ಜನವರಿ ೧೪ಕ್ಕೆ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಹಾರಥೋತ್ಸವ: ಭಕ್ತರಾದ ಲೋಕೇಶ್‌, ಮಲ್ಲಿಕಾರ್ಜುನ್

| Published : Jan 07 2025, 12:15 AM IST

ಜನವರಿ ೧೪ಕ್ಕೆ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಹಾರಥೋತ್ಸವ: ಭಕ್ತರಾದ ಲೋಕೇಶ್‌, ಮಲ್ಲಿಕಾರ್ಜುನ್
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಮುಮ್ಮಡಿ ಶಾಂತಲಿಂಗ ಶಿವಾಚಾರ್ಯರ ಮಹಾಸ್ವಾಮೀಜಿಯವರ ಮಹಾರಥೋತ್ಸವ ನಡೆಯಲಿದೆ ಎಂದು ಮಠದ ಭಕ್ತರಾದ ಲೋಕೇಶ್‌, ಮಲ್ಲಿಕಾರ್ಜುನ್ ಸ್ವಾಮಿ ತಿಳಿಸಿದರು. ಜಗಳೂರಿನಲ್ಲಿ ಕಣ್ವಕುಪ್ಪೆ ಮಠದ ಭಕ್ತರು ನಡೆಸಿದ ಪೂರ್ವಭಾವಿ ಸಭೆಯ ಬಳಿಕ ಮಾತನಾಡಿದರು.

ಮಾಹಿತಿ । ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ಆಯೋಜನೆ । ಪೂರ್ವಭಾವಿ ಸಭೆಯಲ್ಲಿ ತೀರ್ಮಾನ

ಕನ್ನಡಪ್ರಭ ವಾರ್ತೆ ಜಗಳೂರು

ತಾಲಕಿನ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ಜ.೧೪ರ ಮಂಗಳವಾರ 3 ಗಂಟೆಗೆ ಸಂಕ್ರಾತಿ ದಿನ ತಪೋಕ್ಷೇತ್ರ ಗವಿಮಠದ ಪಟ್ಟಾಧ್ಯಕ್ಷ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಮುಮ್ಮಡಿ ಶಾಂತಲಿಂಗ ಶಿವಾಚಾರ್ಯರ ಮಹಾಸ್ವಾಮೀಜಿಯವರ ಮಹಾರಥೋತ್ಸವ ನಡೆಯಲಿದೆ ಎಂದು ಮಠದ ಭಕ್ತರಾದ ಲೋಕೇಶ್‌, ಮಲ್ಲಿಕಾರ್ಜುನ್ ಸ್ವಾಮಿ ತಿಳಿಸಿದರು.

ನಗರದಲ್ಲಿ ತಪೋಕ್ಷೇತ್ರ ಕಣ್ವಕುಪ್ಪೆ ಮಠದ ಭಕ್ತರು ನಡೆಸಿದ ಪೂರ್ವಭಾವಿ ಸಭೆಯ ಬಳಿಕ ಮಾತನಾಡಿ, ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಗಳ ಶ್ರೀಗಳು, ನಾಡಿನ ಸಾಮಾಜಿಕ ಗಣ್ಯರು, ರಾಜಕೀಯ ಮುತ್ಸದ್ದಿಗಳು, ಕಲಾವಿದರು, ವಿದ್ಯಾಂಸರು ಮತ್ತು ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ಜ,೧೩ ರಂದು ಸೋಮವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ಜಗದ್ಗುರು ಪಂಚಾಚಾರ್ಯರ ಧ್ವಜಾರೋಹಣ ಮತ್ತು ಜಾತ್ರ ಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಜ,೧೪ ಮಂಗಳವಾರ ಉದಯ ಬ್ರಾಹ್ಮೀ ಮುಹೂರ್ತದಲ್ಲಿ ಧನುರ್ಮಾಸ ಪೂಜಾ ಮಂಗಳ,ಮತ್ತು ಮಕರ ಸಂಕ್ರಾಂತಿ ವಿಶೇಷ ಪೂಜಾ ಹಾಗೂ ಗುರು ಶಾಂತಲಿಂಗೇಶ್ವರ ರಥೋತ್ಸವ ಹಾಗೂ ತಪೋಕ್ಷೇತ್ರದ ಬ್ರಾಹ್ಮಿ ಮುಹೂರ್ತದಲ್ಲಿ ಗಂಗಾಪೂಜೆ, ಪಂಚಾಚಾರ್ಯ ದ್ವಜಾರೋಹಣವನ್ನು ನೆರವೇರಿಸಲಾಗುವುದು. ಗದ್ದುಗೆಗಳಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ,ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಶಾಂತಿ ಹೋಮಗಳನ್ನು ಮಾಡಲಾಗುವುದು. ಬೆಳಿಗ್ಗೆ ೧೧ ಗಂಟೆಯಿಂದ ಜಾತ್ರಾ ಮಹೋತ್ಸವದ ವಿಧಿ ವಿಧಾನಗಳುಹಾಗೂ ಬೆಳಗ್ಗೆ ೧೦ ರಿಂದ ಸಾರ್ವಜನಿಕರಿಗೆ ಸ್ಫಟಿಕ ಲಿಂಗವನ್ನು ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ ೨ ಗಂಟೆಗೆ ಮಕರ ಸಂಕ್ರಾತಿ ಧರ್ಮ ಸಂದೇಶ, ಸಂಜೆ ೩.೨೮ಕ್ಕೆ ಶ್ರೀ ಮಠದ ಕರ್ತೃ ಗವಿಶಾಂತಲಿಂಗೇಶ್ವರರ ಮಹಾರಥೋತ್ಸವ ಮತ್ತು ಉತ್ತರಾಯಣ ಪುಣ್ಯ ಪೂರ್ವಕಾಲದಲ್ಲಿ ದರ್ಶನದ ಜತೆಗೆ ಆಶೀರ್ವಾದ ನೀಡಲಾಗುವುದು ಎಂದು ತಿಳಿಸಿದರು.

