ಸಾರಾಂಶ
ಮಳೆ ನಡುವೆಯೂ ಸಾಂಸ್ಕೃತಿಕ, ಧಾರ್ಮಿಕ , ದಿಂಡಿ ಉತ್ಸವ
ಕನ್ನಡಪ್ರಭ ವಾರ್ತೆ, ಶೃಂಗೇರಿಒಂದೆಡೆ ಮಳೆ, ಇನ್ನೊಂದೆಡೆ ಭಕ್ತಸಾಗರವೇ ಹರಿದು ಬರುತ್ತಿರುವ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವ ದಿನದಿಂದ ದಿನಕ್ಕೆ ಮೆರುಗಿನಿಂದ ಜರುಗುತ್ತಾ ಧಾರ್ಮಿಕ,ಸಾಂಸ್ಕೃತಿಕ ಉತ್ಸವಗಳು ಮೇಳೈಸುತ್ತಿವೆ.
ಮದ್ಯಾಹ್ನದವರೆಗೂ ಬಿಸಿಲಿದ್ದರೂ ನಂತರ ಬರುವ ಗುಡುಗು ಸಿಡಿಲು ಮಳೆಯ ಆರ್ಭಟವನ್ನೂ ಲೆಕ್ಕಿಸದೇ ಅಪಾರ ಜನಸ್ತೋಮ ಧಾರ್ಮಿಕ, ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಹಬ್ಬಕ್ಕೆ ಕಳೆಕಟ್ಟುತ್ತಿದ್ದಾರೆ.ಶಾರದೆಗೆ ಬುಧವಾರ ವೀಣಾ ಶಾರದಾ ಅಲಂಕಾರ ದಲ್ಲಿ ಕಣ್ಣು, ಮನಸ್ಸನ್ನು ತುಂಬಿದ ದೇವಿ ಮಹಾ ಸರಸ್ವತಿಯಾಗಿ ಜಗತ್ತಿಗೆ ಜ್ಞಾನ ದೇವಿಯಾಗಿ ಭಕ್ತರನ್ನು ಅನುಗ್ರಹಿಸಿದಳು. ಕೈಯಲ್ಲಿ ವೀಣೆ ಹಿಡಿದು ಕುಳಿತ ಶಾರದೆ ರೂಪ ನಯನ ಮನೋಹರವಾಗಿತ್ತು. ಎಂದಿನಂತೆ ಶಾರದೆ ಸನ್ನಿದಿಯಲ್ಲಿ ಶರನ್ನವರಾತ್ರಿ ಅಂಗವಾಗಿ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು. ಮೂಲ ನಕ್ಷತ್ರ ದಿನವಾಗಿದ್ದರಿಂದ ಸರಸ್ವತಿ ಪ್ರತಿಷ್ಠೆ ನಡೆಯಿತು .ದರ್ಬಾರಿನ ನಂತರ ಸ್ವರ್ಣ ಸಿಂಹಾಸನಕ್ಕೆ ಪೂಜೆ ನೇರವೇರಿತು.
ಶ್ರೀ ಶಾರದಾಂಬಾ ದೇವಾಲಯದ ಹೊರ ಪ್ರಾಂಗಣದ ಶ್ರೀ ಶಂಕರಭಗವತ್ಪಾದಾಚಾರ್ಯ ದೇವಾಲಯ, ಶ್ರೀ ತೋರಣ ಗಣಪತಿ ದೇವಾಲಯ, ಶ್ರೀ ಸುಬ್ರಮಣ್ಯ, ಶ್ರೀ ಜನಾರ್ಧನ ಸ್ವಾಮಿ ದೇವಾಲಯ, ಶ್ರೀ ವಿದ್ಯಾಶಂಕರ ದೇವಾಲಯಗಳಲ್ಲಿ ನವರಾತ್ರಿ ವಿಶೇಷ ಪೂಜೆ ನೆರವೇರಿತು. ಜಗದ್ಗುರು ಶ್ರೀ ಮಠದ ನರಸಿಂಹವನದ ಅಧಿಷ್ಠಾನ ಮಂದಿರದಲ್ಲಿ ದರ್ಶನ ಪಡೆದರು.ಶ್ರೀಮಠದ ಅಕ್ಷರಭ್ಯಾಸ ಮಂಟಪದಲ್ಲಿ ಮೂಲ ನಕ್ಷತ್ರ ದಿನದಂದು ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಶಾರದೆ ಪ್ರತಿಷ್ಠೆ, ಪುಸ್ತಕ ಭಂಡಾರಕ್ಕೆ ವಿಶೇಷ ಪೂಜೆ ನೆರವೇರಿತು. ಶ್ರೀಮಠದ ಪ್ರವಚನಮಂದಿರದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಮಹೋತ್ಸವದಲ್ಲಿ ವಿದ್ವಾನ್ ಆರ್.ಕೆ.ಶಂಕರ್ ತಂಡದಿಂದ ವೀಣಾವಾದನ ನಡೆಯಿತು. ರಾಜಬೀದಿ ಉತ್ಸವದಲ್ಲಿ ನಂಮ್ಮಾರು ಗ್ರಾಮಸ್ಥರೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು, ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.
--ಬಾಕ್ಸ್--ರಾಜರಾಜೇಶ್ವರಿ ಅಲಂಕಾರ
ಗುರುವಾರ ಶಾರದೆಗೆ ರಾಜರಾಜೇಶ್ವರಿ ಅಲಂಕಾರ ನಡೆಯಲಿದೆ. ಸಾಂಸ್ಕೃತಿಕ ಮಹೋತ್ಸವದಲ್ಲಿ ಜ್ಞಾನೋದಯ ಶಾಲಾ ವಿದ್ಯಾರ್ಥಿಗಳಿಂದ ಹಾಡುಗಾರಿಕೆ ನಡೆಯಲಿದೆ. ರಾಜ ಬೀದಿ ಉತ್ಸವದಲ್ಲಿ ಬೇಗಾರು ಗ್ರಾಮಸ್ಥರೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು, ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ.9 ಶ್ರೀ ಚಿತ್ರ 2-ಶೃಂಗೇರಿ ನವರಾತ್ರಿಯಲ್ಲಿ ಶಾರದೆಗೆ ವೀಣಾಶಾರದಾಲಂಕಾರ ಮಾಡಲಾಗಿತ್ತು.
9 ಶ್ರೀ ಚಿತ್ರ3-ಶೃಂಗೇರಿ ಶ್ರೀಮಠದ ಒಳ ಪ್ರಾಂಗಣದಲ್ಲಿ ನವರಾತ್ರಿ ಅಂಗವಾಗಿ ದಿಂಡೀ ಉತ್ಸವ ನಡೆಯಿತು.