ಸರ್ಕಾರದ ಸವಲತ್ತುಗಳ ಜೊತೆಗೆ ದಾನಿಗಳ ನೀಡುವಂತಹ ವಸ್ತುಗಳನ್ನು ಪಡೆದುಕೊಂಡು ಗ್ರಾಮೀಣ ಭಾಗದ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ ತಿಳಿಸಿದರು.
ಕನ್ನಡಪ್ರಭ ವಾರ್ತೆ, ಹನೂರು
ಸರ್ಕಾರದ ಸವಲತ್ತುಗಳ ಜೊತೆಗೆ ದಾನಿಗಳ ನೀಡುವಂತಹ ವಸ್ತುಗಳನ್ನು ಪಡೆದುಕೊಂಡು ಗ್ರಾಮೀಣ ಭಾಗದ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ ತಿಳಿಸಿದರು.ತಾಲೂಕಿನ ದಿನ್ನಳ್ಳಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ದಾನಿಗಳ ನೆರವಿನಿಂದ ಉಚಿತವಾಗಿ ಟೀ ಶರ್ಟ್ ಮತ್ತು ಪ್ಯಾಂಟ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಿ ನಂತರ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಓದು ಹಾಗೂ ಬರೆಯಲು ಬೇಕಾಗಿರುವಂತಹ ಕಲಿಕಾ ಸಾಮಗ್ರಿಗಳ ಕೊರತೆಯಿಂದಲೂ ಸಹ ಶಾಲೆ ಬಿಡುವಂತಹ ಸಂದರ್ಭ ನಾವು ನೋಡಿದ್ದೇವೆ. ಜೊತೆಗೆ ಸರ್ಕಾರ ಸಹ ಅದಕ್ಕೆ ಸಂಬಂಧಪಟ್ಟಂತೆ ಅನೇಕ ಸೌಲಭ್ಯಗಳನ್ನ ನೀಡುತ್ತಿದೆ. ಅದಕ್ಕೂ ಮಿಗಿಲಾಗಿ ದಾನಿಗಳ ನೆರವಿನಿಂದ ಮಕ್ಕಳಿಗೆ ಲೇಖನ ಸಾಮಗ್ರಿಗಳು ಹಾಗೂ ಟೀ ಶರ್ಟ್ ವಿತರಣೆ ಮಾಡಲಾಗುತ್ತಿದ್ದು ಇದರ ಸದುಪಯೋಗವನ್ನು ನಮ್ಮ ಶಾಲಾ ಮಕ್ಕಳು ಪಡೆದುಕೊಳ್ಳಬೇಕು ಜೊತೆಗೆ ಆಸಕ್ತಿದಾಯಕವಾಗಿ ಕಲಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಮಗ್ನರಾಗಬೇಕು ಎಂದರು.ಚಾಮರಾಜನಗರ ತಾಲೂಕು ಸಿದ್ದಯ್ಯನಪುರ ದೈಹಿಕ ಶಿಕ್ಷಕ ಹಾಗೂ ದಾನಿ ನಾರಾಯಣ್ ಅವರು ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಿಗೆ ನಮ್ಮ ಕೈಲಾದಷ್ಟು ಸಹಾಯವನ್ನು ನಾವು ಮಾಡುತ್ತಿದ್ದೇವೆ. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಬೇಕಾದಂತಹ ಕೆಲವೊಂದು ಸೌಲಭ್ಯಗಳನ್ನು ಹಾಗೂ ಎಲ್ಲಾ ಮಕ್ಕಳಿಗೂ ಬೇಕಾಗಿರುವಂತಹ ಒಂದಷ್ಟು ವಸ್ತುಗಳನ್ನು ಅವರ ಅಪೇಕ್ಷೆಗೆ ಅನುಗುಣವಾಗಿ ವಿತರಣೆ ಮಾಡುತ್ತಿದ್ದೇವೆ. ಅಂತೇ ನಮ್ಮ ಉರ್ದು ಶಾಲೆಯ 45 ಮಕ್ಕಳಿಗೆ ಉಚಿತವಾಗಿ ಟೀ ಶರ್ಟ್ ಪ್ಯಾಂಟ್ ಹಾಗೂ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿದ್ದೇವೆ. ಇದನ್ನು ಪಡೆದ ಮಕ್ಕಳು ತಾವು ಸಹ ಮುಂದಿನ ದಿನಗಳಲ್ಲಿ ಸಹಾಯಸ್ತ ಚಾಚುವ ಮನಸುಳ್ಳ ಉತ್ತಮ ಆದರ್ಶ ವ್ಯಕ್ತಿಗಳಾಗಿ ಸಮಾಜದಲ್ಲಿ ಬದುಕಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಉರಿದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಮಕ್ಕಳು ಪೋಷಕರು ಇತರರು ಇದ್ದರು.-----------
17ಸಿಎಚ್ಎನ್13ಹನೂರು ತಾಲೂಕಿನ ದಿನ್ನಳ್ಳಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ದಾನಿಗಳ ನೆರವಿನಿಂದ ಉಚಿತವಾಗಿ ಟೀ ಶರ್ಟ್ ಮತ್ತು ಪ್ಯಾಂಟ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಲಾಯತು.