ಹಡಪದ ಅಪ್ಪಣ್ಣನವರ ಕಾಯಕ ನಿಷ್ಠೆ ಅನನ್ಯ. ಅವರ ವಚನ ಮನುಕುಲಕ್ಕೆ ದಾರಿದೀಪವಾಗಿದೆ. ಅವರ ಹಾದಿಯಲ್ಲಿ ಪ್ರತಿಯೊಬ್ಬರು ಬದುಕು ಕಟ್ಟಿಕೊಳ್ಳಬೇಕು

ಕುಕನೂರು: 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಕಾಯಕ ನಿಷ್ಠೆ ಮೆರೆದ ಅನುಭವಿ ಶರಣ ಹಡಪದ ಅಪ್ಪಣ್ಣನವರು ಎಂದು ತಹಸೀಲ್ದಾರ ಬಸವರಾಜ ಬೆಣ್ಣೆ ಶಿರೂರು ಹೇಳಿದರು.

ಪಟ್ಟಣದ ಹಡಪದ ಹಪ್ಪಣ್ಣನವರ ಸಮುದಾಯ ಭವನದಲ್ಲಿ ಜರುಗಿದ ನಿಜ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಪ್ಪಣ್ಣನವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಶರಣರಾಗಿದ್ದಾರೆ ಎಂದರು.

ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ಹಡಪದ ಅಪ್ಪಣ್ಣನವರ ಕಾಯಕ ನಿಷ್ಠೆ ಅನನ್ಯ. ಅವರ ವಚನ ಮನುಕುಲಕ್ಕೆ ದಾರಿದೀಪವಾಗಿದೆ. ಅವರ ಹಾದಿಯಲ್ಲಿ ಪ್ರತಿಯೊಬ್ಬರು ಬದುಕು ಕಟ್ಟಿಕೊಳ್ಳಬೇಕು ಎಂದರು.

ಈರಣ್ಣ ಯಲಬುರ್ಗಿ,ಶರಣಪ್ಪ ಹಡಪದ, ಸೋಮಣ್ಣ ಹಡಪದ, ಪರಶುರಾಮ ಹಡಪದ, ಮಲ್ಲಪ್ಪ ಚಿಕ್ಕೇನಕೊಪ್ಪ, ಕಳಕಪ್ಪ ಹಡಪದ,ಶೇಖಪ್ಪ ದ್ಯಾಂಪೂರ, ದೇವಪ್ಪ ದ್ಯಾಂಪೂರ, ಸಂತೋಷ ಹಡಪದ, ಆದಪ್ಪ ಹಡಪದ, ವಿಜಯಕುಮಾರ್ ಹಡಪದ, ಬಸವರಾಜ ಟೈಲರ್, ಶರಣಪ್ಪ ರಾಜೂರ ಹಾಗೂ ಕುಕನೂರ ಸುತ್ತ ಮುತ್ತಲಿನ ಹಡಪದ ಸಮಾಜದ ಮುಖಂಡರು, ಮಹಿಳೆಯರಿದ್ದರು.

ಸಮಾಜದ ಮುಖಂಡರು ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಶರಣ ಹಡಪದ ಅಪ್ಪಣ್ಣನವರ ವೃತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ತಹಸೀಲ್ದಾರ ಬಸವರಾಜ ಬೆಣ್ಣೆ ಶಿರೂರು ಹಾಗೂ ಸಮಾಜ ಸೇವಕ ಕಳಕಪ್ಪ ಕಂಬಳಿಗೆ ಹಡಪದ ಸಮಾಜದಿಂದ ಗೌರವಿಸಿ ಸನ್ಮಾನಿಸಲಾಯಿತು.