ಸಾರಾಂಶ
ಸಮಸಮಾಜ ನಿರ್ಮಾಣಕ್ಕಾಗಿ 12ನೇ ಶತಮಾನದಲ್ಲಿ ಹೋರಾಡಿದವರಲ್ಲಿ ಶರಣ ಹರಳಯ್ಯ ಕೂಡ ಪ್ರಮುಖರಾಗಿದ್ದರು ಎಂದು ಸಹ ಶಿಕ್ಷಕಿ ಭಾರತಿ ಪ್ರಭುದೇವ ಹೇಳಿದರು.
ಕನ್ನಡಪ್ರಭ ವಾರ್ತೆ ಭಾಲ್ಕಿ
ಸಮಸಮಾಜ ನಿರ್ಮಾಣಕ್ಕಾಗಿ 12ನೇ ಶತಮಾನದಲ್ಲಿ ಹೋರಾಡಿದವರಲ್ಲಿ ಶರಣ ಹರಳಯ್ಯ ಕೂಡ ಪ್ರಮುಖರಾಗಿದ್ದರು ಎಂದು ಸಹ ಶಿಕ್ಷಕಿ ಭಾರತಿ ಪ್ರಭುದೇವ ಹೇಳಿದರು.ಪಟ್ಟಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ತಾಲೂಕು ವಚನ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿದ್ದ ಲಿಂಗೈಕ್ಯ ಸುಶೀಲಕುಮಾರ ನಾಗಯ್ಯಸ್ವಾಮಿ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮಾನತೆಯ ಸಮಾಜದ ನಾಂದಿಗಾಗಿ ಶರಣ ಹರಳ್ಳಯನವರು ತಮ್ಮ ಬದುಕು ತ್ಯಾಗ ಮಾಡಿದ್ದರು ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಾದಿ ಶರಣರು ಮರಣವನ್ನು ಸಂಭ್ರಮಿಸಿ, ಅದನ್ನು ಹಬ್ಬವಾಗಿ ಆಚರಿಸಿದರು. ತಮ್ಮ ತತ್ವ ಸಿದ್ಧಾಂತ ಕ್ಕಾಗಿ ಎಂದಿಗೂ ರಾಜಿ ಮಾಡಿಕೊಂಡಿರಲಿಲ್ಲ ಎಂದು ತಿಳಿಸಿದರು.ಗಣಪತಿ ಪಂಚಾಳ ಉದ್ಘಾಟಿಸಿದರು. ತಾಲೂಕು ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗುಂಡಪ್ಪ ಸಂಗಮಕರ್ ಪ್ರಾಸ್ತಾವಿಕ ಮಾತನಾಡಿದರು. ಅನಿತಾ ಬೋರಾಳೆ ಬಸವ ಗುರುವಿನ ಪೂಜೆ ನೆರವೇರಿಸಿದರು. ನಾಗಶೆಟೆಪ್ಪ ಲಂಜವಾಡೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ನೀಲಕಂಠ ಚಾಪೆ, ಡಿ.ಡಿ.ಸಿಂಧೆ, ಶಿವರಾಜ ಮಲ್ಲೇಶಿ, ಜಯರಾಜ ಬಿರಾದಾರ್, ಅಶೋಕ ಭಂಡಾರಿ, ವೈ.ಆರ್. ಇಂಗಳೆ, ಮಲ್ಲಿಕಾರ್ಜುನ ಡೋಣಗಾಪುರೆ, ಸಂತೋಷ ಹಡಪದ, ರಮೇಶ ಬಾಬು ನಿರೂಪಿಸಿದರು.