ಸಾರಾಂಶ
ಸೊರಬ ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಭಾನುವಾರ ಶ್ರೀ ಬಸವೇಶ್ವರ ಮಹಾರಥೋತ್ಸವ ಜಾನಪದ ಕಲಾ ಮೇಳಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಬಸವೇಶ್ವರ ದೇವಸ್ಥಾನದಿಂದ 1 ಕಿ.ಮೀ ದೂರದ ಹಕ್ಕಲ ಬಸವೇಶ್ವರ ದೇವಸ್ಥಾನವರೆಗೂ ಮಹಾರಥವನ್ನು ಶ್ರದ್ಧಾ-ಭಕ್ತಿಯಿಂದ ಎಳೆದು ಭಕ್ತಿ ಸಮರ್ಪಿಸಲಾಯಿತು. ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮತ್ತು ನಂದಿಕೋಲು ಉತ್ತವ, ಹರೂರು ಗ್ರಾಮದ ಶ್ರೀ ಮಾರಿಕಾಂಬೆ ಪಲ್ಲಕ್ಕಿ ಹಾಗೂ ಅಂಡಿಗೆ ಗ್ರಾಮದ ನಂದಿಕೋಲು ಉತ್ಸವ ಸಾಂಗವಾಗಿ ನೆರವೇರಿತು. ಬಸವೇಶ್ವರ ಹಾಗೂ ಮಾರಿದೇವತೆ ನಡುವೆ ಓಕುಳಿ, ಉಂಗುರ ಹುಡುಕುವ ಕಾರ್ಯಕ್ರಮಗಳು ನಡೆದವು.
ಸೊರಬ: ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಭಾನುವಾರ ಶ್ರೀ ಬಸವೇಶ್ವರ ಮಹಾರಥೋತ್ಸವ ಜಾನಪದ ಕಲಾ ಮೇಳಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಚಂದ್ರಶೇಖರಯ್ಯ ಶಾಸ್ತ್ರಿ ಹಿರೇಮಠ ನೇತೃತ್ವದಲ್ಲಿ ಪೂಜಾ, ವಿಧಿವಿಧಾನಗಳು ನೆರವೇರಿದವು. ಗ್ರಾಮದ ಬಸವೇಶ್ವರ ದೇವಸ್ಥಾನದಿಂದ 1 ಕಿ.ಮೀ ದೂರದ ಹಕ್ಕಲ ಬಸವೇಶ್ವರ ದೇವಸ್ಥಾನವರೆಗೂ ಮಹಾರಥವನ್ನು ಶ್ರದ್ಧಾ-ಭಕ್ತಿಯಿಂದ ಎಳೆದು ಭಕ್ತಿ ಸಮರ್ಪಿಸಲಾಯಿತು.ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮತ್ತು ನಂದಿಕೋಲು ಉತ್ತವ, ಹರೂರು ಗ್ರಾಮದ ಶ್ರೀ ಮಾರಿಕಾಂಬೆ ಪಲ್ಲಕ್ಕಿ ಹಾಗೂ ಅಂಡಿಗೆ ಗ್ರಾಮದ ನಂದಿಕೋಲು ಉತ್ಸವ ಸಾಂಗವಾಗಿ ನೆರವೇರಿತು. ಬಸವೇಶ್ವರ ಹಾಗೂ ಮಾರಿದೇವತೆ ನಡುವೆ ಓಕುಳಿ, ಉಂಗುರ ಹುಡುಕುವ ಕಾರ್ಯಕ್ರಮಗಳು ನಡೆದವು.
ಜೇಡಗೇರಿ ಗ್ರಾಮದ ಡೊಳ್ಳು ಕುಣಿತ, ತಮಟೆ ವಾದನ, ಇತರೆ ವಾದ್ಯಮೇಳಗಳು ರಥೋತ್ಸವಕ್ಕೆ ಮೆರಗು ನೀಡಿದವು. ಅಂಡಿಗೆ, ಹರೂರು, ತಾವರೇಗೊಪ್ಪ, ಕುಳವಳ್ಳಿ, ಕುಂಬತ್ತಿ, ಕೊಡಕಣಿ, ಉರಗನಹಳ್ಳಿ, ದೇವತಿಕೊಪ್ಪ, ಮಾವಲಿ ಇನ್ನಿತರೆ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಗ್ರಾಪಂ ಉಪಾಧ್ಯಕ್ಷೆ ನೀಲಮ್ಮ, ಸದಸ್ಯ ಎ.ಎಸ್. ಹೇಮಚಂದ್ರ, ಮಾಜಿ ಉಪಾಧ್ಯಕ್ಷೆ ಭಾಗ್ಯ ಈಶ್ವರಪ್ಪ, ಅಂಡಿಗೆ ಸಹಕಾರ ಸಂಘದ ಅಧ್ಯಕ್ಷ ಶಾಂತಪ್ಪ, ನಿರ್ದೇಶಕಿ ಪುಟ್ಟಮ್ಮ, ಮಾಜಿ ನಿರ್ದೇಶಕ ಮಂಜಪ್ಪ, ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮ, ದಿನೇಶ್, ಎ.ಎಸ್. ಶಿವಕುಮಾರ್, ಎ.ಒ. ಆನಂದ್, ರಾಜು, ಎಸ್.ಎಂ. ನೀಲೇಶ್, ಪ್ರವೀಣ್ ಕುಮಾರ್, ಮಧುಸೂಧನ್, ಉಮೇಶ್, ನೇಮರಾಜ್, ಎಸ್.ಎಲ್. ರವಿ ಗ್ರಾಮಸ್ಥರಿದ್ದರು.
- - - -19ಕೆಪಿಸೊರಬ02:ಸೊರಬ ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಮಹಾರಥೋತ್ಸವವು ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು.