ಸಾರಾಂಶ
ಇಂದಿನಿಂದ ದೇವಿಗೆ ವೇದಘೋಷ, ದುರ್ಗಾ ಸಪ್ತಶತಿ, ಪಾರಾಯಣ ಅಭಿಷೇಕ, ವಿವಿಧ ಹೋಮ ಹವನಾದಿಗಳಾದ ನವಗ್ರಹ ಹೋಮ , ಮೃತ್ಯುಂಜಯ ಹೋಮ, ರುದ್ರ ಹೋಮ, ಶ್ರೀ ಸೂಕ್ತ ಹೋಮ, ಶ್ರೀ ಲಲಿತಾ ಹೋಮ, ಧನ್ವಂತರಿ ಶ್ರೀ ಸರಸ್ವತಿ, ಶ್ರೀ ದುರ್ಗಾ ಹೋಮ ಗಾಯತ್ರಿ ಹಾಗೂ ಚಂಡಿಕಾ ಹೋಮಗಳು ವಿಧಿವತ್ತಾಗಿ ಜರುಗಲಿವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಾಡ ಹಬ್ಬ ದಸರೆಯ ಪ್ರಯುಕ್ತ ಇಲ್ಲಿನ ನೆಹರು ನಗರದ ಶ್ರೀಶಂಕರ ಸೇವಾ ಪ್ರತಿಷ್ಠಾನದಿಂದ ಮಠದಲ್ಲಿ ನಿನ್ನೆಯಿಂದ ಶ್ರೀಶಾರದಾ ಶರನ್ನವರಾತ್ರಿ ಉತ್ಸವ ಪೂಜಾ ವಿಧಿಗಳು, ಹೋಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಧಿವತ್ತಾಗಿ ಆರಂಭಗೊಂಡವು.ಬೆಳಿಗ್ಗೆ ವೇದ ಘೋಷ, ಪೂಜಾ ಕಾರ್ಯಕ್ರಮ, ಗಣಪತಿ ಹೋಮ ಮುಂತಾದ ಲಲಿತಾ ಸಹಸ್ರನಾಮ ಇತ್ಯಾದಿ ಧಾರ್ಮಿಕ ಕಾರ್ಯಗಳು ಸಂಪನ್ನಗೊಂಡವು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ನವರಾತ್ರಿ ವಿಶೇತೆ ಬಗ್ಗೆ ಧಾರ್ಮಿಕ ಪ್ರವಚನ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಲಲಿತಾ ಗುಂಡೂರಾವ್, ವಿಮಲಾ ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು. ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಲತಾ ಕೃಷ್ಣನ್ ಪ್ರಾರ್ಥಿಸಿ ಭಾರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು.ಇಂದಿನಿಂದ ದೇವಿಗೆ ವೇದಘೋಷ, ದುರ್ಗಾ ಸಪ್ತಶತಿ, ಪಾರಾಯಣ ಅಭಿಷೇಕ, ವಿವಿಧ ಹೋಮ ಹವನಾದಿಗಳಾದ ನವಗ್ರಹ ಹೋಮ , ಮೃತ್ಯುಂಜಯ ಹೋಮ, ರುದ್ರ ಹೋಮ, ಶ್ರೀ ಸೂಕ್ತ ಹೋಮ, ಶ್ರೀ ಲಲಿತಾ ಹೋಮ, ಧನ್ವಂತರಿ ಶ್ರೀ ಸರಸ್ವತಿ, ಶ್ರೀ ದುರ್ಗಾ ಹೋಮ ಗಾಯತ್ರಿ ಹಾಗೂ ಚಂಡಿಕಾ ಹೋಮಗಳು ವಿಧಿವತ್ತಾಗಿ ಜರುಗಲಿವೆ.
ದೇವಿಗೆ ಪ್ರತಿನಿತ್ಯ ಹಂಸವಾಹಿನಿ ಅಲಂಕಾರ ಸೇರಿದಂತೆ ವೃಷಭವಾಹಿನಿ, ಮಯೂರ ವಾಹಿನಿ , ಳಿತಾ ಪರಮೇಶ್ವರಿ ,ಅನ್ನಪೂರ್ಣೇಶ್ವರಿ, ಸರಸ್ವತಿ ಅಲಂಕಾರ, ದುರ್ಗಾದೇವಿ ಅಲಂಕಾರ, ಗಜ ವಾಹಿನಿ , ಹಾಗೂ ರಾಜ ರಾಜೇಶ್ವರಿ ಅಲಂಕಾರಗಳು ನಡೆಯಲಿದ್ದು , ಪ್ರತಿ ದಿನ ಸಂಜೆ ಸಂಜೆ ವಿವಿಧ ಮಹಿಳಾ ಮಂಡಳಿಯ ಭಜನೆ, ಹಾಗೂ ಖ್ಯಾತ ಕಲಾವಿದರುಗಳಿಂದ ಭಕ್ತಿ ಸುಧಾ, ದಾಸವಾಣಿ, ಸುಗಮ ಸಂಗೀತ ಹಾಗೂ ಭರತ ನಾಟ್ಯ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ಶಂಕರ ಸೇವಾ ಪ್ರತಿಷ್ಠಾನ ದ ಅಧ್ಯಕ್ಷ ಮತ್ತು ಧರ್ಮ ದರ್ಶಿಗಳಾದ ಎಸ್.ಆನಂದ್ ತಿಳಿಸಿದ್ದಾರೆ.