ಸಾರಾಂಶ
ಸುತ್ತೂರು ರಾಜೇಂದ್ರ ಶ್ರೀಗಳು ದಾಸೋಹ, ಶೈಕ್ಷಣಿಕ ಸೇವೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಶರಣರ ಸಂದೇಶಗಳು ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಡಾ.ಲೋಕೇಶ್ ಹೇಳಿದರು. ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ ಸುತ್ತೂರು ರಾಜೇಂದ್ರ ಶ್ರೀಗಳ ಜಯಂತಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸುತ್ತೂರು ರಾಜೇಂದ್ರ ಶ್ರೀಗಳು ದಾಸೋಹ, ಶೈಕ್ಷಣಿಕ ಸೇವೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಶರಣರ ಸಂದೇಶಗಳು ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಡಾ.ಲೋಕೇಶ್ ಹೇಳಿದರು.ಪಟ್ಟಣದ ಜೆಎಸ್ಎಸ್ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಆಯೋಜಿಸಿದ್ದ ಸುತ್ತೂರು ರಾಜೇಂದ್ರ ಶ್ರೀಗಳ 109ನೇ ಜಯಂತಿ ಹಾಗೂ ದತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಾಂಶುಪಾಲ ಎಚ್.ಎಸ್.ಕೊಂಗಳಪ್ಪ ಮಾತನಾಡಿ, 1916ರಲ್ಲಿ ನಂಜನಗೂಡಿನ ಕಪಿಲಾ ತೀರದ ಸುತ್ತೂರಿನಲ್ಲಿ ರಾಜೇಂದ್ರ ಶ್ರೀಗಳು ಜನಿಸಿದರು. ಅವರಂತಹ ಮಹಾನುಭಾವರ ಆದರ್ಶ ಎಲ್ಲರಿಗೂ ಪ್ರೇರಣೆ. ಶ್ರೀಗಳು ಮಕ್ಕಳೊಂದಿಗೆ ಮಕ್ಕಳಂತೆಯೇ ಇದ್ದರು ಎಂದು ಸ್ಮರಿಸಿದರು.ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ ಮಾತನಾಡಿ, ಈ ಹಿಂದಿನ ಕಾಲದ ವಿದ್ಯಾಭ್ಯಾಸಕ್ಕೂ ಈಗಿನ ವಿದ್ಯಾಭ್ಯಾಸಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಇಂದು ಡಿಜಿಟಲ್ ಯುಗವಾಗಿದೆ. ಜೆಎಸ್ಎಸ್ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ರಾಜೇಂದ್ರ ಶ್ರೀಗಳದ್ದು. ಅವರ ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ಸಾಗೋಣ ಎಂದರು.
ಈ ವೇಳೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ, ಡಾ.ಸೋಮಪ್ರಭ, ಕದಳಿ ವೇದಿಕೆಯ ಅಧ್ಯಕ್ಷೆ ರೂಪಾ ತೋಟೇಶ್, ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ವೀರಶೈವ ಮಹಾಸಭಾ ನಿರ್ದೇಶಕ ಹೊಸ ಮಾಲಂಲಗಿ ಬಸವರಾಜ್ ಇನ್ನಿತರಿದ್ದರು.