ಅಂಬೇಡ್ಕರ್‌ಗೆ ಅವಮಾನ: ದಲಿತ ಸಂಘಟನೆಗಳ ಪ್ರತಿಭಟನೆ

| Published : Jan 25 2024, 02:04 AM IST

ಸಾರಾಂಶ

ಕೋಟನೂರ(ಡಿ) ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಪ್ರತಿಮೆಗೆ ಕಿಡಿಗೇಡಿಗಳು ಮಾಡಿದ ಅವಮಾನ ಖಂಡಿಸಿ ಚಿಂಚೋಳಿ ಪಟ್ಟಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ದಲಿತ ಪ್ಯಾಂಥರ್ಸ್‌ ಮತ್ತು ಪ್ರಗತಿ ಸಂಘಟನೆಗಳ ಒಕ್ಕೂಟಗಳು ಭಾರಿ ಪ್ರತಿಭಟನೆ ನಡೆಸಿ, ಕನಕದಾಸ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಕಲಬುರಗಿ ನಗರದ ಕೋಟನೂರ(ಡಿ) ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಪ್ರತಿಮೆಗೆ ಕಿಡಿಗೇಡಿಗಳು ಮಾಡಿದ ಅವಮಾನ ಖಂಡಿಸಿ ಚಿಂಚೋಳಿ ಪಟ್ಟಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ದಲಿತ ಪ್ಯಾಂಥರ್ಸ್‌ ಮತ್ತು ಪ್ರಗತಿ ಸಂಘಟನೆಗಳ ಒಕ್ಕೂಟಗಳು ಭಾರಿ ಪ್ರತಿಭಟನೆ ನಡೆಸಿ, ಕನಕದಾಸ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಅಂಬೇಡ್ಕರ್‌ ಪ್ರತಿಮೆಗೆ ಕಿಡಿಗೇಡಿಗಳು ಅವಮಾನಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ದಲಿತ ಸಂಘಟನೆ ಒಕ್ಕೂಟಗಳ ಮುಖಂಡರು ಪಟ್ಟಣದ ಅಂಬೇಡ್ಕರ್‌ ವೃತ್ತದಿಂದ ಚಂದಾಪೂರ ಕನಕದಾಸ ವೃತ್ತದವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು. ರಾಜ್ಯದಲ್ಲಿ ಮಹಾತ್ಮರ, ದೇಶಭಕ್ತರ ಮತ್ತು ಮಹಾನ್ ನಾಯಕರ ಪ್ರತಿಮೆಗಳಿಗೆ ಕಿಡಿಗೇಡಿಗಳು ಅವಮಾನಿಸುವ ಘಟನೆಗಳು ಆಗಾಗ ನಡೆಯುತ್ತಿವೆ. ಸರ್ಕಾರ ಪ್ರತಿಯೊಂದು ಪ್ರತಿಮೆ ಹತ್ತಿರ ಪೊಲೀಸ ಬಿಗಿ ಭದ್ರತೆ ಆಯೋಜಿಸಬೇಕು ಮತ್ತು ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲಿ ದಲಿತ ಮುಖಂಡರು, ಪುರಸಭೆ ಸದಸ್ಯ ಆನಂದ ಟೈಗರ, ಆರ್‌.ಗಣಪತರಾವ, ಗೌತಮ ಬೊಮ್ಮನಳ್ಳಿ, ಮಾರುತಿ ಗಂಜಗಿರಿ, ಅಮರ ಲೊಡನೋರ, ಗೋಪಾಲ ಗಾರಂಪಳ್ಳಿ, ಹಣಮಂತ ಪೂಜಾರಿ, ಕೆ.ಎಮ.ಬಾರಿ, ಚಂದ್ರಕಾಂತ ಫಾಸ್ಟರ, ವಾಮನರಾವ ಕೊರವಿ, ಪ್ರಥ್ವಿ ಚಿಮ್ಮಾಇದಲಾಯಿ, ಸುಭಾಷ ತಾಡಪಳ್ಳಿ ಘಟನೆ ಖಂಡಿಸಿ ಕಿಡಿಗೇಡಿಗಳನ್ನು ಬಂಧಿಸಿ ಅವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.