ಸಾರಾಂಶ
12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರು ತಮ್ಮದೇ ಆದ ಕಾಯಕದ ಸನ್ಮಾರ್ಗವನ್ನು ಕೊಟ್ಟಿದ್ದಾರೆ. ಅವರಲ್ಲಿ ಮಡಿವಾಳ ಮಾಚಿದೇವ ಅವರು ಕೂಡ ಒಬ್ಬರು, ಅಂತಹ ಶರಣರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ಸನ್ಮಾರ್ಗಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ತಹಸೀಲ್ದಾರ್ ರವಿ ಎಸ್.ಅಂಗಡಿ ಅಭಿಪ್ರಾಯ ಪಟ್ಟರು.
ಸಿರವಾರ ಪಪಂ, ತಹಸೀಲ್ದಾರ್ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿಕನ್ನಡಪ್ರಭವಾರ್ತೆ ಸಿರವಾರ
12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರು ತಮ್ಮದೇ ಆದ ಕಾಯಕದ ಸನ್ಮಾರ್ಗವನ್ನು ಕೊಟ್ಟಿದ್ದಾರೆ. ಅವರಲ್ಲಿ ಮಡಿವಾಳ ಮಾಚಿದೇವ ಅವರು ಕೂಡ ಒಬ್ಬರು, ಅಂತಹ ಶರಣರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ಸನ್ಮಾರ್ಗಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ತಹಸೀರ್ ರವಿ ಎಸ್.ಅಂಗಡಿ ಅಭಿಪ್ರಾಯ ಪಟ್ಟರು.ಪಟ್ಟಣದ ಪಪಂ ಕಚೇರಿ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಅಂಗವಾಗಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ, ಪಪಂ ಸದಸ್ಯ ರಾಧಾಕೃಷ್ಣ ನಾಯಕ, ಸಂದೀಪ ಪಾಟೀಲ, ಹಾಜಿ ಚೌದ್ರಿ, ಮಾರ್ಕಂಡಪ್ಪ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ವೈ .ಭೂಪನಗೌಡ, ಸೂರಿ ದುರುಗಣ್ಣ ನಾಯಕ, ಹಸೇನಲಿಸಾಬ್, ಮೌಲಸಾಬ್ ವರ್ಚಸ್, ಸಮಾಜದ ಮುಖಂಡರಾದ ಹುಚ್ಚಪ್ಪ ಸೈದಾಪೂರ, ಬಸವರಾಜ ನಾಗಡದಿನ್ನಿ, ಹುಲಿಗೆಪ್ಪ ನಾಗಡದಿನ್ನಿ, ನಾಗಪ್ಪ ಹೆಗ್ಗಡದಿನ್ನಿ, ಪ್ರಕಾಶ ಮಡಿವಾಳ, ಯಲ್ಲಪ್ಪ ಮಡಿವಾಳ, ಸೇರಿದಂತೆ ಮುಖಂಡರು, ಪಟ್ಟಣ ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.