ಕನ್ನಡಪ್ರಭ ವಾರ್ತೆ ಮೈಸೂರುನಗರದ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ವತಿಯಿಂದ ಭಾನುವಾರ ಯುವ ಸಾಧಕ ವಿದ್ವಾಂಸರನ್ನು ಸನ್ಮಾನಿಸಲಾಯಿತು.ನಗರದ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಟ್ರಸ್ಟ್ ಆಯೋಜಿಸಿದ್ದ ಯುಗಾದಿ ದಾಸ ಸಂಭ್ರಮ - 2026 ಕಾರ್ಯಕ್ರಮದಲ್ಲಿ ಯುವ ವಿದ್ವಾಂಸರಾದ ಸುವೇದಾಚಾರ್ಯ ಆದ್ಯ, ದಯಾನಿಧಿ ಆಚಾರ್ಯ ಪುರೋಹಿತ, ವ್ಯಾಸೇಂದು ಆಚಾರ್ಯ ನಾಗರಹಳ್ಳಿ ಅವರನ್ನು ಸನ್ಮಾನಿಸಲಾಯಿತು.ಆರಂಭದಲ್ಲಿ ಮೇಧಾ ಅನಿವೃದ್ಧಾಚಾರ್ಯ ಅವರ ನೇತೃತ್ವದ ಬ್ರಾಹ್ಮಣ ಮಹಿಳೆರು ಸಹಸ್ರ ಕಂಠದಲ್ಲಿ ಶ್ರೀಮಧ್ವಾದಿರಾಜರ ವಿರಚಿತ ಶ್ರೀಲಕ್ಷ್ಮೀಶೋಭಾನೆ ಪಾರಾಯಣ ನಡೆಸಿಕೊಟ್ಟರು. ಅಧಿಕ ಮಾಸದ ಪ್ರಯುಕ್ತ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳ ಅವರ ಮೈಸೂರು ದಿಗ್ವಿಜಯ 2026 ಕಾರ್ಯಕ್ರಮದ ಬಗ್ಗೆ ಬಾದರಾಯಣಾಚಾರ್ಯ, ಅನಿವೃದ್ದಾಚಾರ್ಯ ಪಾಂಡುರಂಗಿ, ಹೇಮಂತಾಚಾರ್ಯ ಗುಡಿ ಅವರಿಂದ ವಿಶೇಷ ಪ್ರವಚನ ನೀಡಿದರು.ಬಳಿಕ ಸಂಜೆ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಗಾಯಕರಾದ ವಿದುಷಿ ಸಂಧ್ಯಾ ಶ್ರೀನಾಥ್, ವಿದುಷಿ ರಚve ಶರ್ಮ, ವಿದ್ವಾನ್ ಶ್ರೀಹರ್ಷ, ವಿದುಷಿ ಅಂಜನಾ ಪಿ.ರಾವ್, ವಿದುಷಿ ಆರ್. ನಿತ್ಯಶ್ರೀ ಅವರ ಕಂಠದಿಂದ ಭಕ್ತಿಗೀತೆಗಳು, ದಾಸರ ಕೀರ್ತನೆಗಳ ಗಾಯನ ಸುಧೆ ಮೊಳಗಿತು.ಪುರುಷೋತ್ತಮ ಆಚಾರ್ಯ, ವಾಸುದೇವ ಮೂರ್ತಿ, ರಾಮ್ ಪ್ರಸಾದ್, ಸಮಿತಿ ಸಂಸ್ಥಾಪಕ ಎಸ್. ರವಿಕುಮಾರ್, ಖಜಾಂಚಿ ಜಯಶ್ರೀ, ಆದ್ಯ ಗೋವಿಂದ ಆಚಾರ್ಯ, ರಾಘವೇಂದ್ರ ಆಚಾರ್ಯ ನಾಗರಹಳ್ಳಿ, ಕಸಪಾ ಮೈಸೂರ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮೊದಲಾದವರು ಇದ್ದರು.
ಯುವ ಸಾಧಕ ವಿದ್ವಾಂಸರಿಗೆ ಅಭಿನಂದನೆ
ಅಧಿಕ ಮಾಸದ ಪ್ರಯುಕ್ತ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳ ಅವರ ಮೈಸೂರು ದಿಗ್ವಿಜಯ 2026 ಕಾರ್ಯಕ್ರಮದ ಬಗ್ಗೆ ಬಾದರಾಯಣಾಚಾರ್ಯ, ಅನಿವೃದ್ದಾಚಾರ್ಯ ಪಾಂಡುರಂಗಿ, ಹೇಮಂತಾಚಾರ್ಯ ಗುಡಿ ಅವರಿಂದ ವಿಶೇಷ ಪ್ರವಚನ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.