೊರೇಶನ್ ಉದ್ಯಮ ವಲಯವು ದೇಶವ್ಯಾಪಿ ಗುರುತಿಸಿಕೊಂಡಿದೆ.ಈ ಅಧಿಕೃತ ಘೋಷಣೆಯ ಕಾರ್ಯಕ್ರಮ ನಗರದ ಭಾರತ್ ಮಾಲ್‌ನಲ್ಲಿ ಶನಿವಾರ ನಡೆಯಿತು. ಬೃಹತ್ ಪರದೆಯ ಮೇಲೆ ಸಂಸ್ಥೆಯ ಅಧಿಕೃತ ಬ್ರ್ಯಾಂಡ್ ಅಂಬಾಸಿಡರ್ ವಿಡಿಯೊ ಪ್ರದರ್ಶಿಸಲಾಯಿತು. ರೋಹನ್ ಕಾರ್ಪೊರೇಶನ್‌ನ 32 ವರ್ಷಗಳ ಸ್ಫೂರ್ತಿದಾಯಕ ಪಯಣ ಮತ್ತು ಶಾರೂಖ್ ಖಾನ್ ಅವರ ಶ್ರಮ ಮತ್ತು ವ್ಯಕ್ತಿತ್ವದ ಯಶೋಗಾಥೆಯನ್ನು ಇದರಲ್ಲಿ ಪ್ರಸ್ತುತಪಡಿಸಲಾಯಿತು.
ಹೊಸ ಅಧ್ಯಾಯಕ್ಕೆ ಮುನ್ನುಡಿ:ಈ ಸಂದರ್ಭ ಮಾತನಾಡಿದ ರೋಹನ್ ಕಾರ್ಪೊರೇಶನ್ ಸಂಸ್ಥಾಪಕ ಡಾ.ರೋಹನ್ ಮೊಂತೆರೊ, ಶಾರೂಖ್ ಖಾನ್ ಅವರಂತಹ ಪ್ರಭಾವಿ ವ್ಯಕ್ತಿತ್ವ ನಮ್ಮ ಸಂಸ್ಥೆ ಜತೆಗೆ ಇರುವುದರಿಂದ ನಮ್ಮ ಯಶಸ್ಸನ್ನು ಇನ್ನೂ ಎತ್ತರಕ್ಕೇರಿಸಲು ಆತ್ಮವಿಶ್ವಾಸ ಬಂದಿದೆ. ಇದು ಶಕ್ತಿಯುತ ಸಹಭಾಗಿತ್ವದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಎಂದು ಹೇಳಿದರು.
ಮಂಗಳೂರು ನಗರ ಇನ್ನಷ್ಟು ಅಭಿವೃದ್ಧಿಯಾಗಬೇಕು. ಮಂಗಳೂರು ಈ ಮಟ್ಟದಲ್ಲಿ ಬೆಳೆಯಲು ಸರ್ವ ಸಂಪನ್ಮೂಲಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ ರೋಹನ್ ಕಾರ್ಪೊರೇಶನ್ ಕಳೆದ 32 ವರ್ಷಗಳಿಂದ ನಗರ ಬೆಳವಣಿಗೆಯ ಪಾಲುದಾರನಾಗಿದೆ ಎಂದರು.ರೋಹನ್ ಕಾರ್ಪೊರೇಶನ್‌ನ 12 ಯೋಜನೆಗಳು ಪ್ರಗತಿಯಲ್ಲಿದ್ದು, 15 ಯೋಜನೆಗಳ ರೂಪುರೇಷೆ ಸಿದ್ಧಗೊಂಡಿದೆ. ಇನ್ನು 5-10 ವರ್ಷಗಳಲ್ಲಿ ಮಂಗಳೂರಿನಲ್ಲಿ ಭೂಮಿಯ ಬೆಲೆ ಗಗನಕ್ಕೇರಲಿದೆ. ಮನೆ ಖರೀದಿಗೆ ಇದೇ ಪ್ರಶಸ್ತವಾದ ಸಮಯ ಎಂದು ಡಾ. ರೋಹನ್ ಮೊಂತೆರೊ ತಿಳಿಸಿದರು.
ಮಂಗಳೂರಿಗೆ ಕಿಂಗ್ ಖಾನ್:25ಕ್ಕೂ ಹೆಚ್ಚು ಯಶಸ್ವಿ ಯೋಜನೆಗಳ ಮೂಲಕ ರೋಹನ್ ಕಾರ್ಪೊರೇಶನ್ ಜಾಗತಿಕ ಉದ್ಯಮ ವಲಯಕ್ಕೆ ಕಾಲಿರಿಸಿದೆ. ಮಂಗಳೂರನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಶಾರೂಖ್ ಖಾನ್ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ವತಃ ಶಾರೂಖ್ ಖಾನ್ ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ರೋಹನ್ ಹೇಳಿದರು.