ಸಾಹಿತ್ಯ ಕ್ಷೇತ್ರಕ್ಕೆ ಕಾಯಕರ ಕೊಡುಗೆ ಅನನ್ಯ: ರಾಜಶೇಖರ್

| Published : Feb 19 2024, 01:32 AM IST

ಸಾಹಿತ್ಯ ಕ್ಷೇತ್ರಕ್ಕೆ ಕಾಯಕರ ಕೊಡುಗೆ ಅನನ್ಯ: ರಾಜಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಕನ್ನಡ ಭಾಷೆಯ ಸಾಹಿತ್ಯ ಕ್ಷೇತ್ರಕ್ಕೆ ಶರಣರ ಕೊಡುಗೆ ಅನನ್ಯ ಎಂದು ಉಪನ್ಯಾಸಕ ವಿ.ಎಚ್.ರಾಜಶೇಖರ್ ಹೇಳಿದರು.

ರಾಮನಗರ: ಕನ್ನಡ ಭಾಷೆಯ ಸಾಹಿತ್ಯ ಕ್ಷೇತ್ರಕ್ಕೆ ಶರಣರ ಕೊಡುಗೆ ಅನನ್ಯ ಎಂದು ಉಪನ್ಯಾಸಕ ವಿ.ಎಚ್.ರಾಜಶೇಖರ್ ಹೇಳಿದರು. ಜಿಲ್ಲಾಡಳಿತ, ಜಿಪಂ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸಮಾಜದ ಎಲ್ಲಾ ವರ್ಗಗಳ ಜನರು ಅರ್ಥ ಮಾಡಿಕೊಳ್ಳುವ ಭಾಷೆ ಯಾವುದಾದರು ಇದ್ದರೆ ಅದು ಕನ್ನಡ ಜನರನ್ನು ಮುಖ್ಯವಾಹಿನಿಗೆ ತರಲು ಕಾಯಕ ಶರಣರ ಪ್ರಯತ್ನ ಅವಿಸ್ಮರಣೀಯ, ಅಂದು ಮಠ, ದೇವಾಲಯ, ರಾಜರ ಆಸ್ಥಾನಗಳಲ್ಲಿ ಸಾಹಿತ್ಯ ವಿರಾಜಮಾನವಾಗಿತ್ತು ಎಂದರು.

ಮಾಳವ ದೇಶದಿಂದ ಬಂದು ಬಸವಣ್ಣನವರ ಕಲ್ಯಾಣದಲ್ಲಿ ನೆಲೆಸುತ್ತಾರೆ. ಶರಣರ ಸಂಘದಲ್ಲಿ ಮಿಂದು ಧನ್ಯನಾಗುತ್ತಾರೆ. ಬಸವಣ್ಣನವರ ಅನೇಕ ವಚನಗಳಲ್ಲಿ ಡೋಹರ ಕಕ್ಕಯ್ಯನವರನ್ನು ಸ್ಮರಿಸಿದ್ದಾರೆ. ಮಾದಾರ ಚನ್ನಯ್ಯ ಮೂಲತಃ ತಮಿಳುನಾಡಿನವರು. ತಮಿಳುನಾಡಿನ ಕರಿಕಾಲ ಚೋಳನ ಲಾಯದ ಕುದುರೆಗಳಿಗೆ ಹುಲ್ಲು ಹಾಕುವ ಕಾಯಕ ಮಾಡುತ್ತಿದ್ದರು. ಶಿವನೇ ಬಂದು ಈತನ ಮನೆ ಬಾಗಿಲಿಗೆ ಅಂಬಲಿ ಸ್ವೀಕರಿಸುತ್ತಿದ್ದ ಎಂಬ ಪೌರಾಣಿಕ ಹಿನ್ನೆಲೆಯಿದ್ದು, ಈ ವಿಷಯ ತಿಳಿದ ಕರಿಕಾಲ ಚೋಳನು ಅಂಬಲಿ ಸ್ವೀಕರಿಸಿ ನಾನು ಕೃತಾರ್ಥನಾದೆ ಎನ್ನುತ್ತಾನೆ ಎಂದು ಹೇಳಿದರು.

