ಹಿಂದೂ ಧರ್ಮಕ್ಕೆ ಶಂಕರಾಚಾರ್ಯರ ಕೊಡುಗೆ ಅಪಾರ

| Published : May 13 2024, 01:09 AM IST

ಸಾರಾಂಶ

ರಾಮಮಂದಿರದಲ್ಲಿ ತಾಲೂಕು ಬ್ರಾಹ್ಮಣ ಸಂಘದಿಂದ ಶಂಕರಾಚಾರ್ಯ ಜಯಂತಿ ಆಚರಣೆ

ಕನ್ನಡಪ್ರಭ ವಾರ್ತೆ ಚಳ್ಳಕೆರೆ:

ಭಗವಾನ್‌ ಶಂಕರಾಚಾರ್ಯರು ಅಲ್ಪಾವಧಿ ಕಾಲ ಜೀವಿಸಿದರು ಸಹಿತ ಹಿಂದೂ ಧರ್ಮದ ಉಳಿವಿಗಾಗಿ ಅವರ ಸೇವೆ ಅಪಾರವಾದದ್ದು ಎಂದು ಧಾರ್ಮಿಕ ಪ್ರವಚನಕಾರ ಅನಂತಕೃಷ್ಣ ಜೋಯಿಸ್‌ ಹೇಳಿದರು.

ಭಾನುವಾರ ರಾಮಮಂದಿರದಲ್ಲಿ ತಾಲೂಕು ಬ್ರಾಹ್ಮಣ ಸಂಘ ಹಾಗೂ ಸದ್ಭಕ್ತರು ಹಮ್ಮಿಕೊಂಡಿದ್ದ ಶಂಕರಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿ, ಧಾರ್ಮಿಕ ಜಾಗೃತಿ ಮೂಡಿದಾಗ ಮಾತ್ರ ವ್ಯಕ್ತಿ ಸನ್ಮಾರ್ಗದಲ್ಲಿ ನಡೆಯುತ್ತಾನೆ. ಸನ್ಮಾರ್ಗದ ಸದ್ಗುಣಗಳನ್ನು ಶಂಕರಾಚಾರ್ಯರ ವಿಚಾರಧಾರೆಯಿಂದ ಪಡೆಯಬಹುದು. ಮಾನವ ಕುಲ ಇರುವರೆಗೆ ಅವರ ತತ್ವಾದರ್ಶಗಳು ಮಾರ್ಗದರ್ಶನವಾಗಿವೆ ಎಂದರು.

ಡಾ. ಅನಂತರಾಮ್‌ ಮಾತನಾಡಿ, ಶಂಕರಾಚಾರ್ಯರು ಬಾಲ್ಯದಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ, ಆಧ್ಯಾತ್ಮಿಕ ವಿಚಾರ ರೂಡಿಸಿಕೊಂಡವರು. ಅವರ ತತ್ವಾದರ್ಶಗಳು ಸದಾ ನಮಗೆ ದಾರಿದೀಪವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎಂ.ನಾಗರಾಜರಾವ್, ಕಾರ್ಯದರ್ಶಿ ಎಂ.ಸತ್ಯನಾರಾಯಣರಾವ್, ಖಜಾಂಚಿ ಜಿ.ಕೃಷ್ಣ್ಣಮೂರ್ತಿ, ನಿರ್ದೇಶಕ ಗಂಗಾಧರಭಟ್, ಸಿ.ಎಸ್.ಗೋಪಿನಾಥ, ಶಾಂತಮ್ಮ, ಶೈಲಜಾ, ಮಹಿಳಾ ಘಟಕದ ಅಧ್ಯಕ್ಷೆ ಸೀತಾಲಕ್ಷ್ಮೀ ವಾದಿರಾಜ್, ಲಕ್ಷ್ಮೀ ಶ್ರೀವತ್ಸ, ಪಾಲ್ಗೊಂಡಿದ್ದರು.