ಶರಣರ ತತ್ವ ಸಿದ್ಧಾಂತಗಳು ಹಾಗೂ ಅದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿಕುಮಾರ್ ತಿಳಿಸಿದರು
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಶರಣರ ತತ್ವ ಸಿದ್ಧಾಂತಗಳು ಹಾಗೂ ಅದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿಕುಮಾರ್ ತಿಳಿಸಿದರು.ನಗರದ ಕರಿನಂಜನಪುರದಲ್ಲಿರುವ ಶ್ರೀ ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿಯರ ನಿಲಯದಲ್ಲಿ ಜಿಲ್ಲಾ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುತ್ತೂರು ಶ್ರೀ ಕ್ಷೇತ್ರದ ಲಿಂಗೈಕ್ಯ ಶ್ರೀ ರಾಜೇಂದ್ರ ಸ್ವಾಮಿಗಳು ಶರಣ ಸಾಹಿತ್ಯ ಪರಿಷತ್ ಅನ್ನು ಸ್ಥಾಪನೆ ಮಾಡಿ, ಶರಣರ ವಿಚಾರ ಧಾರೆಗಳನ್ನು ತಿಳಿಸುವ ಜೊತೆಗೆ ಶರಣ ಪರಂಪರೆಯ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಿದ್ದರು.ಅವರು ಸ್ಥಾಪಿಸಿದ ಈ ಪರಿಷತ್ ರಾಜ್ಯಾದ್ಯಂತ ವಿಸ್ತರಣೆಗೊಂಡು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದೆ. ಪರಿಷತ್‌ನಿಂದ ದತ್ತಿಗಳನ್ನು ಸ್ಥಾಪನೆ ಮಾಡಿ, ಆ ಹಣದಲ್ಲಿ ಉಪನ್ಯಾಸ, ಸಾಧಕರಿಗೆ ಸನ್ಮಾನ ಮತ್ತು ಪ್ರೋತ್ಸಾಹಿಸುವ ಕೆಲಸವನ್ನು ಪರಿಷತ್ ನಿರಂತರವಾಗಿ ಈಗಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಶರಣರ ವಿಚಾರಧಾರೆಗಳು ಬದುಕಿಗೆ ಸಾರ್ಥಕವಾಗುತ್ತಿದೆ. ನುಡಿದಂತೆ ನಾಡಿದ ಶರಣರು, ವಚನಗಳ ಮೂಲಕ ಸರಿದಾರಿಯಲ್ಲಿ ನಡೆಯುವಂತೆ ಪ್ರೇರಣೆ ಕೊಟ್ಟವರು. ಅವರ ಅನುಭಾವದ ಮಾತುಗಳು, ನುಡಿಗಟ್ಟುಗಳು ಇಂದಿಗೂ ಸಹ ಹೆಚ್ಚು ಪ್ರಸ್ತುತವಾಗಿದೆ ಎಂದರು.ಸಂಸ್ಕೃತಿ ಚಿಂತಕ ಎಂ. ಶ್ರೀಕಾಂತ್ ಯುವ ಜನತೆ ಮತ್ತು ಸಂಸ್ಕೃತಿ ಕುರಿತು ಮಾತನಾಡಿ, ಬಸವಾದಿ ಶರಣರು ನಡೆದು ಬಂದ ಹಾದಿ ಮತ್ತು ರಚನೆ ಮಾಡಿದ, ವಚನಗಳು ನಮ್ಮ ಬದುಕಿನ ಪಾಠ ಅಡಗಿದೆ ಎಂಬುದನ್ನು ಎಳೆ ಎಳೆಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ವಿದ್ಯೆಯ ಜೊತೆ ಸಂಸ್ಕೃತಿಯನ್ನು ರೂಡಿಸಿಕೊಳ್ಳಬೇಕು.
ಹಿರಿಯರನ್ನು ಗೌರಿವಿಸುವ, ಗುರುಗಳನ್ನು ಪೂಜಿಸುವ ಮತ್ತು ತಂದೆ ತಾಯಿಗಳಿಗೆ ವಿದೇಯರಾಗಿ ನಡೆದುಕೊಳ್ಳುವ ಮೂಲಕ ಉತ್ತಮ ಸಂಸ್ಕೃತಿಯನ್ನು ರೂಡಿಸಿಕೊಳ್ಳಬೇಕು. ತಾವು ನಡೆದುಕೊಳ್ಳುವ ಮೂಲಕ ನಮ್ಮ ಭಾರತೀಯ ಸಂಸ್ಕೃತಿ ಪರಂಪರೆ ಮತ್ತು ಶರಣರ ಪರಂಪರೆಯನ್ನು ಹೊಂದುವುದೇ ಉತ್ತಮ ಸಂಸ್ಕೃತಿ ಬಿಂಭಿತವಾಗಿರುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮವನ್ನು ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿಲಯದ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಉದ್ಘಾಟಿಸಿ ಮಾತನಾಡಿ, ೧೨ನೇ ಶತಮಾನದದಲ್ಲಿ ಬಸವಾಧಿ ಶರಣರ ಕಾಲವಾಗಿತ್ತು. ಈ ಕಾಲಘಟ್ಟವು ಉತ್ತಮ ಸಂಸ್ಕೃತಿಯನ್ನು ಹೊಂದಿದ್ದ ಕಾಲವಾಗಿತ್ತು. ಅವರ ರಚನೆ ಮಾಡಿದ ವಚನಗಳು ಸ್ವಅನುಭವವನ್ನು ಹೊಂದಿದ್ದ ಬದುಕಿಗೆ ಅದರ್ಶವನ್ನು ತಂದುಕೊಡುವಂತಗಾಗಿದೆ. ಪ್ರತಿ ದಿನ ವಚನಗಳನ್ನು ಓದುವ ಮೂಲಕ ಅದರ ಅರ್ಥವನ್ನು ತಿಳಿದುಕೊಂಡರೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ. ವಿಚಾರಲಹರಿಯು ಅಷ್ಟು ಗಟ್ಟಿತನದಿಂದ ಕೂಡಿದೆ. ವಿದ್ಯಾರ್ಥಿಗಳಾದ ನೀವು ಉತ್ತಮ ಸಂಸ್ಕೃತಿಯನ್ನು ರೂಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಬದುಕಿನಲ್ಲಿ ಸಾಧನೆ ಛಲವಿರಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗುಬ್ಬಿ ತೋಟದಪ್ಪ ಟ್ರಸ್ಟ್‌ನ ಕಾರ್ಯದರ್ಶಿ ಆರ್. ಪುಟ್ಟಮಲ್ಲಪ್ಪ, ದತ್ತಿ ದಾನಿಗಳಾದ ಎಂ. ಚಿನ್ನಸ್ವಾಮಿ, ವಿಜಯಾ ಹಾಗೂ ಕುಟುಂಬದವರು, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಎಸ್. ಲಿಂಗರಾಜು, ಕೆಂಪನಪುರ ಕೆ.ಎಂ. ಮಹದೇವಸ್ವಾಮಿ, ಮೂಡ್ನಾಕೂಡು ನಿಂಗಪ್ಪ, ರಾಮಸಮುದ್ರ ಶಿವಕುಮಾರಸ್ವಾಮಿ, ಅರ್ಕಪ್ಪ, ಕೊತ್ತಲವಾಡಿ ಮಹದೇವಸ್ವಾಮಿ, ವಾರ್ಡನ್ ದಾಕ್ಷಾಯಿಣಿ ಹಾಗೂ ವಿದ್ಯಾರ್ಥಿಗಳು ಮೊದಲಾದವರು ಇದ್ದರು.