ಸಾರಾಂಶ
ದೊಡ್ಡಬಳ್ಳಾಪುರ: ಬೆಂಗಳೂರು ನಗರ ಜಿಲ್ಲಾ ಟೇಕ್ವಾಂಡೋ ಸಂಸ್ಥೆ, ಕರ್ನಾಟಕ ಟೇಕ್ವಾಂಡೋ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ 42ನೇ ಕರ್ನಾಟಕ ರಾಜ್ಯ ಸಬ್ ಜೂನಿಯರ್ ಮತ್ತು 11ನೇ ಕೆಡೆಟ್‌ಕ್ಯುರುಗಿ ಟೇಕ್ವಾಂಡೋ ಚಾಂಪಿಯನ್‌ಷಿಪ್-2025ನಲ್ಲಿ ದೊಡ್ಡಬಳ್ಳಾಪುರದ ಶಂಕರ್ ಟೇಕ್ವಾಂಡೋ ಅಕಾಡೆಮಿಯ ಕ್ರೀಡಾಪಟುಗಳು ಪಾಲ್ಗೊಂಡು ಹಲವು ವಿಭಾಗಗಳಲ್ಲಿ ವಿಜೇತರಾಗಿದ್ದಾರೆ.

ಸಬ್ ಜೂನಿಯರ್ ಬಾಲಕರ 8ರಿಂದ 12 ವರ್ಷದ ವಿಭಾಗದಲ್ಲಿ ನಂದನ್ ಡಿ.ಯು(ಚಿನ್ನ), ಎಸ್.ವರ್ಷನ್(ಚಿನ್ನ), ಮನ್ವಿತ್‌ಗೌಡ ಎನ್(ಬೆಳ್ಳಿ), ಹೃತಿಕ್ ಆರ್(ಕಂಚು), ಸಬ್‌ಜೂನಿಯರ್ ಬಾಲಕಿಯರ 8 ರಿಂದ 12 ವರ್ಷದೊಳಗಿನ ವಿಭಾಗದಲ್ಲಿ ಚಿನ್ಮಯಿ(ಬೆಳ್ಳಿ), ದೀಕ್ಷ.ಪಿ(ಬೆಳ್ಳಿ), ತಮನ್ನಾ ಆರ್(ಬೆಳ್ಳಿ), ಸಬ್ ಜೂನಿಯರ್ ಬಾಲಕರ 15 ರಿಂದ 18 ವರ್ಷದೊಳಗಿನ ವಿಭಾಗದಲ್ಲಿ ಯಶ್ವಂತ್ ಎನ್(ಚಿನ್ನ), 18 ವರ್ಷದ ವಿಭಾಗದಲ್ಲಿ ರೋಹಿತ್ ಜಿ(ಚಿನ್ನ) ವಿಜೇತರಾಗಿದ್ದಾರೆ.ಯಶ್ವಂತ್ ಎನ್ , ಎನ್.ವರ್ಷನ್, ಡಿ.ಯು.ನಂದನ್, ಜಿ.ರೋಹಿತ್, ಶಾನ್ವಿ ಎಸ್, ಶಿವಾನಿ, ಜಿ.ಯುಗಾಂತ್, ವೈ.ಎ.ಆಯುಶ್ ಗೌಡ, ಎನ್.ವಿಕ್ರಾಂತ್ ಗೌಡ, ವಿ.ಲಹರಿ, ನೂರೈನ್ ಮತ್ತಿತರರು ಬೆಂಗಳೂರು, ದೆಹಲಿ ಸೇರಿದಂತೆ ವಿವಿದೆಡೆ ನಡೆವ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿದ್ದಾರೆ.
ವಿಜೇತರನ್ನು ಬೆಂ.ಗ್ರಾ ಜಿಲ್ಲಾ ಟೇಕ್ವಾಂಡೋ ಸಂಸ್ಥೆ ಕಾರ್ಯದರ್ಶಿ ನಾರಾಯಣಸ್ವಾಮಿ, ಶಂಕರ್ ಟೇಕ್ವಾಂಡೋ ಅಕಾಡೆಮಿಯ ರಮೇಶ್, ಶಂಕರ್, ರಮ್ಯ ಮತ್ತಿತರರು ಅಭಿನಂದಿಸಿದ್ದಾರೆ.ಫೋಟೋ-
20ಕೆಡಿಬಿಪಿ1- ರಾಜ್ಯ ಮಟ್ಟದ ಟೇಕ್ವಾಂಡೋ ಚಾಂಪಿಯನ್‌ಷಿಪ್-2025ನಲ್ಲಿ ದೊಡ್ಡಬಳ್ಳಾಪುರದ ಶಂಕರ್ ಟೇಕ್ವಾಂಡೋ ಅಕಾಡೆಮಿಯ ಕ್ರೀಡಾಪಟುಗಳು ಪಾಲ್ಗೊಂಡು ಹಲವು ವಿಭಾಗಗಳಲ್ಲಿ ವಿಜೇತರಾಗಿದ್ದಾರೆ.