ಸಾರಾಂಶ
ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಮೇಲೆ ಅಪಪ್ರಚಾರ ಮತ್ತು ಕ್ಷೇತ್ರಕ್ಕೆ ಕಳಂಕ ತರಲು ನಡೆಸುತ್ತಿರುವ ಹುನ್ನಾರವನ್ನು ವಿರೋಧಿಸಿ ಸೋಮವಾರ ಶನಿವಾರಸಂತೆ ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಮೇಲೆ ಅಪಪ್ರಚಾರ ಮತ್ತು ಕ್ಷೇತ್ರಕ್ಕೆ ಕಳಂಕ ತರಲು ನಡೆಸುತ್ತಿರುವ ಹುನ್ನಾರವನ್ನು ವಿರೋಧಿಸಿ ಸೋಮವಾರ ಶನಿವಾರಸಂತೆ ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಯಿತು.ಸೋಮವಾರ ಬೆಳಗ್ಗೆ ಗುಡುಗಳಲೆ ಜಂಕ್ಷನ್‍ನಿಂದ ಮುಖ್ಯ ರಸ್ತೆ ಮೂಲಕ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಬನ್ನಿ ಮಂಟಪದ ವರೆಗೆ ಹೊರಟ ಮೌನ ಮೆರವಣಿಗೆಯಲ್ಲಿ ಪಾದಯಾತ್ರೆ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿಂದೂಪರ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರತಿಭಟನಾಗಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದು ಮುಖಂಡ ಎಸ್.ಎನ್.ರಘು, ಈ ಹಿಂದೆಯೂ ಹಲವು ಭಯೋತ್ಪಾಧಕ ಚಟುವಟಿಕೆಯಲ್ಲಿ ತೊಡಗಿದ್ದ ಮಟ್ಟಣ್ಣನವರ್ ಮತ್ತು ತಿಮರೋಡಿ ಸೇರಿದಂತೆ ಇತರರು ನಿರಂತರವಾಗಿ ಹಿಂದೂ ದೇವಾಲಯ ಹಾಗೂ ಹಿಂದೂಪರ ಹೋರಾಟಗಾರರನ್ನು ತುಳಿಯಲು ಪ್ರಯತ್ನ ಪಡುತ್ತಿದ್ದಾರೆ. ಇವರಿಗೆ ಯಾರು ಹಣ ನೀಡುತ್ತಿದ್ದಾರೆ ಮತ್ತು ಇವರನ್ನು ಯಾರು ಬೆಂಬಲಿಸುತ್ತಿದ್ದಾರೆ ಎಂದು ತನಿಖೆ ಆಗಬೇಕು ಎಂದು ಆಗ್ರಹಿಸಿದರು.ಹಿಂದು ಮುಖಂಡ ಬಿ.ಎಸ್.ಅನಂತ್ ಕುಮಾರ್, ರಕ್ಷಿತ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿಯ ಪ್ರಮುಖರಾದ ಮಂಜುನಾಥ್ ಅಪ್ಪಶೆಟ್ಟಳ್ಳಿ, ಪಿ.ಎನ್.ಸುಮಂತ್, ಆರ್.ಸಿ.ಪಾಲಾಕ್ಷ, ಮಹೇಶ್, ಅಭಿಷೇಕ್ ಹಾಲ್ಕೆನೆ, ಹಿಂದೂಪರ ಪ್ರಮುಖರಾದ ಪುನಿತ್ ತಾಳೂರು, ಯತೀಶ್, ಬಿ.ಜಿ.ಪೃಥ್ವಿ, ಅಶ್ವಥ್ ಬೆಂಬಳೂರು, ಕಿರಣ್ ಅಪ್ಪಶೆಟ್ಟಳ್ಳಿ, ಪ್ರವೀಣ್, ಪ್ರಭಾಕರ್, ದಿನೇಶ್, ಹೇಮಂತ್ ಮುಂತಾದವರು ಇದ್ದರು.