ಸ್ತ್ರೀ ವ್ಯಕ್ತಿ ಅಲ್ಲ ಶಕ್ತಿ: ಸುರೇಖಾ

| Published : Oct 20 2024, 01:55 AM IST

ಸಾರಾಂಶ

ಮಹಿಳೆಯ ಶಕ್ತಿ ಬರೀ ಕುಟುಂಬ ನಿರ್ವಹಣೆಗೆ ಸೀಮಿತವಾಗದೇ ತನ್ನೊಳಗಿರುವ ಪ್ರತಿಭೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ನಿಜವಾದ ಜನಪದ ಕಲೆ ಮಹಿಳೆಯರಲ್ಲಿ ಅಡಗಿದೆ.

ಧಾರವಾಡ:

ಸ್ತ್ರೀ ಒಂದು ವ್ಯಕ್ತಿಯಾಗಿರದೇ ಕುಟುಂಬದ ಶಕ್ತಿಯಾಗಿದ್ದಾರೆ. ಸದೃಢ ಸಮಾಜ ನಿರ್ಮಾಣ ಸ್ತ್ರೀಯಿಂದ ಸಾಧ್ಯ ಎಂದು ಆಕಾಶವಾಣಿಯ ಉದ್ಘೋಷಕಿ ಜಿ. ಸುರೇಖಾ ಸುರೇಶ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪ ಆಯೋಜಿಸಿದ್ದ ‘ಮಹಿಳೆ ಮತ್ತು ಕಲೆ’ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದರು.

ಮಹಿಳೆಯ ಶಕ್ತಿ ಬರೀ ಕುಟುಂಬ ನಿರ್ವಹಣೆಗೆ ಸೀಮಿತವಾಗದೇ ತನ್ನೊಳಗಿರುವ ಪ್ರತಿಭೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ನಿಜವಾದ ಜನಪದ ಕಲೆ ಮಹಿಳೆಯರಲ್ಲಿ ಅಡಗಿದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಕರ್ನಾಟಕ ವಿದ್ಯಾವರ್ಧಕ ಸಂಘದಂತೆ ಉಳಿದ ಸಂಘ-ಸಂಸ್ಥೆಗಳೂ ವೇದಿಕೆಯನ್ನು ಕಲ್ಪಿಸಿ ಕೊಡುವಂತಾಗಬೇಕು ಎಂದರು.

ಮಹಿಳೆಯರಿಗಾಗಿ ಕಿರುನಾಟಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯ ನಿರ್ಣಾಯಕರಾಗಿ ಸೀತಾ ಛಪ್ಪರ, ಆರತಿ ದೇವ ಶಿಖಾಮಣಿ ಮತ್ತು ಡಾ. ಪ್ರಕಾಶ ಮಲ್ಲಿಗವಾಡ ಆಗಮಿಸಿದ್ದರು. ಪ್ರಮೀಳಾ ಜಕ್ಕಣ್ಣವರ ಭಕ್ತಿಗೀತೆ, ಡಾ. ನಿರ್ಮಲಾ ಮತ್ತು ಮಂಗಲಾ ಚಿಗಟೇರಿ ಭಾವಗೀತೆ, ಮುತ್ತು ಹಿರೇಮಠ ಚಲನಚಿತ್ರಗೀತೆ ಹಾಗೂ ಕಸ್ತೂರಿ ಮತ್ತು ಸಂಗಡಿಗರು ಜನಪದಗೀತೆ ಪ್ರಸ್ತುತ ಪಡಿಸಿದರು.

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಂಟಪದ ಸಂಚಾಲಕಿ ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಸುಧಾ ಹುಲಗೂರ ಪ್ರಾರ್ಥಿಸಿದರು. ಶಾರದಾ ಕೌದಿ ಪರಿಚಯಿಸಿದರು. ಡಾ. ವಿ. ಶಾರದಾ ನಿರೂಪಿಸಿದರು. ಜ್ಯೋತಿ ಭಾವಿಕಟ್ಟಿ ವಂದಿಸಿದರು.