ರಥೋತ್ಸವಕ್ಕೆ ಸುತ್ತಮುತ್ತಲಿನ ಜಿಲ್ಲೆಯಲ್ಲದೆ ನೆರೆ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಬರುತ್ತಾರೆ.ಗವಿಮಠಕ್ಕೆ ಹೋಗಲು ಜಗಳೂರಿನಿಂದ ಬಸ್ ಆಟೋ ವ್ಯವಸ್ಥೆಯು ಇರುತ್ತದೆ. ಆಡಳಿತ ಮಂಡಳಿಯವರು ತಿಳಿಸಿದರೆ.ಭಕ್ತದಿಗಳು ರೊಟ್ಟಿ ಪುಡಿಚಟ್ನಿಗಳನ್ನು ತರಲು ಸರ್ವರಿಗೂ ಮುಕ್ತ ಅವಕಾಶವಿರುತ್ತದೆ. ಈ ಪುಣ್ಯ ಪ್ರಧಾನವಾದ ಧರ್ಮಕಾರ್ಯದಲ್ಲಿ ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.

ಪೂರ್ವಭಾವಿ ಸಭೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು. ಮಠದ ಭಕ್ತರು. ಭಕ್ತ ಮಂಡಳಿಯವರು ಹಾಜರಿದ್ದರು.

ಕಣ್ಣಕುಪ್ಪೆ ಗವಿಮಠದ ಐತಿಹ್ಯ:

ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠಕ್ಕೆ ತನ್ನದೇ ಆದ ಇತಿಹಾಸವಿದೆ. ಇಲ್ಲಿ ಮದಕರಿ ನಾಯಕ ಆಳ್ವಿಕೆ ಮಾಡಿದ ಕೋಟೆ ಇದೆ. ಕಣ್ವ ಮಹರ್ಷಿಗಳು ಹಲವಾರು ವರ್ಷಗಳ ಕಾಲ ಈ ಕೇತ್ರದಲ್ಲಿ ತಪಸ್ಸನ್ನು ಮಾಡಿದರು ಎನ್ನುವ ಉಲ್ಲೇಖಗಳು ಇವೆ. ಈ ಕ್ಷೇತ್ರದಲ್ಲಿ ಹಲವಾರು ಪವಾಡಗಳು ಆಗಿವೆ.ಈ ಮೊದಲು ಶ್ರೀ ಗವಿ ಶಾಂತವೀರ ಯತೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಜಗಳೂರಿನಲ್ಲಿ ಜೀವ ಸಮಾಧಿಯಾಗಿದ್ದಾರೆ. ಇಮ್ಮಡಿ ಶಾಂತಲಿಂಗ ಶಿವಾಚಾರ್ಯರ ಮಹಾಸ್ವಾಮಿಗಳು ಐಕ್ಯ ಸ್ಥಳ ಶ್ರೀ ಕ್ಷೇತ್ರ ಕಂದಿಗೆರೆಯಾಗಿದ್ದು, ಮುಮ್ಮಡಿ ಶಾಂತಲಿಂಗ ಶಿವಾಚಾರ್ಯ ಮಹಸ್ವಾಮಿಗಳ ಐಕ್ಯ ಸ್ಥಳ ಕಣ್ವಕುಪ್ಪೆ ಮಠದಲ್ಲಿ ಆಗಿದೆ. ಇಬ್ಬರ ಗುರುಗಳ ರಥೋತ್ಸವಗಳು ಪ್ರತಿ ವರ್ಷ ನಡೆಯುತ್ತಿವೆ.