ಶರಣರ ತತ್ವಾದರ್ಶ ಯುವ ಪೀಳಿಗೆ ಅರಿಯಲಿ: ರುದ್ರಪ್ಪ ಲಮಾಣಿ

| Published : Feb 18 2025, 12:30 AM IST

ಶರಣರ ತತ್ವಾದರ್ಶ ಯುವ ಪೀಳಿಗೆ ಅರಿಯಲಿ: ರುದ್ರಪ್ಪ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರು ೧೨ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪನೆ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದರು. ಅದರ ಪರಿಕಲ್ಪನೆ ಇಂದಿನ ಸಂಸತ್ ಆಗಿದೆ. ಶರಣರ ವಚನಗಳು ಸರ್ವಕಾಲಕ್ಕೂ ಪ್ರಸ್ತುವಾಗಿದೆ.

ಹಾವೇರಿ: ಸಮಾಜದ ಅಂಕುಡೊಂಕುಗಳನ್ನು ವಚನಗಳನ್ನು ಮೂಲಕ ತಿದ್ದಿದ ಹಾಗೂ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕಾಯಕ ಶರಣರ ತತ್ವಾದರ್ಶಗಳನ್ನು ಯುವಪೀಳಿಗೆ ತಿಳಿದುಕೊಳ್ಳಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಿಳಿಸಿದರು.ನಗರದ ಗಾಂಧಿ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಟಿಎಂಎಇಎಸ್ ಬಿಇಡಿ ಕಾಲೇಜಿನ ಸಹಯೋಗದಲ್ಲಿ ಮಹಾಪುರುಷರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ ಮತ್ತು ಉರಿಲಿಂಗ ಪೆದ್ದಿಯವರ ಕಾಯಕ ಶರಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಸವಣ್ಣನವರು ೧೨ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪನೆ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದರು. ಅದರ ಪರಿಕಲ್ಪನೆ ಇಂದಿನ ಸಂಸತ್ ಆಗಿದೆ. ಶರಣರ ವಚನಗಳು ಸರ್ವಕಾಲಕ್ಕೂ ಪ್ರಸ್ತುವಾಗಿದೆ ಎಂದರು.

ಹರಳಯ್ಯ ಪತ್ರಿಕೆ ಸಂಪಾದಕ ಡಾ. ಮಾರ್ಕಂಡೇಯ ದೊಡ್ಡಮನಿ ಹಾಗೂ ಚನ್ನಪ್ಪ ಕುನ್ನೂರ ಪಪೂ ಕಾಲೇಜು ಪ್ರಾಂಶುಪಾಲ ನಾಗರಾಜ ದ್ಯಾಮನಕೊಪ್ಪ ಅವರು ಕಾಯಕ ಶರಣರ ಬದುಕಿನ ಕುರಿತು ಉಪನ್ಯಾಸ ನೀಡಿದರು. ಹೊಸಮಠದ ಬಸವಶಾಂತಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜು ಸಾತೇನಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್., ತಹಸೀಲ್ದಾರ್ ಶರಣಮ್ಮ, ಟಿಎಂಎಇಎಸ್ ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ. ಬಸನಗೌಡ್ರ, ಬೆಂಗಳೂರು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ, ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ(ಚಮ್ಮಾರ)ಸಂಘದ ಅಧ್ಯಕ್ಷ ಜಗದೀಶ ಬೆಟಗೇರಿ, ಜಿಲ್ಲಾ ಡೋಹರ ಕಕ್ಕಯ್ಯ ಸಮಾಜ ಅಧ್ಯಕ್ಷ ಚಂದ್ರಪ್ಪ ಶೇರಖಾನಿ, ಜಿಲ್ಲಾ ಮಚಿಗಾರ ಸಮಾಜದ ಅಧ್ಯಕ್ಷ ಉಮೇಶ ನರಗುಂದ, ಹಾವೇರಿ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ ಇತರರು ಉಪಸ್ಥಿತರಿದ್ದರು. ಗುರು ಎಸ್. ಛಲವಾದಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಸ್ವಾಗತಿಸಿದರು.20ರಂದು ದೇವರಹೊಸಪೇಟೆಯಲ್ಲಿ ನಾಟಕ ಪ್ರದರ್ಶನಹಾನಗಲ್ಲ: ಪಂ. ಪುಟ್ಟರಾಜ ಕವಿ ಗವಾಯಿಗಳ ಹುಟ್ಟೂರಾದ ತಾಲೂಕಿನ ದೇವರಹೊಸಪೇಟೆ ಗ್ರಾಮದಲ್ಲಿ ಏಳು ಮಕ್ಕಳ ತಾಯಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಯೋಗಿ ಪುಟ್ಟರಾಜ ಕಲಾ ಬಳಗದ ವತಿಯಿಂದ ಮಗ ಹೋದರೂ ಮಾಂಗಲ್ಯ ಬೇಕು ಎಂಬ ನಾಟಕ ಫೆ. ೨೦ರಂದು ರಾತ್ರಿ ೮ ಗಂಟೆಗೆ ಪ್ರದರ್ಶನಗೊಳ್ಳಲಿದೆ.ಪ್ರದರ್ಶನವನ್ನು ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಸಿಂಧಗಿ ಮಠದ ಶಂಭುಲಿಂಗ ಶಿವಾಚಾರ್ಯರು, ವೇ.ಮೂ. ಮುದಕಯ್ಯ ಹಿರೇಮಠ ಸ್ವಾಮಿಗಳು ಸಾನ್ನಿಧ್ಯ ವಹಿಸುವರು.ಶಾಸಕ ಶ್ರೀನಿವಾಸ ಮಾನೆ, ಜಿಪಂ ಮಾಜಿ ಸದಸ್ಯ ಪದ್ಮನಾಭ ಕುಂದಾಪುರ, ಗ್ರೇಡ್- ೨ ತಹಸೀಲ್ದಾರ್ ರವಿ ಕೊರವರ, ಪಿಎಸ್‌ಐ ಸಂಪತ್ ಆನಿಕಿವಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೇಗೌಡ್ರ, ವರುಣಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಗೀತಾ ಭೈರಣ್ಣನವರ, ಬಸಯ್ಯಶಾಸ್ತ್ರಿಗಳು ಹಿರೇಮಠ, ಶೇಕಣ್ಣ ಮಹರಾಜಪೇಟೆ, ಡಾ. ಎಚ್.ಪಿ. ವೆಂಕಟೇಶ, ಕುಮಾರಸ್ವಾಮಿ ವೆಂಕಟಾಪುರಮಠ, ಶಿವಚಲಕುಮಾರ ಸಾಲಿಮಠ, ಬಸವರಾಜ ಕೋತಂಬರಿ, ಕುಮಾರೇಶ ಕ್ಯಾಬಳ್ಳಿ, ರಾಜು ಹಳ್ಳಿ, ನಾಗರಾಜ ಕ್ಯಾಬಳ್ಳಿ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.