ಸಾರಾಂಶ
ಕನ್ನಡಪ್ರಭ ವಾರ್ತೆ ಸರಗೂರುಸರಗೂರು ತಾಲೂಕು ತ್ರಿಮತಸ್ಥ ಬ್ರಾಹ್ಮಣ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಶಾಂಭಮೂರ್ತಿ ಹಾಗೂ ಅಧ್ಯಕ್ಷ ಎ. ಗುರುಪ್ರಸಾದ್ ಅವರ ನೇತೃತ್ವದಲ್ಲಿ ನಡೆಯಿತು.ಮುಖ್ಯಅತಿಥಿಗಳಾಗಿ ಮೈಸೂರು ಯೋಗ ಅಸೋಸಿಯೇಷನ್ ನ ಅಧ್ಯಕ್ಷ ತಿರುಮಲ ಯೋಗಪ್ರಕಾಶ್ ಮಾತನಾಡಿ, ಜೀವನದಿಂದ ಮನುಷ್ಯ ಆರೋಗ್ಯಕರವಾಗಿ ದೀರ್ಘಾಯುಷಿಯಾಗಿ ಜೀವಿಸಬಲ್ಲ, ಯೋಗದ ಮಹತ್ವವನ್ನು ಸಮಾಜಕ್ಕೆ ತಿಳಿಸುವಲ್ಲಿ ಬ್ರಾಹ್ಮಣ ಸಮಾಜವು ಪ್ರಮುಖ ಪಾತ್ರ ವಹಿಸುತ್ತಿದೆ. ಸರ್ ಎಂ. ವಿಶ್ವೇಶ್ವರಯ್ಯ, ಬಿವಿಕೆ ಅಯ್ಯಂಗಾರ್, ಇನ್ನು ಹಲವಾರು ಮಹನೀಯರು ಸಮಾಜದ ಒಳಿತಿಗಾಗಿ ಶ್ರಮಿಸಿದ್ದಾರೆ. ವೇದ, ಉಪನಿಷತ್, ರಾಮಾಯಣ, ಮಹಾಭಾರತ, ಇವುಗಳನ್ನು ಉಳಿಸಿ, ತಿಳಿಸಿ, ಬೆಳೆಸುವಲ್ಲಿ ಬ್ರಾಹ್ಮಣರ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದರು.ಅಧ್ಯಕ್ಷ ಎ. ಗುರುಪ್ರಸಾದ್ ಮಾತನಾಡಿ, ತ್ರಿಮತಸ್ಥ ಬ್ರಾಹ್ಮಣರು ಒಟ್ಟಾಗಿ ಸಮುದಾಯದ ಏಳಿಗೆಗೆ ಶ್ರಮಿಸಬೇಕು ಹಾಗೂ ಬೇರೆಲ್ಲ ಸಮುದಾಯಗಳೊಂದಿಗೆ ಬ್ರಾಹ್ಮಣ ಸಮಾಜ ಅನ್ಯೋನ್ಯವಾಗಿ ಗ್ರಾಮಗಳಲ್ಲಿ ಸಹಕಾರ ನೀಡುತ್ತಾ ಗ್ರಾಮದ ಏಳಿಗೆಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.ಯುವ ಚಲನಚಿತ್ರ ನಟ ಅರ್ಜುನ್ ಕೌಂಡಿನ್ಯ ಭಾಗವಹಿಸಿದ್ದರು. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು. ಸದಸ್ಯರಾದ ಶಶಿಧರ್, ಗೋಪಿನಾಥ್, ದಿವಾಕರ್, ನಾರಾಯಣ್ ,ರಮೇಶ್, ಹರೀಶ್, ರವಿದಾಸ್, ಗಣೇಶ್, ಪ್ರಮೀಳಾ ಶಾಂಬುಮೂರ್ತಿ, ವಿಜಯಲಕ್ಷ್ಮಿ ಸುಬ್ಬಣ್ಣ, ವಾಣಿ ನಾರಾಯಣ, ಸುಗುಣ ಶ್ರೀವತ್ಸ, ಸಂದ್ಯಾ ಹರೀಶ್, ರಮ್ಯಾಪಾಟೀಲ್, ಲತಾ ಶಶಿಧರ್, ಲತಾ ಶೇಷಾದ್ರಿ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರು, ತಾಲೂಕಿನ ವಿಪ್ರ ಬಾಂಧವರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.