ಕನ್ನಡಪ್ರಭ ವಾರ್ತೆ ಹಾಸನ
ನಿಜಾಮರ ಕಾಲದಲ್ಲಿ ಉರ್ದು ಭಾಷೆಯ ಏಕಸ್ವಾಮ್ಯದ ವಿರುದ್ಧ ಹೋರಾಡಿದ ಶಾಂತರಸರು ಇಂದಿಗೂ ಹೆಚ್ಚು ಪ್ರಸ್ತುತರು ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಚಲಂ ಹಾಡ್ಲಹಳ್ಳಿ ತಿಳಿಸಿದರು.ನಗರದ ಸಾಹಿತ್ಯ ಬಳಗದ ವತಿಯಿಂದ ಆಯೋಜಿಸಲಾಗಿದ್ದ ''''''''ಕಲ್ಯಾಣ ಕಿರಣ'''''''' ಶಾಂತರಸರ 101ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಸಾಪ ಮೂಲ ಉದ್ದೇಶಗಳಿಗೆ ಎಳ್ಳುನೀರು, ಶಾಂತರಸರು ಹುಟ್ಟಿ ಕನ್ನಡಕ್ಕೆ ಹೋರಾಟ ಹಾಗೂ ಅಸ್ಮಿತೆ ಕೊಟ್ಟ ಈ ನೆಲ ಇಂದು ಬರಡಾಗಿದೆ. ಈ ನಿಟ್ಟಿನಲ್ಲಿ ಕ ಸಾ ಪ ಜವಬ್ದಾರಿ ಬಹಳ ಮುಖ್ಯವಾದದ್ದು ಎಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಯಾವ ಉದ್ದೇಶಗಳಿಗಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದರೋ, ಇಂದು ಆ ತತ್ವಗಳಿಗೆ ಎಳ್ಳುನೀರು ಬಿಡಲಾಗುತ್ತಿದೆ. ಪ್ರಸ್ತುತ ಕನ್ನಡದ ಸಂಕಷ್ಟಗಳಿಗೆ ಧ್ವನಿಯಾಗದ ಪರಿಷತ್ತಿಗೆ ನಾಲಿಗೆ ಇದೆಯೇ? " ಎಂದು ಸಾಹಿತಿ ಹಾಗೂ ಪತ್ರಕರ್ತ ಚಲಂ ಹಾಡ್ಲಹಳ್ಳಿ ಖಾರವಾಗಿ ಪ್ರಶ್ನಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಕಸಾಪ ಇತ್ತೀಚೆಗೆ ಕೇವಲ ಆಚರಣೆಗಳಿಗೆ ಸೀಮಿತವಾಗುತ್ತಿದ್ದು, ಕನ್ನಡದ ಅಸ್ಮಿತೆಯ ಪ್ರಶ್ನೆಗಳು ಬಂದಾಗ ಮೌನ ವಹಿಸುತ್ತಿರುವುದನ್ನು ಖಂಡಿಸಿದರು. "ಶಾಂತರಸರಂತಹ ಧೀಮಂತ ಹೋರಾಟಗಾರರು 1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸುವ ಮೂಲಕ ವ್ಯವಸ್ಥೆಯ ವಿರುದ್ಧ ಪ್ರತಿರೋಧ ತೋರಿದ್ದರು. ಆದರೆ ಇಂದು ಸಾಹಿತ್ಯಿಕ ಸಂಘಟನೆಗಳು ಆ ಬದ್ಧತೆಯನ್ನು ಮರೆಯುತ್ತಿವೆ, " ಎಂದು ಆತಂಕ ವ್ಯಕ್ತಪಡಿಸಿದರು. ಕಸಾಪ ಮಾಜಿ ಅಧ್ಯಕ್ಷ ಬಿ.