ಸಾರಾಂಶ
ಕನ್ನಡ ಪ್ರಭ ವಾರ್ತೆ, ಹುಲಸೂರ ಬಸವ ಕೇಂದ್ರ ಹಾಗೂ ಗುರು ಬಸವೇಶ್ವರ ಸಂಸ್ಥಾನ ಮಠದ ಸಹಯೋಗದಲ್ಲಿ ಜನವರಿ 10 ಹಾಗೂ 11 ರಂದು ಪಟ್ಟಣದ ಗುರು ಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಜರುಗಲಿರುವ ಶರಣ ಸಂಸ್ಕೃತಿ ಉತ್ಸವ ಹಾಗೂ ಪೂಜ್ಯ ಲಿಂ.ಜಗದ್ಗುರು ಬಸವಕುಮಾರ ಶಿವಯೋಗಿಗಳ 49 ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿವೆ.ಜನವರಿ 10 ರಂದು ಶುಕ್ರವಾರ ಬೆಳಗ್ಗೆ 8ಗಂಟೆಗೆ ಗುರುಮಿಠಕಲ್ ನ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳಿಂದ ಸಹಜ ಶಿವಯೋಗ, ಬೆಳಿಗ್ಗೆ 10ಕ್ಕೆ ಸಾಹಿತಿ ಹಾಗೂ ಚಿಂತಕ ಮಲ್ಲಪ್ಪ ಧಬಾಲೆ ಅವರಿಂದ ವೇದಿಕೆ ಮುಂಭಾಗದಲ್ಲಿ ಷಟಸ್ಥಲ ಧ್ವಜಾರೋಹಣ, ಬೆಳಿಗ್ಗೆ 11ಕ್ಕೆ ಕನ್ನಡ ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ವಿವಿಧ ಕಲಾತಂಡಗಗಳೊಂದಿಗೆ ಪಟ್ಟಣದ ಮುಖ್ಯ ಬಿದಿಯಿಂದ ಅಲ್ಲಮಪ್ರಭು ಶೂನ್ಯ ಪೀಠದವರೆಗೆ ಬಸವಕುಮಾರ ಶಿವಯೋಗಿಗಳ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ಜರುಗಲಿದೆ.ಮೇರವಣಿಗೆಯ ನೇತೃತ್ವ ಸಾಯಗಾಂವ ಗುರು ಬಸವೇಶ್ವರ ವಿರಕ್ತ ಮಠ ಪೀಠಾಧಿಪತಿ ಶಿವಾನಂದ ಸ್ವಾಮೀ ವಹಿಸಲಿದ್ದು, ಮೇರವಣಿಗೆ ಉದ್ಘಾಟನೆ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ನೇರವೇರಿಸಲಿದ್ದಾರೆ. ಗ್ರಾಪಂ ಅಧ್ಯಕ್ಷೆ ದೀಪಾ ರಾಣಿ ಧರ್ಮೇಂದ್ರ ಭೋಸ್ಲೆ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ ಹಾಗೂ ಗ್ರಾಪಂ ಸದಸ್ಯರು.ಮೇರವಣಿಗೆಯ ಸಮ್ಮುಖ ಜಿಪಂ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಜಿಪಂ ಮಾಜಿ ಸದಸ್ಯ ಸುಧೀರ್ ಕಾಡಾದಿ, ಗದಗಯ್ಯಾ ಮಠಪತಿ ಭಾಗವಹಿಸುವರು.ಸಂಜೆ 6 ಗಂಟೆಗೆ ಲಿಂ. ಜಗದ್ಗುರು ಬಸವಕುಮಾರ ಶಿವಯೋಗಿಗಳವರ ಪುಣ್ಯಸ್ಮರಣೋತ್ಸವ ಉದ್ಘಾಟನೆ ಸಮಾರಂಭ ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮೀಜಿ ಅವರ ಅಪ್ಪಣೆ ಮೇರೆಗೆ ಸಾನಿಧ್ಯವನ್ನು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ವಹಿಸುವರು ನೇತೃತ್ವವನ್ನು ವಿರೂಪಾಕ್ಷ ಮಹಾಸ್ವಾಮಿಗಳು ಮೂರು ಸಾವಿರ ಮಠ ಉಪ್ಪಿನ ಬೆಟಗೇರಿ, ಜಗದ್ಗುರು ಜ್ಞಾನ ಪ್ರಕಾಶ ಸ್ವಾಮಿಗಳು ಉರಿಲಿಂಗಪೆದ್ದಿ ಮಠ, ಕೊಡ್ಲಾ ಮೈಸೂರು. ಶಿವಾನಂದ ಸ್ವಾಮೀಜಿ ವಿರಕ್ತ ಮಠ ಸಾಯಗಾಂವ, ಶಾಂತವೀರ ಶಿವಾಚಾರ್ಯ ಹಾವಗಿಲಿಂಗೇಶ್ವರ ಮಠ, ಗಡಿಗೌಡಗಾಂವ, ಅಭಿನವ ಚೆನ್ನಬಸವ ಮಹಾಸ್ವಾಮಿ ಮಂಠಾಳ, ಮಲ್ಲಿಕಾರ್ಜುನ ಸ್ವಾಮಿಗಳು ಅಲ್ಲಮಪ್ರಭು ಮಠ ಜನವಾಡ ವಹಿಸುವರು.ವಿಜಯಪುರದ ಶರಣ ಸಾಹಿತಿಗಳಾದ ಜೆಎಸ್ ಪಾಟೀಲ್ ಉದ್ಘಾಟಿಸುವರು ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು ಮುಖ್ಯ ಅತಿಥಿಗಳಾಗಿ: ಜಿಲ್ಲೆಯ ಶಾಸಕರಾದ ಪ್ರಭು ಚವ್ಹಾಣ, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ಚಿಂಚೋಳಿಯ ಡಾ.ಅವಿನಾಶ ಜಾಧವ ಭಾಗವಹಿಸುವರು ಜ.11 ರ ಬೆಳಿಗ್ಗೆ 8ಕ್ಕೆ ಸಹಜ ಶಿವಯೋಗ, 11ಕ್ಕೆ ಮಕ್ಕಳ ಜಾತ್ರೆ ನಡೆಯಲಿದ್ದು ಪುಟ್ಟ ಗೌರಿ ಮದುವೆ ಧಾರಾವಾಹಿ ಕಿರುತೆರೆ ನಟಿ ರಂಜಿನಿ ರಾಘವನ ಮಕ್ಕಳ ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ.ಸಂಜೆ 6:30 ಕ್ಕೆ ಶರಣ ಸಂಸ್ಕೃತಿ ಉತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ .ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಸುಧಾ ವರ್ಗಿಸ್ ಸಮಾಜ ಸೇವಕಿ ಪಾಟ್ನಾ ಬಿಹಾರ ಅವರಿಗೆ ಬಸವ ಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ.