ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯ ೨೦೨೬-೨೭ನೇ ಸಾಲಿನ ಶಾಲಾ ಸಂಸತ್‌ ಚುನಾವಣೆ ಮತ್ತು ಸಂಸದ್ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಶನಿವಾರಸಂತೆ: ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯ ೨೦೨೬-೨೭ನೇ ಸಾಲಿನ ಶಾಲಾ ಸಂಸತ್‌ ಚುನಾವಣೆ ಮತ್ತು ಸಂಸದ್ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಶಾಲೆಯ ಸಾಕ್ಷರತಾ ಕ್ಲಬ್ ಮತ್ತು ಸಮಾಜ ವಿಜ್ಞಾನ ಸಂಘ ಆಶ್ರಯದಲ್ಲಿ ನಡೆದ ಸಂಸತ್‌ ಚುನಾವಣೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನ, ಚುನಾವಣೆ ಮಹತ್ವದ ಅರಿವು ಮೂಡಿಸುವ ಉದ್ದೇಶದಿಂದ ಸಾರ್ವತ್ರಿಕ ಚುನಾವಣೆ ಮಾದರಿಯಂತೆ ಚುನಾವಣೆ ಪ್ರಕ್ರಿಯೆಯನ್ನು ನಡೆಸಲಾಯಿತು. ಚುನಾವಣೆಯ ಚಿತ್ರಣ ಮೂಡಿಸಲು ಚುನಾವಣೆ ನೀತಿ ಸಂಹಿತೆ ಜಾರಿಗೊಳಿಸಿ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನೀಡಿ ಚುನಾವಣೆ ಪ್ರಚಾರಕ್ಕೆ ಅವಕಾಶ ನೀಡಿ ಮತದಾರರಿಗೆ ಮೊಬೈಲ್‌ನಲ್ಲಿ ಇವಿಎಂ ಮತಯಂತ್ರದ ಆ್ಯಪ್‌ ಡೌನ್‌ಲೋಡ್‌ ಮಾಡಿ ಸೃಷ್ಟಿಸಿ ಈ ಮೂಲಕ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿತ್ತು.

ಪ್ರಾಂಶುಪಾಲ ಕೆ.ಪ್ರಕಾಶ್ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು ಶಾಲೆಯ ಶಿಕ್ಷಕರು ಸೇರಿದಂತೆ ಸಿಬ್ಬಂದಿ ಚುನಾವಣೆ ಪ್ರಕ್ರಿಯೆಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದರು

ಪದಾಧಿಕಾರಿಗಳು:

ಎಂ.ಜಿ.ಶ್ರೇಯಸ್ (ಶಾಲಾ ನಾಯಕ), ಸಿ.ವೈ.ನಿಶಾ (ಶಾಲಾ ನಾಯಕಿ, ಎಚ್.ಎಂ.ಲಿಖಿತ್ (ಶಾಲಾ ಉಪ ನಾಯಕ), ಎಂ.ವಿ.ಸಂಪ್ರತಿ (ಶಾಲಾ ಉಪ ನಾಯಕಿ), ಟಿ.ಡಿ.ನಿಶಾಂತ್ ಮತ್ತು ಎಸ್.ಯು. ವರ್ಷ (ಶಾಲಾ ಗೃಹ ಮಂತ್ರಿ), ಎಂ.ಮುಖೇಶ್ ಮತ್ತು ಎ.ಎಂ.ಯಶ್ಮಿತ (ಶಿಕ್ಷಣ ಮಂತ್ರಿ), ಜೆ.ಜಿ.ಮನ್ವಿತ್ ಮತ್ತು ಹೆಚ್.ಜಿ.ತೀರ್ಥ (ಸಾಂಸ್ಕೃತಿಕ ಮಂತ್ರಿ), ಎಂ.ಗಗನ್ ಮತ್ತು ಎಚ್.ಎಚ್.ಲಿಖಿತ (ಆರೋಗ್ಯ ಮಂತ್ರಿ), ಬಿ.ಎಂ.ನಂಜುಂಡಿ ಮತ್ತು ಎ.ಆರ್.ಅರ್ಪಿತ (ಕ್ರೀಡಾ ಮಂತ್ರಿ), ಎಚ್.ಡಿ.ಲಿಖಿತ್ ಮತ್ತು ಎಸ್.ಟಿ.ಸೋನಿಕಾ (ಆಹಾರ ಮಂತ್ರಿ), ಎಸ್.ಎಂ.ಕೌಶಿಕ್ ಮತ್ತು ವೈ.ಆರ್.ಋಷಿ (ವಾರ್ತಾ ಮಂತ್ರಿ), ಎಚ್.ಆರ್.ಮಿಥುನ್ ಮತ್ತು ಮೌಲ್ಯ (ಸ್ವಚ್ಚತ್ತಾ ಮಂತ್ರಿ), ಗೌತ್‌ಮ್ ಪ್ರೀತ್ ಮತ್ತು ಎಚ್.ಡಿ.ಯಶ್ಮಿತ (ಶಿಸ್ತು ಮಂತ್ರಿ), ಲಾಂಛನ ಅಯ್ಯಪ್ಪ ಮತ್ತು ಜಿ.ಆರ್.ವರ್ಷ (ತೋಟಾಗಾರಿಕಾ ಮಂತ್ರಿ), ಕೆ.ಆರ್.ಪೃಥ್ವಿಶೆಟ್ಟಿ ಮತ್ತು ಎಚ್.ಎಂ.ಲಿಪಿಕ (ಮಾಹಿತಿ ತಂತ್ರಜ್ಞಾನ ಮಂತ್ರಿ)