ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ, ನಿರಂತರ ಪ್ರತಿಭಟನೆ ಕೈಗೊಂಡ ವಿವಿಧ ರೈತ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಶಹಾಪುರ ಬಂದ್‌ ಶಾಂತಿಯುತ, ಯಶಸ್ವಿಯಾಗಿ ನಡೆದಿದೆ. ರೈತ ಸಂಘಟನೆಗಳ ಬಂದ್ ಕರೆಗೆ ನಗರದ ಅಂಗಡಿ ಮುಂಗಟ್ಟುಗಳು ಸಹ ಮುಚ್ಚಿ ಸಾಥ್ ನೀಡಿರುವದು ಕಂಡು ಬಂದಿತು. ಹೀಗಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿದ್ಯಾರ್ಥಿಗಳು, ನಾಗರಿಕರು ಪರದಾಡುವಂತಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ಎತ್ತು‌ ಬಂಡಿಗಳನ್ನು ಹೆದ್ದಾರಿ ಮೇಲೆ ನಿಲ್ಲಿಸಿ, ಹೆದ್ದಾರಿ ಬಂದ್ ಮಾಡಿ ರಾತ್ರಿ 8 ಗಂಟೆಯಾದರೂ ಧರಣಿ ಮುಂದುವರೆದಿತ್ತು. ಹೋರಾಟದ ನೇತೃತ್ವವನ್ನು ರೈತ ಮುಖಂಡರಾದ ಚನ್ನಪ್ಪ ಆನೇಗುಂದಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಶರಣು ಮಂದರವಾಡ, ಎಸ್.ಎಂ.ಸಾಗರ,‌ ಮಹೇಶ ಸುಬೇದಾರ ಸೇರಿದಂತೆ ಇತರರು ವಹಿಸಿದ್ದರು.

ರಾತ್ರಿ 8 ಗಂಟೆಯಾದರೂ ಪ್ರತಿಭಟನೆ ಮುಂದುವರೆದಿತ್ತು. ಪ್ರತಿಭಟನೆ ಉದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನೆ ನಡುವೆಯೇ ಅನ್ನ, ಸಾಂಬಾರು ಸಿದ್ಧಪಡಿಸಿಕೊಂಡ ರೈತರು, ಮಧ್ಯಾಹ್ನ ಹೆದ್ದಾರಿ ಮಧ್ಯೆಯೇ ರೈತರು ಕುಳಿತು ಊಟ ಮಾಡಿದರು.

ಹೋರಾಟ ಸ್ಥಳಕ್ಕೆ ರೈತರ ಮನವಿ ಸ್ವೀಕರಿಸಲು ಪ್ರಾದೇಶಿಕ ಆಯುಕ್ತರು ಬರಲೇಬೇಕು. ಅವರ ಮುಂದೆ ನಮ್ಮ ಸಂಕಷ್ಟ ಮನವರಿಕೆ ಮಾಡುತ್ತೇವೆ. ಅವರು ಸರ್ಕಾರದ ಗಮನಕ್ಕೆ ತಂದು ನೀರು ಬಿಡಿಸುವ ಭರವಸೆ ನೀಡಿದರೆ, ಮಾತ್ರ ಹೆದ್ದಾರಿ ತಡೆಯಿಂದ ಸರಿಯುತ್ತೇವೆ, ಇಲ್ಲವಾದಲ್ಲಿ ಆಹೋರಾತ್ರಿ ಹೆದ್ದಾರಿ ಮೇಲೆ ಮಲಗುತ್ತೇವೆ ಎಂದು ರೈತ ಮುಖಂಡರು ಪಟ್ಟು ಹಿಡಿದಿದರು.

ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳು ಮನವೊಲಿಸಲು ಪ್ರಯತ್ನ‌ಮಾಡುತ್ತಿದ್ದು,‌ ರೈತರು ಪಟ್ಟು ಸಡಿಲಿಸುತ್ತಿಲ್ಲ. ಸಂಜೆ 8 ಗಂಟೆಯಾದರೂ ಧರಣಿ ಮುಂದುವರೆದಿತ್ತು.

ಫೋಟೊ: 20ವೈಡಿಆರ್8

ಕಾಲುವೆಗಳಿಗೆ ನೀರಿಗಾಗಿ ಆಗ್ರಹಿಸಿ ಶಹಾಪುರ ಬಂದ್‌ ಕರೆ ನೀಡಿದ್ದ ವೇಳೆ, ರೈತ ಮುಖಂಡರು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

-

20ವೈಡಿಆರ್9 : ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಶುಕ್ರವಾರ ಶಹಾಪುರ ಬಂದ್‌ ಕರೆ ನೀಡಿದ್ದ ವೇಳೆ ರೈತ ಮುಖಂಡ ಚೆನ್ನಪ್ಪ ಆನೆಗುಂದಿ ಮಾತನಾಡಿದರು.

-

20ವೈಡಿಆರ್10 : ಶುಕ್ರವಾರ ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಎತ್ತು‌ ಬಂಡಿಗಳನ್ನು ಹೆದ್ದಾರಿ ಮೇಲೆ ನಿಲ್ಲಿಸಿ, ಪ್ರತಿಭಟಿಸಿದರು.

-

20ವೈಡಿಆರ್11 : ಶುಕ್ರವಾರ ಶಹಾಪುರ ಬಂದ್‌ ವೇಳೆ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.