ಶಾಂತಲಿಂಗ ಶ್ರೀಗಳು ಮುಕ್ತ ಮನದ ಮೇರು ಹೃದಯಿ: ಸ್ವಾಮೀಜಿ

| Published : Aug 19 2024, 01:46 AM IST / Updated: Aug 19 2024, 01:47 AM IST

ಶಾಂತಲಿಂಗ ಶ್ರೀಗಳು ಮುಕ್ತ ಮನದ ಮೇರು ಹೃದಯಿ: ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ: ಅಮ್ಮಿನಬಾವಿ ಪಂಚಗೃಹ ಹಿರೇಮಠದ ಎಲ್ಲ ನೆಲೆ-ಮೂಲಗಳ ಗುರುತ್ವಾಧಿಕಾರವನ್ನು ತಮಗೆ ಧಾರೆ ಎರೆದಿರುವ ಗುರುಗಳಾದ ಶಾಂತಲಿಂಗ ಶಿವಾಚಾರ್ಯರು ಮುಕ್ತ ಮನದ ಮೇರು ಹೃದಯಿಗಳು ಎಂದು ಶ್ರೀಮಠದ ಕಿರಿಯ ಸ್ವಾಮೀಜಿ ಬಣ್ಣಿಸಿದರು.

ಧಾರವಾಡ: ಅಮ್ಮಿನಬಾವಿ ಪಂಚಗೃಹ ಹಿರೇಮಠದ ಎಲ್ಲ ನೆಲೆ-ಮೂಲಗಳ ಗುರುತ್ವಾಧಿಕಾರವನ್ನು ತಮಗೆ ಧಾರೆ ಎರೆದಿರುವ ಗುರುಗಳಾದ ಶಾಂತಲಿಂಗ ಶಿವಾಚಾರ್ಯರು ಮುಕ್ತ ಮನದ ಮೇರು ಹೃದಯಿಗಳು ಎಂದು ಶ್ರೀಮಠದ ಕಿರಿಯ ಸ್ವಾಮೀಜಿ ಬಣ್ಣಿಸಿದರು.

ಶ್ರೀಮಠದಲ್ಲಿ ಭಕ್ತ ಸಮೂಹ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ಶ್ರೀಗಳ 91ನೇ ವರ್ಧಂತಿ ಮಹೋತ್ಸವ ಹಾಗೂ ತುಲಾಭಾರ ಉದ್ಘಾಟಿಸಿದ ಅವರು, ಕೇವಲ ಹೆಸರಿಗೆ ಮಾತ್ರ ಉತ್ತರಾಧಿಕಾರಿ ಮಾಡಿಕೊಂಡು ಯಾವ ಅಧಿಕಾರವನ್ನೂ ಬಿಟ್ಟುಕೊಡದೇ ಎಲ್ಲವನ್ನೂ ತಮ್ಮ ಬಳಿಯೇ ಇಟ್ಟುಕೊಂಡ ದ್ವಂದ್ವದಲ್ಲಿರುವ ಮಠಗಳನ್ನು ಕಂಡಿದ್ದೇವೆ. ಆದರೆ ಗುರುಗಳು ಸಂಪೂರ್ಣ ಜವಾಬ್ದಾರಿಯನ್ನು ತಮಗೆ ಒಪ್ಪಿಸಿ ಮುಕ್ತರಾಗಿದ್ದಾರೆ ಎಂದರು.

ಭಕ್ತಗಣದ ವಿವಿಧ ತುಲಾಭಾರ ಸೇವೆಗಳನ್ನು ಸ್ವೀಕರಿಸಿ ಆಶೀರ್ವಚನ ನೀಡಿದ ಹಿರಿಯ ಸ್ವಾಮೀಜಿ, ಜನ್ಮ ನೀಡಿದ ತಂದೆ-ತಾಯಿ ಹಾಗೂ ಧರ್ಮ ದೀಕ್ಷೆ ನೀಡಿದ ಶ್ರೀಗುರುವಿನ ಋಣವನ್ನು ತೀರಿಸಲು ಎಲ್ಲರೂ ಸಂಕಲ್ಪಿಸಬೇಕು. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸಾಕ್ಷಾತ್ ಭಗವತ್ ಸ್ವರೂಪವೇ ಆಗಿರುವ ಶ್ರೀಗುರುವಿನ ಸೇವೆಗೆ ಸರ‍್ಪಿಸಿಕೊಂಡಾಗ ಮೋಕ್ಷ ಮಾರ್ಗದ ಬೆಳಗು ಕಾಣಸಿಗುತ್ತದೆ ಎಂದರು.

ಸಕ್ಕರೆ, ಬೆಲ್ಲ, ಅಕ್ಕಿ, ರವೆ, ತೆಂಗಿನಕಾಯಿ ಮತ್ತು ನಾಣ್ಯಗಳಿಂದ ತುಲಾಭಾರ ಸೇವೆಗಳನ್ನು ಸಲ್ಲಿಸಿದ ನಿವೃತ್ತ ಶಿಕ್ಷಕ ಗುರುಮೂರ್ತಿ ಯರಗಂಬಳಿಮಠ, ಶೋಭಾ ಯರಗಂಬಳಿಮಠ, ಪ್ರೇಮಾ ರುದ್ರಾಪೂರ (ಗುಡಿ), ಬಿ.ಸಿ. ಕೊಳ್ಳಿ, ಹೂವಿನ ಹಡಗಲಿ ತಾಲೂಕು ಹೊಳಗುಂದಿಯ ಗುರುಬಸವರಾಜ ಮತ್ತೂರಮಠ, ಪವನಕುಮಾರ ಮಲ್ಲಿಕಾರ್ಜು ಕುಸುಗಲ್ಲ, ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಸುನೀಲ ಗುಡಿ, ರಾಮಣ್ಣ ಜಕ್ಕಣ್ಣವರ, ಬಸಪ್ಪ ಉಗರಗೋಳ, ವಕೀಲ ಅಶೋಕ ಗುಡಿ, ದೀಪಕ ಗೊಡಚಿ ಹಾಗೂ ಅಕ್ಕಮಹಾದೇವಿ ಯರಗಂಬಳಿಮಠ ಇದ್ದರು.