ಉರಿಲಿಂಗ ದೇವರ ಶಿಷ್ಯನಾದ ಈತನು ಮಹಾರಾಷ್ಟ್ರದ ಗೋದಾವರಿ ನದಿ ತೀರದವರು. ಇವರ ಮೂಲ ಆಂಧ್ರಪ್ರದೇಶ. ಜೀವನ ನಿರ್ವಹಣೆಗಾಗಿ ಕಳ್ಳತನ ಮಾಡುತ್ತಿದ್ದ. ನಂತರ ಕಳ್ಳತನ ತ್ಯಜಿಸಿ ಉರಿಲಿಂಗ ದೇವರ ಶಿಷ್ಯನಾಗುತ್ತಾನೆ. ಇನ್ನು ಮಾದಾರ ಧೂಳಯ್ಯ ಕಲ್ಯಾಣದಲ್ಲಿ ಪಾದರಕ್ಷೆ ಸಿದ್ಧಪಡಿಸುವ ಕಾಯಕ ಮಾಡುತ್ತಿದ್ದು, ಶಿವನೇ ಈತನ ಮನೆ ಬಾಗಿಲಿಗೆ ಬಂದರೂ ತನ್ನ ಕಾಯಕದಲ್ಲಿ ತೊಡಗಿದ್ದನು. ಸುಮಾರು 900 ವರ್ಷಗಳ ಹಿಂದೆಯೇ ಅಂದರೆ 12ನೇ ಶತಮಾನದಲ್ಲಿ ಸಾಮಗಾರ ಹರಳಯ್ಯ ಅಂತರ್ಜಾತಿ ವಿವಾಹ ಮಾಡಿಸಿದವರು. ಪಾದರಕ್ಷೆ ಸಿದ್ಧಪಡಿಸುವುದು ಇವರ ಕಾಯಕ. ಗುರುಲಿಂಗ ಜಂಗಮರ ಸೇವೆ ಮಾಡುವುದು ಇವರಿಗೆ ಇಷ್ಟವಾದದ್ದು, ಒಮ್ಮೆ ಬಸವಣ್ಣನವರು ಎದುರು ಬಂದಾಗ ಇವರು ಶರಣಾರ್ಥಿ ಎಂದರೆ ಬಸವಣ್ಣನವರು ಶರಣು ಶರಣಾರ್ಥಿ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಆರೋಗ್ಯ ಇಲಾಖೆಯ ಡಿಎಚ್‌ಇಒ ಗಂಗಾಧರ್, ವಿವಿಧ ಸಂಘಟನೆಯ ಮುಖಂಡರುಗಳಾದ ಚೆಲುವರಾಜು, ಗುಡ್ಡೆ ವೆಂಕಟೇಶ್, ಕನಕಪುರ ಗುರು, ಕಿರಣ್, ರಾಮಕೃಷ್ಣಯ್ಯ, ಜಯಸಿಂಹ, ಪುಟ್ಟಣ್ಣ, ಹೊನ್ನಗಾನಹಳ್ಳಿ ಸಿದ್ದರಾಜು, ರಮೇಶ್, ಹರೀಶ್ ಬಾಲು, ವೆಂಕಟೇಶ್, ಶ್ರೀನಿವಾಸ್ ಉಪಸ್ಥಿತರಿದ್ದರು.13ಕೆಆರ್ ಎಂಎನ್‌ 1.ಜೆಪಿಜಿ

ರಾಮನಗರ ಜಿಲ್ಲಾಡಳಿತ, ಜಿಪಂ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ಕಾಯಕ ಶರಣರ ಜಯಂತಿ ಆಚರಿಸಲಾಯಿತು.