ಸಿಂಧನೂರು ಮಿನಿವಿಧಾನಸೌಧದಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ

| Published : May 13 2024, 12:03 AM IST

ಸಿಂಧನೂರು ಮಿನಿವಿಧಾನಸೌಧದಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನ ಮಿನಿವಿಧಾನಸೌಧ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಸಿಂಧನೂರು: ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಭಾನುವಾರ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತ್ಯುತ್ಸವ ಆಚರಣೆ ಮಾಡಲಾಯಿತು.

ಸಂಸ್ಕಾರ ಭಾರತಿ ಅಧ್ಯಕ್ಷ ವೆಂಕಣ್ಣಾಚಾರ್ ಜೋಶಿ ದೋಟಿಹಾಳ ಮಾತನಾಡಿ, ಗೀತಾಚಾರ್ಯ ಮತ್ತು ಶ್ರೀಕೃಷ್ಣನ ಭಗವದ್ಗೀತೆ ಸಾರ ಸಂದೇಶವನ್ನು ಜನಮಾನಸದಲ್ಲಿ ಬೇರೂರುವಂತೆ ಮಾಡಿದರು. ಅಲ್ಲದೆ ಅವನತಿಯತ್ತ ಸಾಗುತ್ತಿದ್ದ ಹಿಂದೂ ಧರ್ಮದ ಉಳುವಿಗಾಗಿ ದೇಶದಾದ್ಯಂತ ಪ್ರವಾಸ ಕೈಗೊಂಡು ಧರ್ಮ ಸಂರಕ್ಷಣೆ ಮಾಡಿದವರು ಶಂಕರಾಚಾರ್ಯರು ಎಂದು ಹೇಳಿದರು.

ನಂತರ ಅರ್ಚಕ ರಾಮಚಂದ್ರ ಸೋಮಾಯಾಜಿ ಮಾತನಾಡಿದರು. ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ಗೋವಿಂದರಾವ್, ಶಿರಸ್ತೇದಾರ್ ಅಂಬಾದಾಸ್, ಮುಖಂಡರಾದ ನರಸಿಂಹಾಚಾರ್ ಮಠಾಧಿಕಾರ್, ಮನೋಹರ್ರಾವ್ ಕುಲಕರ್ಣಿ, ಹನುಮಂತಾಚಾರ್ ಮಸ್ಕಿ, ಎಂ.ವಿ.ಮೋಹನ್, ಪ್ರಹ್ಲಾದಗುಡಿ, ಶಿವಮೊಗ್ಗ ಶೇಷಾದ್ರಿ, ರಾಜು ಬಂಡಿ, ಆನಂದ ಗೌರ್ಕರ್, ಹನುಮೇಶ ಜಾಗೀರದಾರ್, ಈರೇಶ ಇಲ್ಲೂರು, ಪ್ರಭಾಕರ್ ಕುಲಕರ್ಣಿ, ರಾಘವೇಂದ್ರ ಸಾಸವಿಹಾಳ, ವೆಂಕಟೇಶ ಸಿದ್ರಾಂಪುರ, ದಿನೇಶ ಹೆಬ್ಬಾಳ ಇದ್ದರು.