ಎನ್. ರಾಮಸ್ವಾಮಿ ಮಾತನಾಡಿ, ಸಾಹಿತ್ಯ ಮತ್ತು ಸಂಘಟನೆ ಒಂದು ನಾಣ್ಯದ ಎರಡು ಮುಖಗಳು. ಸಾಹಿತ್ಯದ ತೇರನ್ನು ಎಳೆಯಲು ಕೇವಲ ಅಧಿಕಾರವಿದ್ದರೆ ಸಾಲದು, ಮನಸ್ಸಿನಲ್ಲಿ ಕನ್ನಡದ ಆಸಕ್ತಿ ಇರಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಪಾದಕರಾದ ರವಿ ನಾಕಲಗೂಡು, ಮಹನೀಯರ ಸಾಧನೆ ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಇಂತಹ ಕಾರ್ಯಕ್ರಮಗಳು ನಡೆದಾಗ ಮಾತ್ರ ಸಂಸ್ಥೆಗಳ ಗೌರವ ಹೆಚ್ಚುತ್ತದೆ. ಅತಿ ಶೀಘ್ರದಲ್ಲಿಯೇ ಹಾಸನದ ಎಲ್ಲಾ ಹಿರಿಯ ಸಾಹಿತಿಗಳನ್ನು ಹಾಗೂ ಸಂಘಟಕರನ್ನು ಒಂದೇ ವೇದಿಕೆಗೆ ಕರೆತರುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.ಸಾಹಿತಿಗಳಾದ ಚೆನ್ನೇನಹಳ್ಳಿ ಸ್ವಾಮಿ ಮತ್ತು ಕೊಟ್ರೇಶ್ ಉಪ್ಪಾರ್ ಅವರು ಮಾತನಾಡಿ, ಶಾಂತರಸರು ಕಲ್ಯಾಣ ಕರ್ನಾಟಕದಲ್ಲಿ ಕುವೆಂಪು ಅವರಂತೆ ಸಾಹಿತ್ಯಿಕ ಕ್ರಾಂತಿ ಮಾಡಿದವರು. ಕನ್ನಡ ಗಜಲ್ ಸಾಹಿತ್ಯಕ್ಕೆ ಅಡಿಪಾಯ ಹಾಕಿದ ಅವರ ಸಾಮಾಜಿಕ ಚಿಂತನೆಗಳು ಇಂದಿನ ಕಸಪಕ್ಕೆ ಮಾದರಿಯಾಗಲಿ ಎಂದು ಆಶಿಸಿದರು.ಶಾಂತರಸರ ಮಾರ್ಗದಲ್ಲಿ ಸಾಗಲು ಸಂಕಲ್ಪ ಮಾಡಿದ ಈ ಕಾರ್ಯಕ್ರಮದಲ್ಲಿ ಸುರೇಶ್ ಗುರೂಜಿ, ಕಾರ್ಪೊರೇಟರ್ ವಾಸು, ಗೊರೂರು ಅನಂತರಾಜು, ದೇಸಾಯಿ, ಯಲಗುಂದ ಶಾಂತಕುಮಾರ್, ಹರೀಶ್ ಮಳಲಿ ಬಾ ನಂ ಲೋಕೇಶ್, ಉಪನ್ಯಾಸಕ ಪ್ರಕಾಶ್, ಬ್ಯಾಂಕ್ ಪರಮೇಶ್, ಮಹಾಂತೇಶ್, ಬಸವರಾಜ್, ಶಿಕ್ಷಕ ಸೋಮಶೇಖರ್, ಕೆ.ಟಿ. ಜಯಶ್ರೀ, ಶಿಕ್ಷಕಿ ಗಿರಿಜಾ ನಿರ್ವಾಣಿ, ಪತ್ರಕರ್ತರಾದ ರಘುನಂದನ್, ಉದಯರವಿ, ಬುವನಳ್ಳಿ ಬಾಲು ಹಾಗೂ ''''''''ದಿಟ್ಟ ಧ್ವನಿ'''''''' ದೇವರಾಜೇಗೌಡ ಅವರು ಭಾಗವಹಿಸಿ ಶಾಂತರಸರಿಗೆ ನಮನ ಸಲ್ಲಿಸಿದರು.………………….