ಸಾರಾಂಶ
ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ, ಯೋಗ್ಯತೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಇದ್ದು, ಮನಸ್ಸು ಮಾಡಿದರೆ ಮುಂದೆ ಮಲ್ಲಿಕಾರ್ಜುನ ಮುಖ್ಯಮಂತ್ರಿಯೂ ಆಗಬಹುದು ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದಿದ್ದಾರೆ.
ದಾವಣಗೆರೆ: ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ, ಯೋಗ್ಯತೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಇದ್ದು, ಮನಸ್ಸು ಮಾಡಿದರೆ ಮುಂದೆ ಮಲ್ಲಿಕಾರ್ಜುನ ಮುಖ್ಯಮಂತ್ರಿಯೂ ಆಗಬಹುದು ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲೂಕಿನ ಆನಗೋಡು ಸಮೀಪದ ಉಳುಪಿನಕಟ್ಟೆ ಕ್ರಾಸ್ ಬಳಿ ಶುಕ್ರವಾರ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿಯಿಂದ ದಿವಂಗತ ಓಬೇನಹಳ್ಳಿ ಕಲ್ಲಿಂಗಪ್ಪ, ದಿವಂಗತ ಸಿದ್ದನೂರು ನಾಗರಾಜಾಚಾರ್‌ರ 32ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಒಬ್ಬ ನಿಜವಾದ ನೇತಾರ, ನಾಯಕನಾಗುವ ಎಲ್ಲಾ ಜವಾಬ್ಧಾರಿ, ಅರ್ಹತೆ ಮಲ್ಲಿಕಾರ್ಜುನರಿಗೆ ಇದ್ದೇ ಇದೆ ಎಂದರು.ಸಿಎಂ ಆಗುವ ಅರ್ಹತೆ ಹೊಂದಿರುವ ಮಲ್ಲಿಕಾರ್ಜುನ ಸೋಲು-ಗೆಲವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಪ್ರತಿ ಕೆಲಸವೂ ಅಚ್ಚುಕಟ್ಟಾಗಿರಬೇಕೆಂಬು ಆಲೋಚನೆ ಮಾಡುವ ಮಲ್ಲಿಕಾರ್ಜುನರಿಗೆ ರಾಜ್ಯವನ್ನು ಮುನ್ನಡೆಸುವ ಶಕ್ತಿ, ಸಾಮರ್ಥ್ಯವೂ ಇದೆ. ಈ ಹಿಂದಿನ ಚುನಾವಣೆಯಲ್ಲಿ ಎಸ್ಸೆಸ್ ಮಲ್ಲಿಕಾರ್ಜುನ ಸೋತಾಗ ತಾವೆಷ್ಟೇ ಅಭಿವೃದ್ಧಿ ಕೆಲಸ ಕೈಗೊಂಡರೂ, ಜನರು ಕೈಹಿಡಿಯಲಿಲ್ಲವೆಂದು ಬೇಸರದಿಂದ ರಾಜಕೀಯವೇ ಬೇಡವೆಂದು ನಿರ್ಧರಿಸಿದ್ದರು. ಈ ಮಾತನ್ನು ತಮ್ಮ ಬಳಿಯೂ ಹೇಳಿದ್ದರು ಎಂದು ಮೆಲಕು ಹಾಕಿದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ ಮಾತನಾಡಿ, ಈ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಲು 32 ವರ್ಷದಿಂದ ಪ್ರಯತ್ನ ನಡೆದಿದೆ. ಈ ಜಾಗಕ್ಕೆ ದೇವೇಗೌಡರು, ಪಾಟೀಲ ಪುಟ್ಟಪ್ಪ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕ ನಾಯಕರು ಬಂದುಹೋಗಿದ್ದಾರೆ. ಆದರೂ, ಸಮುದಾಯ ಭವನದ ಮಾತ್ರ ನಿರ್ಮಾಣವಾಗಿಲ್ಲ ಎಂದು ಬೇಸರಿಸಿದರು.- - - -13ಕೆಡಿವಿಜಿ6: