ಶ್ರೀ ಕ್ಷೇತ್ರ ಬಂಟಕಲ್ಲು: ಶರನ್ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

| Published : Oct 06 2024, 01:28 AM IST

ಸಾರಾಂಶ

ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ರಾಮಕೃಷ್ಣ ಪಾಟ್ಕರ್ (ಅಪ್ಪು ನಾಯಕ್) ಅರಸೀಕಟ್ಟೆ ಅವರನ್ನು ಶರನ್ನವರಾತ್ರಿಯ ಗೌರವ ನೀಡಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಕಾಪುಇಲ್ಲಿನ ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ಒಂಭತ್ತು ದಿನಗಳ ಪರ್ಯಂತ ಜರುಗುವ ಶರನ್ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾಪು ತಹಸೀಲ್ದಾರ್ ಡಾ. ಪ್ರತಿಭಾ ಆರ್. ಗುರುವಾರ ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ, ನವರಾತ್ರಿ ಉತ್ಸವ ಹಾಗೂ ಶಕ್ತಿ ಆರಾಧನೆಯ ಮಹತ್ವವನ್ನು ತಿಳಿಸಿ, ಭಕ್ತರಿಗೆ ಶುಭ ಹಾರೈಸಿದರು.

ಈ ಸಂದರ್ಭ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ರಾಮಕೃಷ್ಣ ಪಾಟ್ಕರ್ (ಅಪ್ಪು ನಾಯಕ್) ಅರಸೀಕಟ್ಟೆ ಅವರನ್ನು ಶರನ್ನವರಾತ್ರಿಯ ಗೌರವ ನೀಡಿ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ನರಸಿಂಗೆ ದೇವಳದ ಅಧ್ಯಕ್ಷ ಆನಂದ ನಾಯಕ್, ಶರನ್ನವರಾತ್ರಿ ಪ್ರಥಮ ದಿನದ ಸೇವಾದಾರರಾದ ಬಿ. ಪುಂಡಲೀಕ ಮರಾಠೆ- ಉಷಾ ಮರಾಠೆ ದಂಪತಿ, ರಾಜಾಪುರ ಸಾರಸ್ವತ ಸೇವಾ ವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್, ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್, ಶ್ರೀದುರ್ಗಾ ಮಹಿಳಾ ಬಳಗದ ಅಧ್ಯಕ್ಷೆ ಸರಸ್ವತಿ ಎಸ್. ಕಾಮತ್ ವೇದಿಕೆಯಲ್ಲಿದ್ದರು. ಯಕ್ಷಕಲಾ ಸಂಗಮ ನರಸಿಂಗೆ ಇವರಿಂದ ‘ಶಿವ ಪಂಚಾಕ್ಷರಿ ಮಹಿಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.