ಶಾರದಾಂಬೆ ರಥೋತ್ಸವ ಸಂಪನ್ನ

| Published : May 11 2025, 01:21 AM IST

ಸಾರಾಂಶ

ಚಾಮರಾಜನಗರ ತಾಲೂಕಿನ ಹೆಬ್ಬಸೂರು ಗ್ರಾಮದ ಶೃಂಗೇರಿ ಶಂಕರ ಮಠದಲ್ಲಿ ಶಾರದಾಂಬೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಚಾಮರಾಜನಗರ: ತಾಲೂಕಿನ ಹೆಬ್ಬಸೂರು ಗ್ರಾಮದ ಶೃಂಗೇರಿ ಶಂಕರ ಮಠದಲ್ಲಿ ಶಾರದಾಂಬೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಕಳೆದ ಎರಡು ದಿನಗಳಿಂದ ಮಹಾಗಣಪತಿ ಹೋಮ ಮತ್ತು ನವಚಂಡಿಕಾ ಯಾಗ ನಡೆದ ಇಂದು ರಥೋತ್ಸವದ ಅಂಗವಾಗಿ ಸುಬ್ರಹ್ಮಣ್ಯ ಹೋಮ, ರುದ್ರಹೋಮ ನಡೆದು ಬೆಳಗ್ಗೆ ೧೧ ಗಂಟೆಗೆ ಶಾರದಾಂಬೆ ಮೂತಿಯನ್ನು ರಥದ ಮೇಲೆ ಕುಳ್ಳಿರಿಸಿ ಉರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ೧.೩೦ ಕ್ಕೆ ಸ್ವಸ್ಥಾನ ಸೇರಿತು ಮಾರ್ಗದ ಉದ್ದಕ್ಕೂ ಮಜ್ಜಿಗೆ ಪಾನಕ ವಿತರಿಸಲಾಯಿತು.

ರಥೋತ್ಸವ ಮುಗಿದ ನಂತರ ಶಾರದಾಂಬೆ ಮೂರ್ತಿಗೆ ಅವಭೃತಸ್ನಾನ ಮಾಡಿಸಿ ಅನ್ನಸಂತರ್ಪಣೆ ಮಾಡಲಾಯಿತು. ಈ ರಥೋತ್ಸವದಲ್ಲಿ ಶಂಕರ ಮಠದ ಧರ್ಮಾಧಿಕಾರಿ ಶ್ರೀಧರ್ ಪ್ರಸಾದ್ ಸೇರಿದಂತೆ ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ಆಗಮಿಸಿದ್ದರು.